ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಣಿಪಾಲ ಆರೋಗ್ಯ ಕಾರ್ಡ್ ನೊಂದಣಿ ಮಾಡಿದ ರಕ್ಷಿತ್ ವಂಡ್ಸೆ ಇವರಿಗೆ ರಾಹುಲ್ ದ್ರಾವಿಡ್ ಅವರಿಂದ ಗೌರವ

0
133

ಹೆಚ್ಚಿನ ಓದುಗರು ಈ ಸುದ್ದಿಯನ್ನು ಅಸಮ್ಮತ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (1) ಅಸಮ್ಮತ (3) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಸ್ವಚ್ಛ ಭಾರತ್ ಫ್ರೆಂಡ್ಸ್ ಸಂಘಟನೆಯ ಕ್ರಿಯಾಶೀಲ ಸದಸ್ಯರಾಗಿ ಹಲವಾರು ಪ್ರಮುಖ ಅಭಿಯಾನದಲ್ಲಿ ಪಾಲ್ಗೊಂಡು ನಮಗೆ ಪ್ರೇರಣೆ ನೀಡುವ ರಕ್ಷಿತ್ ಕುಮಾರ್ ವಂಡ್ಸೆ ಇವರು ವರ್ಷದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಣಿಪಾಲ ಆರೋಗ್ಯ ಕಾರ್ಡ್ ನೊಂದಣಿ ಮಾಡಿದ ಸಾಧನೆಗೆ ಇವರಿಗೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ದ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಅವರು ಮಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಗೌರವಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ಕ್ರಿಯಾಶೀಲತೆಯಿಂದ ಆರೋಗ್ಯ ಕಾರ್ಡ್ ನೊಂದಣಿ ಶಿಬಿರಗಳನ್ನು ಆಯೋಜಿಸುವ ಮೂಲಕ ರಕ್ಷಿತ್ ಕುಮಾರ್ ಅವರು ಮತ್ತೊಮ್ಮೆ ತನ್ನ ಸಾಮರ್ಥ್ಯವನ್ನು ಅನಾವರಣಗೊಳಿಸಿದ್ದಾರೆ.

ರಕ್ಷಿತ್ ಕುಮಾರ್ ಇವರು ಉಡುಪಿ ಜಿಲ್ಲೆಯ ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಸಮಾಜಕಾರ್ಯ (MSW) ವಿಭಾಗದ ಹಳೆ ವಿದ್ಯಾರ್ಥಿ. ಚೆನೈ ನಲ್ಲಿ ಸಂಭವಿಸಿದ ಚಂಡಮಾರುತದ ಸಂದರ್ಭದಲ್ಲಿ ಸ್ವಚ್ಛ ಭಾರತ ಫ್ರೆಂಡ್ಸ್ ವತಿಯಿಂದ ಉಡುಪಿ ಜಿಲ್ಲೆಯಿಂದ ಸಂಗ್ರಹಿಸಿದ ಪರಿಹಾರ ಸಾಮಗ್ರಿಗಳನ್ನು ತಮಿಳು ನಾಡಿಗೆ ರೈಲಿನ ಮೂಲಕ ಸಾಗಿಸುವಲ್ಲಿ ವಿಶೇಷ ರೀತಿಯ ಸಹಕಾರವನ್ನು ರಕ್ಷಿತ್ ಕುಮಾರ್ ಅವರು ನೀಡಿರುವುದನ್ನು ಸ್ಮರಿಸಲೇಬೇಕು.

ಮಲ್ಪೆಯಲ್ಲಿ ನಡೆಯುತ್ತಿದ್ದ ಬೀಚ್ ಸ್ವಚ್ಚತಾ ಅಭಿಯಾನಕ್ಕೆ ರಕ್ಷಿತ್ ಕುಮಾರ್ ಅವರು ದೂರದ ವಂಡ್ಸೆಯಿಂದ ಸುಮಾರು 50 ಕಿಮೀ (ಒಟ್ಟು 100 ಕಿಮೀ) ಪ್ರಯಾಣಿಸಿ ಭಾಗವಹಿಸಿ ಪುನಃ ವಂಡ್ಸೆಗೆ ಪ್ರಯಾಣಿಸುತ್ತಿದ್ದ ವಿಷಯ ಇತರ ಸದಸ್ಯರಿಗೂ ಪ್ರೇರಣೆ ನೀಡಿತು.

ಚಿತ್ತೂರು ಗ್ರಾಮ ಪಂಚಾಯತ್ ಸದಸ್ಯರಿಗೆ ಸ್ವಚ್ಛ ಭಾರತ್ ಫ್ರೆಂಡ್ಸ್ ವತಿಯಿಂದ ಆಯೋಜಿಸಿದ ಸಾಮಾಜಿಕ ಜಾಲತಾಣಗಳ ಬಳಕೆ ಕುರಿತು ಸಾಮರ್ಥ್ಯಾಭಿವೃದ್ಧಿ ಕಾರ್ಯಗಾರದ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದ ರಕ್ಷಿತ್ ಕುಮಾರ್ ಅವರು ಇದನ್ನು ಪರಿಣಾಮಕಾರಿಯಾಗಿ ಸಂಘಟಿಸಿ ಮೆಚ್ಚುಗೆಗೆ ಪಾತ್ರರಾದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಅಸಮ್ಮತ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (1) ಅಸಮ್ಮತ (3) ಖಂಡಿಸುವೆ (0) ಅಭಿಪ್ರಾಯವಿಲ್ಲ (0)