ಉಪ್ಪುಂದ: ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ಅಪಾರ ನಷ್ಠ

0
71

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

 

ಉಪ್ಪುಂದ : ಉಪ್ಪುಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ಚಿಕ್ಕಮ್ಮ ದೇವಾಡಿಗ ಇವರ ಮನೆಯ ಕೊಟ್ಟಿಗೆಗೆ ಬೆಂಕಿ ತಗುಲಿದ ಪರಿಣಾಮ ಅಪಾರ ನಷ್ಟ ಸಂಭವಿಸಿದ ಘಟನೆ ಜೂ.10ರಂದು ಸಂಭವಿಸಿದೆ.

ಅವರ ಮನೆಯ ಸಮೀಪದಲ್ಲಿರುವ ಕೊಟ್ಟಿಗೆಗೆ ಬೆಳಗ್ಗಿನ ಸಮಯ 11ಗಂಟೆಯ ಸುಮಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಕಟ್ಟಡದಲ್ಲಿರು ಸಾಮಾಗ್ರಿಗಳು, ಪಕ್ಕಾಸಿ, ಹಂಚುಗಳು, ಮಳೆಗಾಲಕ್ಕಾಗಿ ಕೂಡಿಟ್ಟಿದ ಕಟ್ಟಿಗೆಗಳು ಸುಟ್ಟು ಹೋಗಿವೆ.

ಮನೆಯ ಅಡಿಗೆ ಕೋಣೆಯ ಸಮೀಪದಲ್ಲೇ ಕೊಟ್ಟಿಗೆ ಇದ್ದ ಕಾರಣ ಅಡುಗೆ ಮನೆಯಲ್ಲಿ ಅನ್ನ ಮಾಡಲು ಕಟ್ಟಿಗೆ ಓಲೆಯಲ್ಲಿ ಬೆಂಕಿ ಮಾಡಿದ್ದು ಇದರ ಕಿಡಿ ಕೊಟ್ಟಿಗೆಯಲ್ಲಿದ್ದ ಒಣಗಿದ ವಸ್ತುಗಳಿಗೆ ತಗುಲಿ ಕಟ್ಟಡವನ್ನು ಆವರಿಸಿಕೊಂಡಿದೆ ಎನ್ನಲಾಗಿದೆ.

ಜಾನುವಾರುಗಳು ರಕ್ಷಣೆ : ಕ್ಷಣ ಕಾಲದಲ್ಲಿ ಬೆಂಕಿಯು ದೊಡ್ಡದಾಗಿ ಹೊತ್ತಿಕೊಂಡಿದ್ದಾಗ ಕೊಟ್ಟಿಗೆಯಲ್ಲಿ ಕಟ್ಟಿದ್ದ ಜಾನುವಾರುಗಳು ಕೂಗಿ ಕೊಂಡಿದ್ದು ಮನೆಯವರು ಸ್ಥಳೀಯರೊಂದಿಗೆ ಸೇರಿ ಜಾನುವಾರುಗಳಿಗೆ ಕಟ್ಟಿರುವ ಹಗ್ಗ ಬಿಡಿಸಿ ಯಾವುದೇ ಅಪಾಯವಾಗದಂತೆ ರಕ್ಷಣೆ ಮಾಡಿದರು. ಜಾನುವಾರುಗಳಿಗಾಗಿ ಕೂಡಿಟ್ಟಿದ್ದ ನೂರಾರು ಹುಲ್ಲಿನ ಕಟ್ಟುಗಳು (ಮೇವು) ಬೆಂಕಿಗೆ ಆಹುತಿಯಾಗಿವೆ.

ಸ್ಥಳೀಯರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು : ಸ್ಥಳಕ್ಕೆ ಗ್ರಾಮ ಪಂಚಾಯತ್ ಸದಸ್ಯ ನಾಗರಾಜ ಶೇಟ್, ಗ್ರಾಮಕರಣೀಕ ಮಂಜುನಾಥ ಪಾಟಿಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸುಮಾರು 1ಲಕ್ಷಕ್ಕೂ ಹೆಚ್ಚು ನಷ್ಠ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)