ದೇವಾಡಿಗ ಸಮಾಜ ಸೇವಾ ಸಂಘ “ರಿ” ತ್ರಾಸಿ-ಹೊಸಾಡು-ಗುಜ್ಜಾಡಿ ಇದರ 3ನೇ ವಾರ್ಷಿಕ ಮಹಾಸಭೆ, ವಿದ್ಯಾರ್ಥಿ ವೇತನ ಮತ್ತು ಪುಸ್ತಕ ವಿತರಣೆ ಕಾರ್ಯಕ್ರಮ

0
70

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

  

ದೇವಾಡಿಗ ಸಮಾಜ ಸೇವಾ ಸಂಘ “ರಿ” ತ್ರಾಸಿ-ಹೊಸಾಡು-ಗುಜ್ಜಾಡಿ ಇದರ 3ನೇ ವಾರ್ಷಿಕ ಮಹಾಸಭೆ, ವಿದ್ಯಾರ್ಥಿ ವೇತನ ಮತ್ತು ಪುಸ್ತಕ ವಿತರಣೆ ಕಾರ್ಯಕ್ರಮ ಶ್ರೀ ಅಣ್ಣಪ್ಪಯ್ಯ ಸಭಾಭವನ ತ್ರಾಸಿ ಯಲ್ಲಿ ನಡೆಯಿತು

ಸಭಾ ಅಧ್ಯಕ್ಷತೆಯನ್ನು ದೇವಾಡಿಗ ಸ.ಸೇ.ಸಂಘ, ತ್ರಾಸಿ-ಹೊಸಾಡು-ಗುಜ್ಜಾಡಿ ಅಧ್ಯಕ್ಷ ರಾಜು ದೇವಾಡಿಗ ತ್ರಾಸಿ ವಹಿಸಿದ್ದರು.

ಕಾರ್ಯಕ್ರಮವನ್ನು ಬೆಂಗಳೂರು ಕೈಗಾರಿಕೋದ್ಯಮಿಗಳು ರಮೇಶ ದೇವಾಡಿಗ ವಂಡ್ಸೆ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣವನ್ನು ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ ಬೈಂದೂರು ರವೀಂದ್ರ ಹೆಚ್ ದೇವಾಡಿಗ ನಾಯ್ಕನಕಟ್ಟೆ ಮಾಡಿ ಮಕ್ಕಳು ಉತ್ತಮ ನಡತೆಯನ್ನು ಮೈಗೂಡಿಸಿಕೊಂಡು ತಂದೆ ತಾಯಿಯನ್ನು ಗೌರವಿಸಬೇಕು, ಮೊಬೈಲ್ ಫೋನ್ ನಿಂದ ದೂರ ಉಳಿದು ನಿರಂತರ ಓದಿನಿಂದ ಉತ್ತಮ ಅಂಕ ಗಳಿಸಿ ತಮ್ಮ ಮುಂದಿನ ಜೀವನ ಉತ್ತಮ ರೀತಿಯಲ್ಲಿ ಸಾಗಲಿಕ್ಕೆ ವಿದ್ಯೆ ಸಹಕಾರಿಯಾಗುತ್ತದೆ ಎಂದು ಹೇಳಿದರು.

ಪುಸ್ತಕ ವಿತರಣೆಯನ್ನು:ಶ್ರೀ ನಾಗೇಶ ದೇವಾಡಿಗ,ಭಾರತ್ ನಗರ ಕೊಡಪಾಡಿ ಇವರು ವಿತರಿಸಿದ್ದರು.

ವಿಧ್ಯಾರ್ಥಿ ವೇತನವನ್ನು ಶ್ರೀಮತಿ ಶಾರದಾ ದೇವಾಡಿಗ ಮಂಜು ಡಿ.ಬಿ ಬಿಜೂರು ರವರು ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿ ಮಕ್ಕಳು ಒಳ್ಳೆ ರೀತಿಯಿಂದ ಓದಿ ಸಮಾಜದಲ್ಲಿ ಒಳ್ಳೆಯ ಹೆಸರು ಗಳಿಸಿರಿ ಎಂದು ಶುಭಹಾರೈಸಿದರು.

ಸಭಾ ಅಧ್ಯಕ್ಷತೆಯನ್ನು ರಾಜು ದೇವಾಡಿಗ ತ್ರಾಸಿ ವಹಿಸಿಕೊಂಡ ನಾವು ಸಂಘಟೀತರಾಗಿ ಬೆಳೆಯುವುದರಿಂದ ಸಮಾಜದಲ್ಲಿ ನಮ್ಮ ಇರುವಿಕೆಯನ್ನು ನಾವು ಗುರುತಿಸಿಕೊಳ್ಳಬಹುದು, ಒಗ್ಗಟ್ಟಾಗಿ ಹೋಗುವುದರಿಂದ ಎಂತ ಸಮಸ್ಯೆಯನ್ನಾದರು ನಿವಾರಿಸಿಕೊಳ್ಳಬಹುದು,ನಾವೇಲ್ಲ ಸೇರಿ ಸಂಘವನ್ನು ಬಲಪಡಿಸಿ ಸಮಾಜಕ್ಕೆ ಮಾದರಿ ಆಗುವಂತಹ ಕೆಲಸ ಮಾಡೋಣ ಎಂದು ಕರೆಕೊಟ್ಟರು.

ಮುಖ್ಯ ಅತಿಥಿಗಳಾಗಿ  ಕಂಬದಕೋಣೆ ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಗೌರಿ ದೇವಾಡಿಗ ಉಪ್ಪುಂದ, ಗುಜ್ಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ತಮ್ಮಯ್ಯ ದೇವಾಡಿಗ, ಕದಂ ದುಬೈ ಶೀನ ದೇವಾಡಿಗ ಕೊಡಪಾಡಿ, ತೇಜ ದೇವಾಡಿಗ ಕೊಡಪಾಡಿ,, ದಿನೇಶ ದೇವಾಡಿಗ ಮುಳ್ಳಿಕಟ್ಟೆ, ಪಾಂಡುರಂಗ ದೇವಾಡಿಗ ತ್ರಾಸಿ, ಇನ್ನೀತ್ತರರು ಉಪಸ್ಥಿತರಿದ್ದರು

ಸ್ವಾಗತ ಭಾಷಣ ಮತ್ತು ವರದಿ ಮಂಡನೆಯನ್ನು ಸಂಘದ ಕಾರ್ಯದರ್ಶಿ ರಾಜೇಶ್ ದೇವಾಡಿಗ ತ್ರಾಸಿ ಮಾಡಿದರು .ನಿರೂಪಣೆ ಅಶೋಕ ದೇವಾಡಿಗ ಕಂಚಗೋಡು, ಧನ್ಯವಾದವನ್ನು ಸತೀಶ ದೇವಾಡಿಗ ಕೊಡಪಾಡಿ ಇವರು ನಿರ್ವಹಿಸಿದರು.

ವರದಿ: ಜಗದೀಶ ದೇವಾಡಿಗ ಮುಳ್ಳಿಕಟ್ಟೆ

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)