ಬೈಂದೂರು ಪ್ರೆಸ್ ಕ್ಲಬ್ ಪತ್ರಿಕಾ ದಿನಾಚರಣೆ ಆಚರಣೆ, ಸಮಾಜದ ಬದಲಾವಣೆಯಲ್ಲಿ ಮಾಧ್ಯಮದ ಪಾತ್ರ ಪ್ರಮುಖವಾಗಿದೆ: ಎಸ್.ಜನಾರ್ಧನ ಮರವಂತೆ

0
65

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

 

 

ಬೈಂದೂರು : ಸಮಾಜದ ಬದಲಾವಣೆಯಲ್ಲಿ ಮಾಧ್ಯಮದ ಪಾತ್ರ ಪ್ರಮುಖವಾಗಿದೆ.ವರದಿಗಾರರು ಪ್ರತಿ ಹಂತದಲ್ಲೂ ಸವಾಲುಗಳಿಗೆ ಎದೆಯೊಡ್ಡಬೇಕಾಗುತ್ತದೆ.ಸುದ್ದಿ ಮೌಲ್ಯ, ವಸ್ತು ನಿಷ್ಟೆ ವರದಿಗಾರಿಕೆಯಿಂದ ಪತ್ರಕರ್ತರ ಗೌರವ ವೃದ್ದಿಸುತ್ತದೆ.ಆರೋಗ್ಯಕರ ಪೈಪೋಟಿ ಸಹಜ ಆದರೆ ಮಾಧ್ಯಮಗಳು ಕೆಲವು ಪಕ್ಷಗಳ ಕೆಲವು ವ್ಯಕ್ತಿಗಳ ಕಡೆ ವಾಲಿದಾಗ ಮೌಲ್ಯ ಕಳೆದುಕೊಳ್ಳುತ್ತದೆ.ಹೀಗಾಗಿ ವಸ್ತುನಿಷ್ಟೆ ಮತ್ತು ಪಾರದರ್ಶಕ ವರದಿ ಪ್ರಕಟಿಸಿದಾಗ ಜನಸಮುದಾಯ ಕೂಡ ಒಪ್ಪಿಕೊಳ್ಳುತ್ತದೆ.ಸಮಾಜದ ಪ್ರಗತಿಯಲ್ಲಿ ಮಾಧ್ಯಮವೂ ಕೂಡ ಒಂದು ಅಂಗವಾಗಿದೆ ಎಂದು ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಇದರ ವತಿಯಿಂದ ಬೈಂದೂರು ಪ್ರೆಸ್ ಕ್ಲಬ್‍ನಲ್ಲಿ ನಡೆದ ಪತ್ರಿಕಾ ದಿನಾಚರಣೆಯನ್ನು ಉದ್ದೇಶಿಸಿ ಈ ಮಾತುಗಳನ್ನಾಡಿದರು.

ಈ ಸಂದರ್ಭದಲ್ಲಿ ಪತ್ರಕರ್ತರಾದ ಅಂದುಕಾ ಎ.ಎಸ್.ಕೋಶಾಧಿಕಾರಿ ನರಸಿಂಹ ನಾಯಕ್,ಸುನೀಲ್ ಎಚ್.ಜಿ.ಬೈಂದೂರು,ಕೃಷ್ಣ ಬಿಜೂರು, ಗಿರಿ ಶಿರೂರು ಉಪಸ್ಥಿತರಿದ್ದರು.

ಕಾರ್ಯದರ್ಶಿ ಅರುಣ ಕುಮಾರ್ ಶಿರೂರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)