ವಂಡ್ಸೆ ಸ.ಮಾ.ಹಿ.ಪ್ರಾ.ಶಾಲೆ ಪೋಷಕರ ಸಭೆ

0
58

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ವಂಡ್ಸೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಶೈಕ್ಷಣಿಕ ವರ್ಷದಿಂದ ಆಂಗ್ಲಮಾಧ್ಯಮ ವಿಭಾಗಕ್ಕೆ ಸರ್ಕಾರದ ಅಧಿಕೃತ ಮಾನ್ಯತೆ ದೊರಕಿದೆ. ಪ್ರಸ್ತುತ 300ಕ್ಕೂ ಅಧಿಕ ಮಕ್ಕಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದು, ಸಕಲ ವ್ಯವಸ್ಥೆಗಳಿರುವ ಶಾಲೆಯಾಗಿ ರೂಪುಗೊಳ್ಳುತ್ತಿದೆ. ಶಾಲೆಯ ಸರ್ವತೋಮುಖ ಪ್ರಗತಿಯಲ್ಲಿ ಸರ್ಕಾರದ ಜೊತೆಯಲ್ಲಿ ಮೂಕಾಂಬಿಕಾ ಚಾರಿಟೆಬಲ್ ಟ್ರಸ್ಟ್, ಎಸ್.ಡಿ.ಎಂ.ಸಿ ಹಾಗೂ ದಾನಿಗಳು ಸಹಕಾರ ನೀಡುತ್ತಿದ್ದಾರೆ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು. ಮಕ್ಕಳ ಕಲಿಕೆಯ ಬಗ್ಗೆ ಮನೆಯಲ್ಲಿ ಪೋಷಕರು ಕೂಡಾ ಹೆಚ್ಚಿನ ಗಮನ ಹರಿಸಬೇಕು ಎಂದು ವಂಡ್ಸೆ ಗ್ರಾ.ಪಂ.ಅಧ್ಯಕ್ಷ, ಮೂಕಾಂಬಿಕಾ ಚಾರಿಟೆಬಲ್ ಟ್ರಸ್ಟ್ ಕಾರ್ಯದರ್ಶಿ ಉದಯಕುಮಾರ್ ಶೆಟ್ಟಿ ಹೇಳಿದರು.

ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಂಡ್ಸೆ ಇಲ್ಲಿ ನಡೆದ ವಿದ್ಯಾರ್ಥಿ ಪೋಷಕರ ಸಭೆಯಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಮಂಜುನಾಥ ಗಾಣಿಗ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ಪೋಷಕರು ಹೆಚ್ಚಿನ ಒತ್ತನ್ನು ನೀಡಬೇಕು. ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಶಾಲಾ ವತಿಯಿಂದ ಸ್ಕೂಲ್ ಬಸ್ ಹೊಂದಿದ್ದು ಅದರ ಸದುಪಯೋಗ ಪೋಷಕರು ಪಡೆದುಕೊಳ್ಳಬೇಕು. ಅಟೋ ಇತ್ಯಾದಿ ವಾಹನಗಳಲ್ಲಿ ಇಲಾಖೆ ನಿಗದಿಪಡಿಸಿದ ಮಿತಿಗಿಂತ ಹೆಚ್ಚು ಮಕ್ಕಳು ಇರದಂತೆ ಗಮನ ಹರಿಸಿ, ಮಳೆಗಾಲ ಆದ್ದರಿಂದ ಕಾಲುಸಂಕ, ತೆರೆದ ಬಾವಿ, ಕೆರೆ, ನೀರು ತುಂಬುವ ಕಲ್ಲು ಗಣಿಗಾರಿಕೆ ಹೊಂಡಗಳ ಬಗ್ಗೆ ಜಾಗೃತೆ ಮಾಡಿ. ಮಾವಿನ ಹಣ್ಣುಗಳನ್ನು ಮಳೆಗಾಲದಲ್ಲಿ ಮಕ್ಕಳಿಗೆ ನೀಡಬೇಡಿ. ಮಳೆಗಾಲದ ಸಾಂಕ್ರಾಮಿಕ ರೋಗಗಳ ಬಗ್ಗೆ ಎಚ್ಚರ ವಹಿಸಿ. ಪೋಷಕರು ಮಕ್ಕಳ ಎದುರಲ್ಲಿ ಟಿ.ವಿ, ಮೊಬೈಲ್‍ಗಳಿಗೆ ಹೆಚ್ಚು ಒತ್ತನ್ನು ಕೊಡದೆ ಮಕ್ಕಳ ಕಲಿಕೆ, ಪಠ್ಯೇತರ ಚಟುವಟಿಕೆಗಳ ಬಗ್ಗೆ ಮಕ್ಕಳ ಜೊತೆ ಚರ್ಚಿಸಿ ಎಂದರು.

