ಬೈಂದೂರು : ವಿದ್ಯುತ್ ದರ ಏರಿಕೆ ವಿರುದ್ಧ ಸಿಪಿಎಂ ಪ್ರತಿಭಟನೆ

0
107

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

    

ಬೈಂದೂರು : ಉತ್ಪಾದನಾ ಹಾಗೂ ನಿರ್ವಹಣೆ ವೆಚ್ಚ ಹೆಚ್ಚಲವಾಗಿದ್ದ ವಿದ್ಯುತ್ ದರ ಏರಿಕೆಗೆ ಅನುಮತಿ ನೀಡಬೇಕೆಂದು ಮೆಸ್ಕಾಂಗಳು ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಮನವಿ ಮಾಡಿರುವ ಕ್ರಮವನ್ನು ಖಂಡಿಸಿ ಸಿಪಿಎಂ ಬೈಂದೂರು ವಲಯ ಸಮಿತಿ ನೇತೃತ್ವದಲ್ಲಿ ಬೈಂದೂರು ಮೆಸ್ಕಾಂ ಕಛೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಬೈಂದೂರು ಸ್ಟೇಟ್ ಬ್ಯಾಂಕ್ ಎದುರುಗಡೆಯಿಂದ ಮೆರವಣೆಗೆ ಸಾಗಿದ ಜನರು ಮೆಸ್ಕಾಂ ಎದುರು ನಡೆದ ಪ್ರತಿಭಟನೆಯನ್ನುದ್ದೇಶಿಸಿ ಬೈಂದೂರು ವಲಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ ವಿದ್ಯುತ್ ದರವನ್ನು ಚುನಾವಣೆ ಮುಗಿಯುತ್ತಿದ್ದಂತೆ ಏರಿಕೆ ಮಾಡಿರುವುದು ಖಂಡನೀಯವಾಗಿದೆ. ಜಿಲ್ಲೆಯ ಕಾರ್ಮಿಕರು ಮರಳು ಸಮಸ್ಯೆಯಿಂದ ಕಲಸವಿಲ್ಲದೇ ಆದಾಯ ಕುಂಠಿತವಾಗಿದೆ. ಇದರ ಪರಿಣಾಮ ಜಿಲ್ಲೆಯ ಎಲ್ಲಾ ವಿಭಾಗದ ಜನರ ಮೇಲೆ ಬರೆ ಎಳೆದಂತಾಗಿದೆ. ಮುಖ್ಯಮಂತ್ರಿಗಳು ಕೂಡಲೇ ಮಧ್ಯಪ್ರವೇಶಿಸಿ ಬೆಲೆ ಇಳಿಕೆಗೆ ಕ್ರಮವಹಿಸಬೇಕೆಂದು ಹೇಳಿದರು.

ವಿದ್ಯುತ್ ದರ ಹೆಚ್ಚಿಸುವ ಬದಲಾಗಿ ವಿದ್ಯುತ್ ಪ್ರಸರಣ ನಷ್ಟ ಕಡಿತಗೊಳಿಸುವುದು ವಿದ್ಯುತ್ ಕಳವು ಮತ್ತು ದುರುಪಯೋಗ ತಡೆಗಟ್ಟುವ ಕ್ರಮಗಳ ಮೂಲಕ ನಷ್ಟವನ್ನು ಸರಿದೂಗಿಸಿ ಜನರ ಮೇಲಿನ ಹೊರೆ ತಪ್ಪಿಸಬೇಕು ಎಂದು ಆಗ್ರಹಿಸಿದ ಅವರು ಮೀಟರ್‍ಗಳಲ್ಲಿರುವ ತಾಂತ್ರಿಕ ದೋಷಗಳು ಅಥವಾ ರೀಡಿಂಗ್ ದೋಷಗಳು ಅಥವಾ ರೀಡಿಂಗ್ ದೋಷಗಳಿಂದ ಜನರಿಂದ ಹೆಚ್ಚು ದರ ಇಲಾಖೆ ವಸೂಲಿ ಮಾಡುತ್ತಿರುವುದನ್ನು ನಿಲ್ಲಿಸಿ ಸರಿಪಡಿಸಲು ಒತ್ತಾಯಿಸಿದರು.

ಸಿಪಿಎಂ ಮುಖಂಡರಾದ ವೆಂಕಟೇಶ್ ಕೋಣಿ ಮಾತನಾಡಿ ನಿಗದಿತ ಶುಲ್ಕ (ಡಿಪಾಸಿಟ್ ಹೆಚ್ಚಿಸಲು) ಕೆಇಆರ್‍ಸಿ ಆಯೋಗ ಒಪ್ಪಿಗೆ ಸೂಚಿಸಿರುವುದು ಅನ್ಯಾಯವಾಗಿದೆ. ಶುಲ್ಕ ಪಾವತಿ ಈಗಾಗಲೇ ದುಬಾರಿಯಾಗಿದೆ. ವಿದ್ಯುತ್‍ಚ್ಛಕ್ತಿ ನಿಯಂತ್ರಣ ಆಯೋಗ ಸಮಿತಿಯಲ್ಲಿ ಗ್ರಾಹಕರ ಪರ ಧ್ವನಿಯೇತ್ತುವವರು ಯಾರೂ ಇಲ್ಲದ ಕಾರಣ ಗ್ರಾಹಕರ ಪ್ರಾತಿನಿಧ್ಯವಿರುವ ಹೊಸ ಸಮಿತಿ ರಚಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ನಾಗರತ್ನ ನಾಡ, ಮಂಜು ಪೂಜಾರಿ, ರಾಮ ಕಂಬದಕೋಣೆ, ವಿಜಯ ಕೋಯನಗರ, ಈಶ್ವರ, ಗಾಯತ್ರಿ ಪಡುವರಿ, ಸಂತೋಷ ನಾಯ್ಕನಕಟ್ಟೆ, ಹಾಜರಿದ್ದರು.

ಗಣೇಶ್ ತೊಂಡೆಮಕ್ಕಿ ಸ್ವಾಗತಿಸಿದರು, ಗಣೇಶ್ ಮೊಗವೀರ ವಂದಿಸಿದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)