ವಿಶ್ವ ತಂಬಾಕು ವಿರೋಧಿ ದಿನ: ಧೂಮಪಾನ ತ್ಯಜಿಸಿ ಆರೋಗ್ಯ ವ್ರದ್ಧಿಸಿ ಅಭಿಯಾನ

0
87

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ವಿಶ್ವ ತಂಬಾಕು ವಿರೋಧಿ ದಿನದ ಪ್ರಯುಕ್ತ ಸ್ವಚ್ಛ ಭಾರತ್ ಫ್ರೆಂಡ್ಸ್, ಜೆಸಿಐ ಉಡುಪಿ ಸಿಟಿ, ಉಡುಪಿ ಜಿಲ್ಲಾ ನಾಗರಿಕ ಸಮಿತಿ ಮತ್ತು ಸ್ಪಂದನಾ ಬೌದ್ಧಿಕ ಭಿನ್ನ ಸಾಮರ್ಥ್ಯ ಪುನರ್ವಸತಿ ಕೇಂದ್ರ ಉಪ್ಪೂರು ಸಂಯುಕ್ತ ಆಶ್ರಯದಲ್ಲಿ ‘ಧೂಮಪಾನ ತ್ಯಜಿಸಿ ಆರೋಗ್ಯ ವ್ರದ್ಧಿಸಿ’ ಜಾಗ್ರತಿ ಅಭಿಯಾನವು ಮೇ 31 ರಂದು ಅಜ್ಜರಕಾಡು ಉದ್ಯಾನವನದಲ್ಲಿ ನಡೆಯಿತು.

ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ನಿತ್ಯಾನಂದ ಒಳಕಾಡು, ಧೂಮಪಾನದಿಂದ ಎಷ್ಟೋ ಜನರು ತಮ್ಮ ಅಮೂಲ್ಯ ಬದುಕಿನಲ್ಲಿ ಕತ್ತಲನ್ನು ಆವರಿಸಿಕೊಂಡು ಕುಟುಂಬವನ್ನು ಬೀದಿಗೆ ತಂದಿರುವ ಘಟನೆಗಳು ಸಾಕಷ್ಟು ಪ್ರಮಾಣದಲ್ಲಿ ನಡೆದಿವೆ. ಪ್ಯಾಸಿವ್ ಸ್ಮೋಕಿಂಗ್ ಮೂಲಕ ಅಮಾಯಕರು ಕೂಡ ತಂಬಾಕಿನ ದುಷ್ಪರಿಣಾಮಗಳಿಗೆ ಬಲಿಯಾಗುತ್ತಿದ್ದಾರೆ. ಧೂಮಪಾನವನ್ನು ತ್ಯಜಿಸುವ ದ್ರಢ ಸಂಕಲ್ಪವನ್ನು ಮಾಡುವ ಮೂಲಕ ಧೂಮಪಾನ ಮುಕ್ತ ಸಮಾಜವನ್ನು ನಿರ್ಮಿಸುವಲ್ಲಿ ಪ್ರತಿಯೊಬ್ಬರೂ ಕ್ರಿಯಾಶೀಲ ಪ್ರಯತ್ನವನ್ನು ನಡೆಸಬೇಕು ಎಂದು ಕರೆ ನೀಡಿದರು.

ಜಾಗ್ರತಿ ಕರಪತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಸ್ಪಂದನಾ ಬೌದ್ಧಿಕ ಭಿನ್ನ ಸಾಮರ್ಥ್ಯ ಪುನರ್ವಸತಿ ಕೇಂದ್ರದ ಸ್ಥಾಪಕ‌ ಪ್ರಾಂಶುಪಾಲ ಜನಾರ್ಧನ್ ಅವರು, ತಂಬಾಕು ಸೇವನೆಯಿಂದ ಎಲ್ಲಾ ರೋಗಗಳಿಗೆ ದೇಹದೊಳಗೆ ಮುಕ್ತ ಪ್ರವೇಶ ನೀಡಿದಂತಾಗುತ್ತದೆ. ಆರೋಗ್ಯದ ಬಗ್ಗೆ ಸರಿಯಾದ ತಿಳಿವಳಿಕೆ ಬೆಳೆಸಿಕೊಂಡರೆ ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯವು ವ್ರದ್ಧಿಯಾಗುವುದು ಎಂದರು. ರಾಘವೇಂದ್ರ ಪ್ರಭು ಕರ್ವಾಲು ಹಾಗೂ ತಾರನಾಥ್ ಮೇಸ್ತ ಶಿರೂರು ಯುವಜನರಲ್ಲಿ ತಂಬಾಕಿನ ದುಷ್ಪರಿಣಾಮಗಳು ಮತ್ತು ತಂಬಾಕನ್ನು ತ್ಯಜಿಸುವ ಮಾರ್ಗೋಪಾಯಗಳ ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ ಜೆಸಿಐ ಉಡುಪಿ ಸಿಟಿ ಅಧ್ಯಕ್ಷ ಜಗದೀಶ್ ಶೆಟ್ಟಿ, ಉದಯ ನಾಯ್ಕ್, ಸುಷ್ಮಾ, ರಕ್ಷಿತ್ ಕುಮಾರ್ ವಂಡ್ಸೆ, ವಾದಿರಾಜ ಹೆಗ್ಡೆ ಮುಂತಾದವರು ಉಪಸ್ಥಿತರಿದ್ದರು.
ಗಣೇಶ್ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

ಬಳಿಕ ಸಾರ್ವಜನಿಕರಿಗೆ ಕರಪತ್ರಗಳನ್ನು ನೀಡುವ ಮೂಲಕ ಜಾಗ್ರತಿ ಮೂಡಿಸಲಾಯಿತು ಹಾಗೂ ವಿದ್ಯಾರ್ಥಿಗಳೊಂದಿಗೆ ವಿಷಯಕ್ಕೆ ಸಂಬಂಧಿಸಿದಂತೆ ಚುಟುಕು ಸಂವಾದ ನಡೆಯಿತು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)