ಜೆಸಿಐ ಉಪ್ಪುಂದದ ವತಿಯಿಂದ ಸೆಲ್ಯೂಟ್ ದಿ ಸೈಲೆಂಟ್ ವರ್ಕರ್ ಕಾರ್ಯಕ್ರಮ

0
117

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

 

ಜೆಸಿಐ ಉಪ್ಪುಂದ ಇದರ ವತಿಯಿಂದ ಸೆಲ್ಯೂಟ್ ದಿ ಸೈಲೆಂಟ್ ವರ್ಕರ್ ಕಾರ್ಯಕ್ರಮ ಉಪ್ಪುಂದ ಮಾತಶ್ರೀ ಸಭಾಭವನದಲ್ಲಿ ನಡೆಯಿತು.
ಉಪ್ಪುಂದ ಭಾಗದಲ್ಲಿ ಅಂಚೆ ಕಛೇರಿಯಲ್ಲಿ ಪೋಸ್ಟ್ ಮಾನ್ ಆಗಿ ಕಾರ್ಯನಿರ್ವಹಿಸುತ್ತಿರುವ ಬಾಸ್ಕರ್ ಖಾರ್ವಿ ಅವರನ್ನು ಉಪ್ಪುಂದ ಜೆಸಿಐ ವತಿಯಿಮದ ಸಮ್ಮಾನಿಸಲಾಯಿತು. ಈ ಸಂದರ್ಛದಲ್ಲಿ ಜೆಸಿಐ ಉಪ್ಪುಂದದ ಪೂರ್ವಾಧ್ಯಕ್ಷ ಗೀರಿಶ್ ಶ್ಯಾನುಭೋಗ್ ಮಾತನಾಡಿ ಗ್ರಾಮಂತರ ಪ್ರದೇಶಗಳಲ್ಲಿ ಅಂಚೆ ಸೇವೆಯು ಜೀವಾಳವೆನಿಸಿದೆ ಅಂಚೆ ಸೇವಕರು ತಮ್ಮ ಕರ್ತವ್ಯವನ್ನು ನಿರಂತರ ಹಾಗೂ ನಿಶ್ಕಲ್ಮಸವಾಗಿ ನಿಭಾಯಿಸಿ ಜನರ ಸೇವೆಯನ್ನು ಮಾಡುತ್ತಿರುವ ಪೋಸ್ಟ್ ಮಾನ್ ಕಾರ್ಯ ಶ್ಲಾಘೀಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿ ಉಪ್ಪುಂದದ ಅಧ್ಯಕ್ಷ ಪುರಂದರ ಖಾರ್ವಿ ವಹಿಸಿದ್ದರು.

ಈ ಸಂದರ್ಭದಲ್ಲಿ ಪೂರ್ವಾಧ್ಯಕ್ಷ ಯು ಪ್ರಕಾಶ್ ಭಟ್, ಜಿ ಸುಬ್ರಹ್ಮಣ್ಯ, ಮಂಗೇಶ್ ಶ್ಯಾನುಭೋಗ್, ಜೆಸಿರೇಟ್ ಅಧ್ಯಕ್ಷೆ ಸಂಗೀತಾ ಪುರಂದರ ಖಾರ್ವಿ, ಕಾರ್ಯದರ್ಶಿ ದೇವರಾಯ ದೇವಾಡಿಗ ಉಪಸ್ಥಿತರಿದ್ದರು.

ಗುರುರಾಜ್ ಶೆಟ್ಟಿ ಸ್ವಾಗತಿಸಿ, ಖಜಾಂಚಿ ಪ್ರದೀಪ್ ಶೆಟ್ಟಿ ಕಾರೆಕಟ್ಟೆ ನಿರೂಪಿಸಿದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)