ಶಾಲಾ ಮುಖ್ಯೋಪಾಧ್ಯಾಯಿನಿ ಮೋಹಿನಿ ಬಾಯಿ ಶಾಲಾ ನಿಯಮಾವಳಿ, ಪೋಷಕರ ಕರ್ತವ್ಯ, ಜವಾಬ್ದಾರಿಗಳ ಬಗ್ಗೆ ಮಾಹಿತಿ ನೀಡಿ, ಮಕ್ಕಳ ಕಲಿಕೆಯ ಬಗ್ಗೆ ಪೋಷಕರು ಗಮನ ಹರಿಸಬೇಕು. ಹೋಮ್ ವರ್ಕ್‍ನ್ನು ಕಡ್ಡಾಯವಾಗಿ ಮಾಡಿಸಬೇಕು. ಶಾಲಾ ಕಲಿಕೆ, ಇತರ ವಿಷಯಗಳ ಬಗ್ಗೆ ಪೋಷಕರ ಸಭೆಯಲ್ಲಿ ಚರ್ಚಿಸಬೇಕು. ಶಾಲಾ ಆವರಣದ ತನಕ ಮಗುವಿನ ಜವಾಬ್ದಾರಿ ಪೋಷಕರದ್ದೆ ಆಗಿರುತ್ತದೆ. ಶಾಲಾ ಆವರಣದ ಒಳಗೆ ಮಗು ಬಂದ ನಂತರದ ಜವಾಬ್ದಾರಿ ಶಾಲೆಯದ್ದಾಗಿರುತ್ತದೆ ಎಂದ ಅವರು, ಈ ಶೈಕ್ಷಣಿಕ ಸಾಲಿನಿಂದ ಸಂಗೀತ, ಅಬಾಕಾಸ್, ನೃತ್ಯ ತರಬೇತಿ ನೀಡುವ ಬಗ್ಗೆ ಯೋಚನೆಗಳು ಇವೆ. ಈ ಬಗ್ಗೆ ಪೋಷಕರು ಗಮನ ಹರಿಸಬೇಕು ಎಂದರು.

ಮೂಕಾಂಬಿಕಾ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಕೃಷ್ಣಮೂರ್ತಿ ಮಂಜರು, ಮೂಕಾಂಬಿಕಾ ಚಾರಿಟೆಬಲ್ ಟ್ರಸ್ಟ್ ಕೋಶಾಧಿಕಾರಿ ಜಿ.ಶ್ರೀಧರ್ ಶೆಟ್ಟಿ, ಟ್ರಸ್ಟಿನ ಸದಸ್ಯರಾದ ಸೀತಾರಾಮ ಶೆಟ್ಟಿ, ಗ್ರಾ.ಪಂ.ಸದಸ್ಯ ಉದಯ ನಾಯ್ಕ್, ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷ ಚಂದ್ರ ರಾಯಪ್ಪನಡಿ, ಎಸ್.ಡಿ.ಎಂ.ಸಿ ಉಪಾಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.

ದೈ.ಶಿ.ಶಿಕ್ಷಕ ರಾಜು ಎನ್. ಕಾರ್ಯಕ್ರಮ ನಿರ್ವಹಿಸಿ, ಹಿರಿಯ ಶಿಕ್ಷಕಿ ಆಶಾ ವಂದಿಸಿದರು. ಶಿಕ್ಷಕಿಯರಾದ ನಾಗವೇಣಿ, ಸದಾಶಿವ, ರೇವತಿ, ಭಾರತಿ, ಶೈಲಶ್ರೀ, ವಿದ್ಯಾರಾಣಿ, ರೇವತಿ, ಚಿತ್ರಾ, ಪೂಜಾ ಕಾರ್ಯಕ್ರಮಕ್ಕೆ ಸಹಕರಿಸಿದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)