‘ಕಾರ್ಮಿನ್ ಲೂವಿಸ್ ಮುಳ್ಳಿಕಟ್ಟೆ’ಇವರಿಗೆ ವಲಿದ “ಸಾಧಕಿ ಪ್ರಶಸ್ತಿ”, ಉತ್ತಮ ನಾರಿ ಪ್ರಗತಿಗೆ ದಾರಿ

0
224

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (8) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ನಿವಾಸಿ”ಕಾರ್ಮಿನ್ ಲೂವಿಸ್” ಇವರು. “ಉತ್ತಮ ನಾರಿ ಪ್ರಗತಿಗೆ ದಾರಿ”ಎಂಬ ಮಾತಿನಂತೆ ಒಬ್ಬ ಹಿರಿಯ ಮಹಿಳೆಯಾಗಿ ತಮ್ಮ ಪರಿಸರದ ಇತರ ವರ್ಗದ ಬಂಧು ಬಾಂಧವರೊಂದಿಗೆ ಬೆರೆತು.ಸ್ವಸಾಹಯ ಸಂಘದ ನೆತ್ರತ್ವವನ್ನು ವಹಿಸಿ ಸಂಘವನ್ನು ಮುನ್ನೆಡೆಸುದರ ಜೊತೆಗೆಇತರ ಮಹಿಳೆಯರಿಗೆ ಮಾದರಿಯಾಗಿದ್ದಾರೆ.ಇವರು ಸರ್ವಧರ್ಮ ಪ್ರೀಯ ಮಹಿಳೆಯು ಹೌದು,ದೇವಸ್ಥಾನದ ಕಾರ್ಯಕ್ರಮ ಇರಲಿ,ಸಾಮೂಹಿಕ ಸತ್ಯನಾರಾಯಣ ಪೂಜೆ ಇರಲಿ,ಭಜನೆ ಇರಲಿ, ಯಕ್ಷಗಾನ ಕಾರ್ಯಕ್ರಮ ಇರಲಿ, ಆಸುಪಾಸಿನವರ ಮದುವೆ ಕಾರ್ಯಕ್ರಮ ಇರಲಿ, ನಾಗದೇವರ ಕಾರ್ಯಕ್ರಮ ಇರಲಿ ಇವರ ಹಾಜರಿ ಇದ್ದೆ ಇರುತ್ತದೆ.ಸ್ವಯಂ ಸೇವಕಿಯಾಗಿ ತನ್ನ ಸಂಗಡಿಗರೊಂದಿಗೆ ನಿಷ್ಠೆಯಿಂದ ಸೇವೆ ಮಾಡುವ ಕಾರ್ಮಿನ್ ಅಮ್ಮ ಎಲ್ಲರಿಗೂ ಪ್ರೀಯರು, ಎಲ್ಲರಿಗೂ ಪರಿಚಿತರು.

ಧರ್ಮಸ್ಥಳ ಸ್ವಸಹಾಯ ಸಂಘದ ಸಕ್ರಿಯ ಸದಸ್ಯೆ ಕೂಡ ಹೌದು.ಆಸು ಪಾಸಿನಲ್ಲಿ ಯಾರಾದರೂ ವಿಧಿವಶರಾದರೆ ಮರುಗುವ ಕಾರ್ಮಿನ್ ಅಮ್ಮ ಅಂತ್ಯಕ್ರಿಯೆಯ ವಿಧಿ ವಿಧಾನಗಳು ನಡೆಯುವ ವರೆಗು ಇವರು ಅಲ್ಲಿಂದ ತೆರಳುದೆ ಇಲ್ಲ. ಅಸಹಾಯಕರು, ಅರೆ ಹುಚ್ಚುರು ಮುಳ್ಳಿಕಟ್ಟೆಯ ಪರಿಸರದಲ್ಲಿ ಕಂಡು ಬಂದಾಗ ದಾದಿಯರಂತೆ ಕೆಲಸ ಮಾಡಿದ ಉದಾಹರಣೆ ಬಹಳಷ್ಟು ಇದೆ. ಪರಿಸರದಲ್ಲಿ ಉತ್ತಮ ಮನೋಭಾವದೊಂದಿಗೆ ಗುರುತಿಸಿ ಕೊಂಡಿರುವ ಕಾರ್ಮಿನ್ ಲೂಯಿಸ್”ಬಾಯಿಯಮ್ಮ” ಅಂತೆ ಪರಿಚಿತರು. ಈ ವಯಸ್ಸಿನಲ್ಲಿ ಹಂದಿ ಸಾಕಾಣಿಕೆ ಮಾಡುದರ ಮುಖಾಂತರ ಸ್ವಯಂ ಉದ್ಯೋಗ ಸಹ ಹೌದು. ಅಚಲ ಚಲಹೊಂದಿರುವ ಕಾರ್ಮಿನ್ ಲೂಯಿಸ್ ಇಡಿ ಸಮಾಜಕ್ಕೆ ಆದರ್ಶ ಮಹಿಳೆ ಎಂದರು ತಪ್ಪಾಗಲಾರದು.ಕಳೆದ ನಲವತ್ತು ವರ್ಷಗಳಿಂದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಸಮಾಜದ ಕಳಕಳಿಯ ಸೇವೆಗೆ. “ಸಂಪದ ಉಡುಪಿ”ಸಂಸ್ಥೆಯು ಕಾರ್ಮಿನ್ ಲೂಯಿಸ್ ಇವರಿಗೆ ಅಭಿನಂದಿಸಿ ಮಹಿಳಾ ಸಬಲೀಕರಣಕ್ಕೆ ದುಡಿದ ಸರ್ವಧರ್ಮ ಪ್ರೀಯ ಮಹಿಳೆಗೆ “ಸಾಧಕಿ ಪ್ರಶಸ್ತಿ” ನೀಡಿ ಗೌರವಿಸಿದೆ.

ವರದಿ: ಜಗದೀಶ ದೇವಾಡಿಗ ಮುಳ್ಳಿಕಟ್ಟೆ

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (8) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)