ಶಿರೂರು ವಲಯ ಮೀನುಗಾರರ ವಿವಿದೋದ್ದೇಶ ಸಹಕಾರಿ ಸಂಘ,ಪಡಿತರ ಸಾಮಾಗ್ರಿ ವಿತರಣೆ

0
131

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು : ಶಿರೂರು ವಲಯ ಮೀನುಗಾರರ ವಿವಿದೋದ್ದೇಶ ಸಹಕಾರಿ ಸಂಘ ಅಳ್ವೆಗದ್ದೆ ಶಿರೂರು ಇದರ ವತಿಯಿಂದ ಪಡಿತರ ಸಾಮಾಗ್ರಿ ವಿತರಣೆ ಸಮಾರಂಭ ಕಾರ್ಯಕ್ರಮ ಅಳ್ವೆಗದ್ದೆ ಶ್ರೀ ಮಹಾಗಣಪತಿ ಸಭಾಭವನದಲ್ಲಿ ನಡೆಯಿತು.

ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಪಡಿತರ ಸಾಮಾಗ್ರಿಯನ್ನು ವಿತರಿಸಿ ಮಾತನಾಡಿ ಮೀನುಗಾರರು ಮತ್ಸ್ಯಕ್ಷಾಮದ ಜೊತೆಗೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.ಸರಕಾರ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಕುರಿತು ಸಚಿವರ ಗಮನಕ್ಕೆ ತರಲಾಗಿದೆ.ಶಾಸಕರ ನಿಧಿಯಿಂದ ಕೂಡ ಮೀನುಗಾರರಿಗೆ ಅವಶ್ಯವಿರುವ ಯೋಜನೆಗಳಿಗೆ ಅನುದಾನ ನೀಡುತ್ತೇನೆ. ಮೀನುಗಾರರ ವಿವಿದೋದ್ದೇಶ ಸಹಕಾರಿ ಸಂಘದ ಮೂಲಕ ಇಲಾಖೆ ವಿವಿಧ ಸವಲತ್ತುಗಳನ್ನು ನೀಡುತ್ತದೆ.ಇದರ ಸದುಪಯೋಗ ಮೀನುಗಾರರ ಕುಟುಂಬಕ್ಕೆ ದೊರೆಯಬೇಕಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ,ಜಿ.ಪಂ ಸದಸ್ಯ ಸುರೇಶ್ ಬಟ್ವಾಡಿ, ತಾ.ಪಂ ಸದಸ್ಯ ಪುಷ್ಪರಾಜ್ ಶೆಟ್ಟಿ,ಕುಂದಾಪುರ ಮೀನುಗಾರಿಕಾ ಉಪನಿರ್ದೇಶಕ ಚಂದ್ರಶೇಖರ,ಶಿರೂರು ಗ್ರಾ.ಪಂ ಉಪಾಧ್ಯಕ್ಷ ನಾಗೇಶ್ ಮೊಗೇರ್,ಗ್ರಾ.ಪಂ ಸದಸ್ಯ ಶಂಕರ ಮೇಸ್ತ ಹಾಗೂ ಸಂಘದ ನಿರ್ದೇಶಕರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮೀನುಗಾರರಿಗೆ ಸಾಂಕೇತಿಕವಾಗಿ ಪಡಿತರ ಸಾಮಾಗ್ರಿಯನ್ನು ವಿತರಿಸಲಾಯಿತು ಹಾಗೂ ಶಾಸಕರನ್ನು, ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷರನ್ನು ಜಿ.ಪಂ ಸದಸ್ಯರನ್ನು ಹಾಗೂ ತಾ.ಪಂ ಸದಸ್ಯರನ್ನು ಸಮ್ಮಾನಿಸಲಾಯಿತು.

ಶಿರೂರು ವಲಯ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ನಾರಾಯಣ ಮಾಸ್ತಿ ಸ್ವಾಗತಿಸಿದರು.ನಿರ್ದೇಶಕ ತುಳಸಿದಾಸ್ ಮೊಗೇರ್ ಕಾರ್ಯಕ್ರಮ ನಿರ್ವಹಿಸಿದರು.ಕಾರ್ಯದರ್ಶಿ ಶಿವಾನಂದ ಮೊಗೇರ ವಂದಿಸಿದರು.

 

 

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)