ಜೆಸಿಐ ಉಪ್ಪುಂದದ ವತಿಯಿಂದ ವಿಶ್ವ ಪರಿಸರ ದಿನಾಚರಣೆ

0
402

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (4) ಸಮ್ಮತ (1) ಅಸಮ್ಮತ (2) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

   

ಉಪ್ಪುಂದ : ಜೆಸಿಐ ಉಪ್ಪುಂದ ಹಾಗೂ ವಲಯ ಅರಣ್ಯಾಧಿಕಾರಿಗಳ ಕಛೇರಿ ಬೈಂದೂರು ಇದರ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಗಿಡ ವಿತರಣೆ ಸ.ಹಿ.ಪ್ರಾ.ಶಾಲೆ ಉಪ್ಪುಂದ (ಮಾದರಿ) ಯಲ್ಲಿ ಆಚರಿಸಲಾಯಿತು.

  ಹಸಿರೇ ಉಸಿರು ಎಂಬ ನಾಡ್ನುಡಿಯಂತೆ ನಾವು ಪರಿಸರವನ್ನು ರಕ್ಷಿಸಿದರೆ ಪರಿಸರ ನಮ್ಮನ್ನು ರಕ್ಷಿಸುತ್ತದೆ. ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ನಮ್ಮ ಸುತ್ತಮುತ್ತಲಿನ ಪರಿಸರ ಆರೋಗ್ಯವಾಗಿದ್ದರೆ ನಾವು ಆರೋಗ್ಯವಾಗಿರುತ್ತೇವೆ. ಪರಿಸರಕ್ಕೆ ಹಾನಿಯಾದರೆ ನಮಗೆ ಹಾನಿಯಾದಂತೆ ಈ ಹಿನ್ನಲೆಯಲ್ಲಿ ವರ್ಷ ಪೂರ್ತಿ ಪರಿಸರವನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರದ್ದು ಎಂದುಜೆಸಿಐ ಉಪ್ಪುಂದ ಸ್ಥಾಪಕ ಅಧ್ಯಕ್ಷರಾದ ದಿವಾಕರ ಶೆಟ್ಟಿಯವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜೆಸಿಐ ಅಧ್ಯಕ್ಷ ಪುರಂದರ ಖಾರ್ವಿರವರು ಶಾಲಾ ಮಕ್ಕಳಿಗೆ ಗಿಡಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಪೂರ್ವಾಧ್ಯಕ್ಷರಾದ ಜೆಸಿ ಸೆನೆಟರ್ ಯು ಪ್ರಕಾಶ್ ಭಟ್, ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಶ್ರೀಧರ ದೇವಾಡಿಗ, ಜೆಸಿರೇಟ್ ಅಧ್ಯಕ್ಷರಾದ ಸಂಗೀತ ಪುರಂದರ ಖಾರ್ವಿ, ದೈಹಿಕ ಶಿಕ್ಷಕರಾದ ನಿತ್ಯಾನಂದ, ಜೆಸಿ ಉಪ್ಪುಂದ ಪೂರ್ವಾಧ್ಯಕ್ಷರಾದ ಮಂಗೇಶ್ ಶ್ಯಾನುಭಾಗ್, ಸ.ಹಿ.ಪ್ರಾ.ಶಾಲೆ ಉಪ್ಪುಂದ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷರಾದ ಶ್ರೀಗಣೇಶ್ ಗಾಣಿಗ ಉಪಸ್ಥಿರಿದ್ದರು.

ಜೆಸಿ ವಾಣಿಯನ್ನು ಜೆಸಿ ಶಿವಾನಂದ ವಾಚಿಸಿದರು, ಕಾರ್ಯಕ್ರಮದ ನಿರ್ದೇಶಕರಾದ ಜೆಸಿ ಪ್ರದೀಪ್ ಶೆಟ್ಟಿ ಕಾರಿಕಟ್ಟೆ ನಿರೂಪಿಸಿದರು, ಜೆಸಿ ರಾಮಕೃಷ್ಣ ಖಾರ್ವಿ ವಂದಿಸಿದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (4) ಸಮ್ಮತ (1) ಅಸಮ್ಮತ (2) ಖಂಡಿಸುವೆ (0) ಅಭಿಪ್ರಾಯವಿಲ್ಲ (0)