ಮರವಂತೆ : ಸ್ಥಳೀಯರಿಂದಲೇ ಕಡಲ್ಕೋರೆತ ತಡೆ ಯತ್ನ!, ಮನವಿಗೆ ಸರಕಾರ, ಇಲಾಖೆಯ ನೀರಸ ಪ್ರತಿಕ್ರಯೆ

0
405

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)

     

ಉಪ್ಪುಂದ : ಮರವಂತೆಯಲ್ಲಿ ನಿರ್ಮಾಣ ಹಂತದಲ್ಲಿರುವ ಬಂದರು ತೀರ ಪ್ರದೇಶದಲ್ಲಿ ಕಡಲ್ಕೊರೆತ ಸಂಭವಿಸುತ್ತಿದ್ದು ತೀರ ನಿವಾಸಿಗಳು ಆತಂಕದಲ್ಲೇ ದಿನದೂಡುವಂತಾಗಿದೆ.

ಕಳೆದ ಮಳೆಗಾದಲ್ಲಿ ಉಂಟಾಗಿದ್ದ ಕಡಲ್ಕೊರೆತ ಬೇಸಿಗೆಯಲ್ಲೂ ಕಂಡುಬಂದಿದೆ. ಇದೀಗ ಮಳೆಗಾಲದ ಆರಂಭವಾಗುತ್ತಿದ್ದಂತೆ ಕಡಲ್ಕೊರೆತ ತೀವ್ರ ಸ್ವರೂಪ ತಾಳಿದೆ. ತೀರ ಪ್ರದೇಶದ ರಸ್ತೆ, ಮನೆ, ತೆಂಗಿನ ಮರಗಳು, ಮೀನುಗಾರಿಕೆ ಶೆಡ್‍ಗಳು ಅಪಾಯ ಎದುರಿಸುತ್ತಿವೆ.

ಅಂಗಳಕ್ಕೆ ಅಲೆ ಅಪಾಯದಲ್ಲಿ ಮನೆ : ಬಹಳಷ್ಟು ನೀರಿಕ್ಷೆ ಹುಟ್ಟು ಹಾಕಿದ್ದ ಕೇರಳ ಮಾದರಿಯ ಔಟ್ ಡೋರ್ ಬಂದರು ಕಾಮಗಾರಿ ಅಪೂರ್ಣಗೊಂಡಿದೆ. ಉತ್ತರ ಹಾಗೂ ದಕ್ಷಿಣದ ತಡೆಗೋಡೆಯ ಮಧ್ಯ ಭಾಗದಲ್ಲಿ ಗಾಳಿಯ ಒತ್ತಡ ಅಧಿಕಗೊಂಡು ಕಡಲಿನ ಆರ್ಭಟ ಹೆಚ್ಚುತ್ತಿದೆ. ಇದರಿಂದಾಗಿ ಕಳೆದ ಮಳೆಗಾಲದಿಂದ ಬುದ್ದಿವಂತರ ಮನೆ ಮಂಜುನಾಥ, ಬಬ್ಬರ್ಯ ಕೋಡಿ ಮನೆ ರಾಮಚಂದ್ರ, ದೇವಿ, ಸುಬ್ರಹ್ಮಣ್ಯ, ಅಣ್ಣಪ್ಪ, ಸುಕ್ರ ಇವರ ಮನೆಯ ಅಂಗಳಕ್ಕೆ ನೀರು ನುಗ್ಗುತ್ತಿದೆ. ಮನೆ ಮಂದಿ ಅಪಾಯದಲ್ಲೇ ಜೀವನ ಕಳೆಯುವಂತ್ತಾಗಿದೆ.

ಭರವಸೆಯಲ್ಲೇ ಉಳಿದ ಜಾಗದ ವ್ಯವಸ್ಥೆ : ಕಳೆದ ಬಾರಿ ಸಮುದ್ರದ ವಿಕೋಪಕ್ಕೆ ತುತ್ತಾದ 6 ಮೀನುಗಾರರ ಕುಟುಂಬದ ಮನೆಗಳು ಸಂಪೂರ್ಣ ಜಖಂಗೊಂಡಿರುತ್ತದೆ. ಸ್ಥಳಕಾಗಮಿಸಿದ ಮೀನುಗಾರಿಕಾ ಸಚಿವ ವೆಂಕಟರಮಣ ನಾಡ ಗೌಡ ಸ್ಥಳದಲ್ಲೇ ಜಿಲ್ಲಾಧಿಕಾರಿಗೆ ಪೋನ್ ಮೂಲಕ ಸಂಪರ್ಕಿಸಿ ಪರ್ಯಾಯ ಜಾಗ ನೀಡಲು ಕ್ರಮಕೈಗೊಳ್ಳುವಂತೆ ಸೂಚಿಸಿ ಭರವಸೆ ನೀಡಿದರು. ಮರವಂತೆಯ ಗಾಂ„ನಗರದ ಸರ್ವೆ ನಂಬ್ರ 57ಎ ನಲ್ಲಿ ಪಂಚಾಯತ್ ಜಾಗ ಇದೆ. ಇದನ್ನು ನೀಡುವ ಭರವಸೆ ಭರವಸೆಯಲ್ಲೇ ಉಳಿದಿದೆ.

