ಬೈಂದೂರು : ಕಳವಾದ ಮೂರು ದನ ಪತ್ತೆ, ಸ್ಥಳಕ್ಕೆ ಶಾಸಕರ ಭೇಟಿ, ಆರೋಪಿಗಳನ್ನು ಬಂಧಿಸುವಂತೆ ಪಟ್ಟು, ಜೂನ್ 28ರಂದು ಬೃಹತ್ ಪ್ರತಿಭಟನೆ

0
65

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು : ಇಲ್ಲಿನ ಎಳಜಿತ್ ಗ್ರಾಮದಲ್ಲಿ ಕೊಟ್ಟಿಗೆಗೆ ನುಗ್ಗಿ ಕದ್ದೊಯ್ದ ಮೂರು ದನಗಳನ್ನು ಬೈಂದೂರ ಪೋಲಿಸರು ಕಂಡ್ಲೂರು ಬಳಿ ಪತ್ತೆ ಹಚ್ಚಿದ್ದಾರೆ. ಇಲ್ಲಿನ ಕಂಪೌಂಡ್ ಒಂದರಲ್ಲಿ ದನಗಳನ್ನು ಕಟ್ಟಿಹಾಕಿದ ಮಾಹಿತಿ ಮೇರೆಗೆ ದಾಳಿ ಮಾಡಿದ ಆರಕ್ಷರು ನದೀಮ್ ಎನ್ನುವವರ ಜಾಗದಿಂದ ಈ ಹಸುಗಳನ್ನು ವಶಕ್ಕೆ ಪಡೆದಿದ್ದಾರೆ.ಒಟ್ಟು ಹತ್ತಕ್ಕೂ ಅಧಿಕ ದನಗಳು ಇಲ್ಲಿದ್ದು ಅವುಗಳಲ್ಲಿ ಐದು ದನಗಳನ್ನು ಬೈಂದೂರು  ಪೋಲಿಸರು ವಶಕ್ಕೆ ಪಡೆದಿದ್ದಾರೆ. ಅವುಗಳಲ್ಲಿ ಮೂರು ದನಗಳು ಎಳಜಿತ್‍ನಲ್ಲಿ ಕಳ್ಳತನವಾದ ಗೋವುಗಳಾಗಿವೆ.ಮಂಗಳವಾರ ಎಳಜಿತ್‍ನ ದಾರು ಗೌಡ್ತಿ ಹಾಗೂ ಪಾರ್ವತಿ ಎನ್ನುವವರ ಕೊಟ್ಟಿಗೆಯಿಂದ ದನಗಳನ್ನು ಕದ್ದೊಯ್ಯಲಾಗಿತ್ತು.

ಆರೋಪಿಗಳ ಪತ್ತೆಗೆ  ಶಾಸಕರ ಆಗ್ರಹ: ದನ ಕಳವು ನಡೆದ ಸಂತ್ರಸ್ತರ ಮನೆಗಳಿಗೆ ಬೈಂದೂರು ಶಾಸಕ ಬಿ.ಎಮ್ ಸುಕುಮಾರ ಶೆಟ್ಟಿ ಬೇಟಿ ನೀಡಿದರು.ಈ ಸಂಧರ್ಭದಲ್ಲಿ ಮಾತನಾಡಿದ ಅವರು ಈ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ.ಆರಕ್ಷಕ ಇಲಾಖೆ ಎಷ್ಟೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳತ್ತೆವೆ ಎಂದರು ಸಹ ಕಳ್ಳತನ ಪ್ರಕರಣ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ಮರಳು ದಂಧೆಕೋರರು ಕಂಡ್ಲೂರು ಠಾಣೆಗೆ ಕಲ್ಲು ಹೊಡೆದ ಘಟನೆ, ಗುಲ್ವಾಡಿಯಲ್ಲಿ ಗೋ ಕಳ್ಳರು ಪೋಲೀಸರ ಮೇಲೆ ಹಲ್ಲೆ ನಡೆಸಿದ ಘಟನೆ ಎಲ್ಲಾ ಆರೋಪಿಗಳು ಜಾಮೀನು ಪಡೆದಿದ್ದಾರೆ. ಮತ್ತೆ ಮತ್ತೆ ಘಟನೆ ಮರುಕಳಿಸುತ್ತಿದೆ. ಹೀಗಾಗಿ ಆರಕ್ಷಕರು ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಎಂದರು.

