ಜೆಸಿಐ ಉಪ್ಪುಂದಕ್ಕೆ ಅತ್ಯುತ್ತಮ ಘಟಕ ಮತ್ತು ಅತ್ಯುತ್ತಮ ಘಟಕಾಧ್ಯಕ್ಷ ಪ್ರಶಸ್ತಿ

0
116

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಜೆಸಿಐ ಉಪ್ಪುಂದಕ್ಕೆ ಅತ್ಯುತ್ತಮ ಘಟಕ ಮತ್ತು ಅತ್ಯುತ್ತಮ ಘಟಕಾಧ್ಯಕ್ಷ ಪ್ರಶಸ್ತಿ..* ಪುತ್ತೂರಿನಲ್ಲಿ ನಡೆದ ವಲಯ 15ರ ಮುಂಗಾರು ಮಧ್ಯಂತರ ಸಮ್ಮೇಳನದಲ್ಲಿ ರಿಜನ್ ಏ ವಿಭಾಗದ ಅತ್ಯುತ್ತಮ ಘಟಕ ವಿನ್ನರ್ ಪ್ರಶಸ್ತಿ,ಅತ್ಯುತ್ತಮ ಘಟಕಾಧ್ಯಕ್ಷ ವಿನ್ನರ್ ಪ್ರಶಸ್ತಿ,ಡೈಮಂಡ್ ಲೋಮ್, ಮುಂಗಾರಿನ ರಾಜ ಹಾಗೂ ಅತ್ಯುತ್ತಮ ನೋಂದಾವಣೆ ಪ್ರಶಸ್ತಿ ಸಹ ಜೆಸಿಐ ಉಪ್ಪುಂದದ ಪಾಲಾಗಿದೆ.

ಉಪ್ಪುಂದ ಘಟಕ ನೀಡಿದ 75ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಹಾಗೂ ಶ್ರೇಷ್ಠ ದೇಣಿಗೆಯನ್ನು ಪರಿಗಣಿಸಿ ವಲಯದ ಶ್ರೇಷ್ಠ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ ಈ ಸಂದರ್ಭದಲ್ಲಿ ಅಂತರಾಷ್ಟ್ರೀಯ ಜೆಸಿಐ ನಿಂದ ಸೆನೆಟರ್ ಮನ್ನಣೆ ಗಳಿಸಿದ Jc Sen ಪ್ರಕಾಶ್ ಭಟ್ ಇವರನ್ನು ಸನ್ಮಾನಿಸಲಾಯಿತು ವಲಯದ ಮೊದಲ ಮುಂಗಾರಿನ ರಾಜಾರಾಣಿ ಪ್ರಶಸ್ತಿ ಪುರಸ್ಕೃತರಾದ ಜೆಸಿಐ ಉಪ್ಪುಂದದ ಘಟಕಾಧ್ಯಕ್ಷ JFD ಪುರಂದರ ಖಾರ್ವಿ ಹಾಗೂ ಜೇಸಿರೇಟ್ ಅಧ್ಯಕ್ಷೇ ಶ್ರೀಮತಿ ಸಂಗೀತ ಪುರಂದರ ರನ್ನು ವಲಯದ ವತಿಯಿಂದ ಸನ್ಮಾನಿಸಲಾಯಿತು ಹಾಗೂ ಇದುವರೆಗಿನ ಕಾರ್ಯಕ್ರಮಗಳನ್ನು ಸ್ಥಳೀಯ ದಿನಪತ್ರಿಕೆಗಳು ಮತ್ತು ವಾರ್ತಾವಾಹಿನಿ ಗಳಲ್ಲಿ ಪ್ರಚಾರ ಮಾಡಿದ ಸಲುವಾಗಿ ಮೀಡಿಯಾ ಕವರೇಜ್ ವಿಭಾಗದ ಅತ್ಯುತ್ತಮ ಘಟಕ ರನ್ನರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

 ಈ ಸಂದರ್ಭದಲ್ಲಿ ವಲಯಾಧ್ಯಕ್ಷ ಅಶೋಕ ಚುಂತಾರ, ಉಪಾಧ್ಯಕ್ಷ ಜಬ್ಬಾರ್ ಸಾಹೇಬ್ , ವಲಯ ಉಪಾಧ್ಯಕ್ಷರುಗಳು, ನಿಕಟಪೂರ್ವ ವಲಯಾಧ್ಯಕ್ಷ ರಾಕೇಶ್ ಕುಂಜೂರು ಹಾಗೂ ಹತ್ತಾರು ಗಣ್ಯರು ಪ್ರಶಸ್ತಿಯನ್ನು ಹಸ್ತಾಂತರಿಸಿದರು ಈ ಸಂದರ್ಭದಲ್ಲಿ ಜೇಸಿ ಉಪ್ಪುಂದದ ಪರವಾಗಿ ಪೂರ್ವಾಧ್ಯಕ್ಷರಾದ ಮಂಗೇಶ್ ಶಾನುಭಾಗ್,ಸುಬ್ರಹ್ಮಣ್ಯ ಜಿ,,ಪ್ರಕಾಶ್ ಭಟ್, ಹಾಗೂ jc ಸದಸ್ಯರುಗಳು ಉಪಸ್ಥಿತರಿದ್ದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)