ಜೇಸಿಐ ಉಪ್ಪುಂದ ವತಿಯಿಂದ ಉಚಿತ ನೋಟ್ ಪುಸ್ತಕ ಹಾಗೂ ಕಲಿಕಾಸಾಮಗ್ರಿ ವಿತರಣೆ ಕಾರ್ಯಕ್ರಮ

0
65

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

   

ಜೇಸಿಐ ಉಪ್ಪುಂದದ ವತಿಯಿಂದ ಕಡು ಗ್ರಾಮೀಣ ಪ್ರದೇಶ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹೆಚ್ಚಿರುವ ಶಾಲೆ ವಿದ್ಯಾರ್ಥಿಗಳಿಗ ಉಚಿತ ನೋಟ್ ಪುಸ್ತಕ ಮತ್ತು ಕಲಿಕಾಸಾಮಗ್ರಿ ಸರಣಿ ಕಾರ್ಯಕ್ರಮ ಶನಿವಾರದಿಂದ ಪ್ರಾರಂಭಿಸಲಾಯಿತು.

ಮಲೆನಾಡು ತಪ್ಪಿಲಿನ ಪ್ರಾಥಮಿಕ ಶಾಲೆಗಳಾದ ಮೆಕ್ಕ, ಕಪ್ಪಾಡಿ, ಜನ್ನಾಲ್, ಬಲಗೋಣ, ಕಾನ್ಕಿ ಶಾಲೆಗೆ ಮೊದಲ ಹಂತದಲ್ಲಿ ವಿತರಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸೆನೆಟರ್ ಪ್ರಕಾಶ್ ಭಟ್ ಕಲಿಕಾ ಸಾಮಗ್ರಿಗಳನ್ನು ತೀರಾ ಅಗತ್ಯ ಇರುವ ಹಿಂದುಳಿದ ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಮೊದಲ ಆದ್ಯತೆಯ ಮೇರೆಗೆ ಹಂಚಲು ದಾನಿಗಳು ಮನಸ್ಸು ಮಾಡಬೇಕು ಎಂದರು. ಜೇಸಿ ಅಧ್ಯಕ್ಷ ಪುರಂದರ್ ಖಾರ್ವಿ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ ಮಾಡಿದರು.

ಜೇಸಿಐ ವತಿಯಿಂದ ಮಕ್ಕಳಿಗೆ ಸಿಹಿತಿಂಡಿ ವಿತರಿಸಲಾಯಿತು. ಜೇಸಿಐ ಉಪಾಧ್ಯಕ್ಷ ಶ್ರೀಗಣೇಶ್ ಗಾಣಿಗ ಹಾಗೂ ಖಜಾಂಚಿ ಪ್ರದೀಪ ಕುಮಾರ್ ಶೆಟ್ಟಿ ಕಾರಿಕಟ್ಟೆ ಹಾಗೂ ಜೆಸಿ ಸದಸ್ಯರಾದ ಜಗದೀಶ್ ದೇವಾಡಿಗ ಹಾಗೂ ನಾಗರಾಜ್ ಉಬ್ಬರಿ ಉಪಸ್ಥಿತರಿದ್ದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)