ಮರಳು ಚೀಲದ ತಡೆಗೋಡೆ : ಸುಮಾರು 400ಮೀ. ಉದ್ದಕ್ಕೆ ಶಾಶ್ವತ ತಡೆಗೋಡೆ ನಿರ್ಮಿಸಲಾಗಿದೆ. ಸಮುದ್ರದ ರೌದ್ರನರ್ತನಕ್ಕೆ ಕಲ್ಲುಗಳು ಕಡಲಿಗೆ ಆಹುತಿಯಾಗುತ್ತಿದೆ. ಅಲೆಗಳು ಈ ಭಾರಿ ತಡೆಗೋಡೆಯನ್ನು ಮೀರಿ ರಸ್ತೆಗೆ ಅಪ್ಪಳಿಸುತ್ತಿದೆ. ಅಪಾಯವನ್ನು ಅರಿತ ಮೀನುಗಾರರು ಸಂಬಂಧ ಪಟ್ಟ ಇಲಾಖೆಗಳ ಮೊರೆ ಹೋದರು ಯಾವುದೇ ಪ್ರಯೋಜನ ಕಂಡಿಲ್ಲ. ಮೀನುಗಾರರೇ ಒಟ್ಟಾಗಿ ಸುಮಾರು ರೂ.10ಲಕ್ಷ ವೆಚ್ಚದಲ್ಲಿ ದೊಡ್ಡ ದೊಡ್ಡ (500-100ಕೆಜಿ ತೂಗುವ) ಚೀಲಗಳಿಗೆ ಮರಳು ತುಂಬಿಸಿ 120ಮೀ.ವರೆಗೆ ತಡೆಗೋಡೆಯ ಮೇಲೆ ಇಟ್ಟು ದೊಡ್ಡ ಅಲೆಗಳನ್ನು ತಡೆಯುವ ನಿಟ್ಟಿನಲ್ಲಿ ಮುಂದಾಗಿದ್ದಾರೆ.

ಶಾಶ್ವತ ಯೋಜನೆಗಿಲ್ಲ ಅನುದಾನ : ತಡೆಗೋಡೆ ಅವೈಜ್ಞಾನಿಕವುದರಿಂದ ಒಳ ಭಾಗದಿಂದ ಮರಳು ಕೊಚ್ಚಿ ಹೋಗುತ್ತಿದೆ. ತಡೆಗೋಡೆ ನೆಲಮಟ್ಟದಿಂದ ಸುಮಾರು 2 ಅಡಿಯಷ್ಟು ಕೆಳಗಿರುವುದರಿಂದ ಕಡಲಿನ ಅಬ್ಬರಕ್ಕೆ ನೀರು ಮೇಲೆ ಬಂದು ಹಾನಿ ಸಂಭವಿಸುತ್ತಿದೆ. 2ಮೀಟರ್‍ನಷ್ಟು ಎತ್ತರದ ವಾಲ್ ನಿರ್ಮಿಸುವ ಚಿಂತನೆ ಇದೆ. ಮೀನುಗಾರಿಕಾ ಸಹಾಯಕ ಇಂಜಿನಿಯರ್ ಸುಮಾರು ರೂ.50 ಲಕ್ಷ ಅಂದಾಜು ವೆಚ್ಚದ ಯೋಜನೆ ರೂಪಿಸಿದ್ದು ಇದಕ್ಕೆ ಅನುದಾನ ನೀಡುವಂತೆ ಸಂಬಂಧಪಟ್ಟ ಇಲಾಖೆಯವರಲ್ಲಿ ಮೀನುಗಾರರು ಮನವಿ ಮಾಡಿಕೊಳ್ಳುತ್ತಿದ್ದಾರೆ. ಇಲಾಖೆಗಳು ಅನುದಾನ ಇಲ್ಲ ಎಂದು ಹೇಳುತ್ತಾರೆ ಎಂದು ಮೀನುಗಾರ ಮುಖಂಡರು ತಿಳಿಸಿದ್ದಾರೆ.

ಅಪಾಯದಲ್ಲಿರುವ ಮೀನುಗಾರರಿಗೆ ಪರ್ಯಾಯ ಜಾಗವನ್ನು ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಮನವಿ ಮಾಡುತ್ತಿದ್ದರು ಜಾಗ ಮಂಜೂರಾಗಿಲ್ಲ. ಹೊರ ಬಂದರು ಕಾಮಗಾರಿ ಪೂರ್ಣಗೊಳಿಸಬೇಕು. ಮೀನುಗಾರರು ತಮ್ಮ ಹಣದಿಂದ ಮರಳು ತುಂಬಿದ ಚೀಲಗಳಿಂದ ತಾತ್ಕಾಲಿಕವಾದ ರಕ್ಷಣೆ ಮಾಡಿಕೊಂಡಿದ್ದಾರೆ. ಇದು ಶಾಶ್ವತವಲ್ಲ ಶಾಶ್ವತವಾದ ಯೋಜನೆಗೆ ಹಣ ಬಿಡುಗಡೆಮಾಡಿ  – ಮರವಂತೆ ಮೋಹನ ಖಾರ್ವಿ ಮೀನುಗಾರರ ಮುಂಖಂಡರು.

 

 

 

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)