ಶಿರೂರು -ಕುಂದಾಪುರ ರಾಷ್ಟ್ರೀಯ ಹೆದ್ದಾರಿ, ಮಳೆಗಾಲ ಆರಂಭವಾದರು  ಪೂರ್ಣಗೊಂಡಿಲ್ಲ ಚರಂಡಿ ಕಾಮಗಾರಿ, ಈ ವರ್ಷವೂ ಪ್ರಯಾಣಿಕರಿಗೆ ತಪ್ಪಿಲ್ಲವೆ ಹೆದ್ದಾರಿ ಗೋಳು…

0
127

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

   

ಬೈಂದೂರು : ಮಳೆಗಾಲ ಆರಂಭವಾಗಿದೆ.ಪೂರ್ಣತೆಯಿಲ್ಲದಿದ್ದರು ಅಲ್ಲಲ್ಲಿ ಮುಂಗಾರಿನ ಆಗಮನದ ಸೂಚನೆ ನೀಡಿದೆ.ರೈತರಿಗೆ ಕೃಷಿ ಚಟುವಟಿಕೆಯಲ್ಲಿ ಚುರುಕುಗೊಂಡರೆ ಶಿರೂರಿನಿಂದ -ಕುಂದಾಪುರ ಹೆದ್ದಾರಿ ಸವಾರರಿಗೆ ಚತುಷ್ಪಥ ಕಾಮಾಗಾರಿಯಲ್ಲಿ ಪ್ರತಿ ಮಳೆಗಾಲದಲ್ಲಿ ಮರುಕಳಿಸುವಂತೆ ಈ ವರ್ಷವು ಸಮಸ್ಯೆಗಳು ಮರುಕಳಿಸುವುದೇ ಎನ್ನುವ ಆತಂಕ ಕಾಡುತ್ತಿದೆ.

ಇನ್ನು ಪೂರ್ಣಗೊಂಡಿಲ್ಲ ಚರಂಡಿ ಕಾಮಗಾರಿಗಳು:  ರಾ.ಹೆ. ಚತುಷ್ಪಥ ಕಾಮಗಾರಿ ಬಹುತೇಕ ಸಮಸ್ಯೆ ಕಂಡುಬರುವುದು ಚರಂಡಿ ನೀರಿನ ವಿಲೇವಾರಿಯಾಗಿದೆ.ತಲ್ಲೂರು, ಹೆಮ್ಮಾಡಿ, ನಾಗೂರು, ಉಪ್ಪುಂದ,ಶಿರೂರು ಸೇರಿದಂತೆ ಬಹುತೇಕ ಕಡೆಗಳಲ್ಲಿ ರಸ್ತೆ ಪೂರ್ಣಗೊಂಡಿದೆ.ಆದರೆ ಇಕ್ಕೆಲಗಳಲ್ಲಿ ನೀರಿನ ವಿಲೇವಾರಿಗೆ ಸಮರ್ಪಕವಾದ ಕ್ರಮಕೈಗೊಂಡಿಲ್ಲ.ಹೀಗಾಗಿ ನೀರು ನದಿಗೆ ಹರಿಯಲಾಗದೆ ಹೊಲಗದ್ದೆ ,ಮನೆಗಳ ಆವರಣಗಳಿಗೆ  ನುಗ್ಗುವ ಸಾದ್ಯತೆಗಳಿವೆ.ಪ್ರತಿ ವರ್ಷವು ಈ ಸಮಸ್ಯೆ ಕಾಡುತ್ತಿದ್ದು ಮಳೆಗಾಲ ಬಂತೆಂದರೆ ಹೆದ್ದಾರಿ ಸಮೀಪದ ನಿವಾಸಿಗಳಿಗೆ ಆತಂಕದಿಂದ ದಿನ ಕಳೆಯುವಂತಾಗಿದೆ.

ತಿರುವುಗಳ ಬಗ್ಗೆ ವ್ಯವಸ್ಥೆ ಕಲ್ಪಿಸಬೇಕಾಗಿದೆ.: ಬೇಸಿಗೆಯಲ್ಲಾದರೆ ಅಷ್ಟೇನು ಸಮಸ್ಯೆ ಉಂಟಾಗಲಾರದು.ಆದರೆ ಮಳೆಗಾಲದಲ್ಲಿ ದುಪ್ಪಟ್ಟು ಸಮಸ್ಯೆ ಹೆದ್ದಾರಿಯಲ್ಲಿ ಉಂಟಾಗುತ್ತಿದೆ.ಮುಖ್ಯವಾಗಿ ಬೈಂದೂರು ಜಂಕ್ಷನ್, ಯಡ್ತರೆ ಜಂಕ್ಷನ್,ಉಪ್ಪುಂದ, ಅರೆಹೊಳೆ ಕ್ರಾಸ್ ಮುಂತಾದ ಕಡೆ ತಿರುವುಗಳನ್ನು ರಸ್ತೆ ತಡೆ ಮೂಲಕ ನಿರ್ಮಿಸಲಾಗಿದೆ.ಶಾಲಾ ಕಾಲೇಜು, ಕಛೇರಿಗಳಿಗೆ ತೆರಳುವ ಬೈಂದೂರಿನಂತ ಪ್ರದೇಶಗಳಲ್ಲಿ ಎರಡು ಮೂರು ರಸ್ತೆಗಳನ್ನು ದಾಟಿ ಹೋಗಬೇಕಾದ ಕಾರಣ ತಿರುವುಗಳು ಸಾಕಷ್ಟು ಸಮಸ್ಯೆಯಾಗಿ ಕಾಡುತ್ತಿದೆ.ಹೀಗಾಗಿ ಅಪಘಾತ ನಿಯಂತ್ರಣಗಳ ಬಗ್ಗೆ ಇಲಾಖೆ ಮತ್ತು ಕಂಪೆನಿ ಗಮನಹರಿಸಬೇಕಾಗಿದೆ.ಸುತ್ತಮುತ್ತ ಕೃಷಿ ಭೂಮಿಗಳಿಗೆ ಶೇಡಿಮಣ್ಣು ಹರಿದು ಹೋಗದಂತೆ ಗಮನಹರಿಸಬೇಕಾಗಿದೆ.

ಒತ್ತಿನೆಣೆ ಸಮಸ್ಯೆ ದೊಡ್ಡ ಸವಾಲು; ಪ್ರತಿ ಮಳೆಗಾಲದಲ್ಲೂ ಒತ್ತಿನೆಣೆ ಗುಡ್ಡ ಕಾಮಗಾರಿ ನಡೆಸುವ ಕಂಪೆನಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.ಕಳೆದ ವರ್ಷ ಅಷ್ಟೇನು ಸಮಸ್ಯೆಯಾಗಿಲ್ಲ.ಗುಡ್ಡದ ಕೆಳಭಾಗದ ಕಾಂಕ್ರಿಟ್ ಕಳಚಿ ಹೋಗಿದ್ದರು ಈ ವರ್ಷ ಅದನ್ನೆ ಸರಿಪಡಿಸಲಾಗಿದೆ.ಮಾತ್ರವಲ್ಲದೆ ಗುಡ್ಡದ ಸಮಸ್ಯೆ ಮರುಕಳಿಸದಂತೆ ಸಾಕಷ್ಟು ಕಾಮಗಾರಿ ನಡೆಸಲಾಗಿದೆ.

 

 

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)