ಪರಿಸರ ಮಾಹಿತಿ ಹಾಗೂ ಸಸಿ ವಿತರಣಾ ಕಾರ್ಯಕ್ರಮ

0
75

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ) ಬೈಂದೂರ ತಾಲೂಕ್ ಪ್ರಗತಿಬಂಧು ಸ್ವಹಾಯ ಸಂಘಗಳ ಒಕ್ಕೂಟ ಕಂಬದಕೋಣೆ ವಲಯ ಇವುಗಳನ್ನು ಸಂಯುಕ್ತಾಶ್ರಯದಲ್ಲಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ತೆಂಕಬೆಟ್ಟು ಪರಿಸರ ಮಾಹಿತಿ ಹಾಗೂ ಸಸಿ ವಿತರಣಾ ಕಾರ್ಯಕ್ರಮವನ್ನು ಶ್ರೀ ಮೂಕಾಂಬಿ ದೇವಸ್ಥಾನ ಕೊಲ್ಲೂರು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನರಸಿಂಹ ಬಿ ಹಳಗೇರಿ ಉದ್ಘಾಟಿಸಿ ಮಾನವ ತನ್ನ ದುರಾಸೆಗೆ ಗಿಡಗಳನ್ನು ಕಡಿದು ಅರಣ್ಯನಾಶ ಮಾಡಿದರಿಂದ ಮಳೆಯ ಅಭಾವ ಉಂಟಾಗಿದೆ ಆದ್ದರಿಂದ ಹೆಚ್ಚು ಹೆಚ್ಚು ಗಿಡ ನೆಟ್ಟು ಪರಿಸರ ಉಳಿಸಿ ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಉಪವಲಯ ಬೈಂದೂರು ಅರಣ್ಯಾಧಿಕಾರಿ ಸದಾಶಿವ ಕೆ ಮಾತನಾಡಿ ಮರಗಿಡಗಳನ್ನು ಕಡಿಯುವುದರಿಂದ ಪರಿಸರ ನಾಶವಾಗುತ್ತಿದೆ ಓಝೋನ ಪದರ ಹಾಳಾಗುವುದರಿಂದ ಸೂರ್ಯನ ಅತಿನೇರಳೆ ಕಿರಣಗಳು ಭೂಮಿಗೆ ಬೀಳತ್ತಿದೆ ಮರಗಿಡಗಳನ್ನು ಬೆಳಸಿ ಪರಿಸರವನ್ನು ಉಳಿಸಿ ಎಂದು ತಿಳಿಹೇಳಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಯೋಜನಾಧಿಕಾರಿ ಶಶಿರೇಖಾ ಪಿ, ಪ್ರತಿಯೊಬ್ಬರು ಪರಿಸರದ ಕಾಳಜಿಯನ್ನು ವಹಿಸಬೇಕು ಮಳೆನೀರನ್ನು ಇಂಗಿಸುವ ಕಾರ್ಯದಲ್ಲಿ ನಾವೆಲ್ಲರು ಕೈ ಜೋಡಿಸಿದರೆ ಅಂತರ್ಜಲ ಮಟ್ಟವನ್ನು ಹೆಚ್ಚಿಸಬಹುದು ಗಿಡ ಮರಗಳನ್ನು ಬೆಳಸಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕ ಜಟ್ಟಪ್ಪ ಬಿ, ಶೀನಾ, ಶಶಿಕಲಾ, ಎಸ್‍ಡಿಎಂಸಿ ಅಧ್ಯಕ್ಷೆ ಸುಮಾ ಆಚಾರಿ ಉಪಸ್ಥಿತರಿದ್ದರು.
ವಲಯ ಮೇಲ್ವಿಚಾರಕ ಶ್ರೀನಿವಾಸ ಸ್ವಾಗತಿಸಿದರು, ಕೃಷಿ ಅಧಿಕಾರಿ ಮಂಜುನಾಥ ನಿರೂಪಿಸಿದರು, ಶಾಲಾ ಶಿಕ್ಷಕ ಆನಂದ ವಂದಿಸಿದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)