ಬೈಂದೂರು ವ್ಯಾಪ್ತಿಯಲ್ಲಿ ಹಲವು ಬಾರಿ ಈ ರೀತಿಯ ಕಳ್ಳತನ ಪ್ರಕರಣ ನಡೆದಿದೆ.ದನಗಳನ್ನು ವಶ ಪಡಿಸಿಕೊಂಡ ವೇಗದಷ್ಟೆ ಆರೋಪಿಗಳನ್ನು ಪತ್ತೆ ಹಚ್ಚಬೇಕು. ಮೂರು ದನಗಳು ಮಾತ್ರ ಪತ್ತೆಯಾಗಿದೆ. ಈ ರೀತಿಯ ಗೋ ಕಳ್ಳತನ ನಿಲ್ಲಬೇಕಾದರೆ ಮೊದಲು ಆರೋಪಿಗಳಿನ್ನು ಬಂಧಿಸಬೇಕು. ಹಿಂದು ಸಂಘಟನೆಗಳು ಹೋರಾಟ ಮಾಡುವ ಸಿದ್ದತೆ ನಡೆಸಿದ ಬಳಿಕ ಚುರುಕಾಗುವ ಪೋಲಿಸರು ನೈಟ್ ಬೀಟ್, ಚೆಕ್‍ ಪೋಸ್ಟ್ ,  ಹೈವೆ ಪೆಟ್ರೋಲ್‍ಗಳನ್ನು ಸಮರ್ಥವಾಗಿ ಬಳಸಿಕೊಂಡಿಲ್ಲ.ಈ ಹಿಂದೆ ಕೂಡ ಸಂಘಟನೆ ವತಿಯಿಂದ ಮನವಿ ನೀಡಿದ್ದೆವೆ. ಬೈಂದೂರು ಭಾಗದಲ್ಲಿ ಇಷ್ಟೆಲ್ಲಾ ಗಂಭೀರ ಪ್ರಕರಣಗಳು ನಡೆಯುತ್ತಿದೆ.ಜಿಲ್ಲಾ ಪೋಲಿಸ್ ವರಿಷ್ಟಾ„ಕಾರಿಗಳ ಉಪಸ್ಥಿತಿಯಲ್ಲಿ  ಪೋಲಿಸ್ ಜನಸಂಪರ್ಕ ಸಭೆ ನಡೆಯಬೇಕು. ಕಳ್ಳತನಕ್ಕೆ ಬಳಸಿದ  ವಾಹನಗಳನ್ನು ವಶಕ್ಕೆ ಪಡೆಯುವ ಮೂಲಕ ಆರಕ್ಷರ ದಕ್ಷತೆ ಮೆರೆಯಬೇಕು.ಮಾತ್ರವಲ್ಲದೆ ಬೈಂದೂರು ಭಾಗದಲ್ಲಿ ನಿರಂತರ ಗೋ ಕಳ್ಳತನ ನಡೆಯುತ್ತಿರುವುದನ್ನು ಖಂಡಿಸಿ ಜೂನ್ 28 ರಂದು ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗ ದಳ ಮುಂದಾಳತ್ವದಲ್ಲಿ ಬ್ರಹತ್ ಪ್ರತಿಭಟನೆ ನಡೆಯಲಿದೆ ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ಸುದಾಕರ ಶೆಟ್ಟಿ ನೆಲ್ಯಾಡಿ ಹೇಳಿದ್ದಾರೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)