ಕಿರಿಮಂಜೇಶ್ವರ : ಮನೆಗೆ ನುಗ್ಗಿ ಹಲ್ಲೆ ಪ್ರಕರಣ : ಇಬ್ಬರ ಬಂಧನ

0
156

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (9) ಸಮ್ಮತ (1) ಅಸಮ್ಮತ (6) ಖಂಡಿಸುವೆ (27) ಅಭಿಪ್ರಾಯವಿಲ್ಲ (0)

ಕಿರಿಮಂಜೇಶ್ವರದಲ್ಲಿ ಶನಿವಾರ ನಡೆದ ಘಟನೆ, ಮನೆಗೆ ನುಗ್ಗಿ ಹಲ್ಲೆ ಪ್ರಕರಣ: ಇಬ್ಬರ ಬಂಧನ


ಉಪ್ಪುಂದ : ಕಿರಿಮಂಜೇಶ್ವರ ಗ್ರಾಮದ ಗಂಗೆಬೈಲು ಗಾಂಧಿನಗರದ ಕಾಲೋನಿಯಲ್ಲಿ ಮೇ.18ರಂದು ರಾತ್ರಿ ನಡೆದ ಆಯುಧದಿಂದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಆರೋಪಿಗಳ ಪೈಕಿ ಇಬ್ಬರನ್ನು ಸೋಮವಾರ ಉಪ್ಪುಂದದಲ್ಲಿ ಬಂಧಿಸಲಾಗಿದೆ.

ನವೀನಚಂದ್ರ ಉಪ್ಪುಂದ ಹಾಗೂ ಆತನ ಪತ್ನಿ ಶೋಭಾ ಬಂಧಿತರಾಗಿದ್ದು ಅವರಿಗೆ ಜೂ.3ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ತಲೆಮರೆಸಿಕೊಂಡಿರುವ ಇತರ ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ.

ಪ್ರಕರಣದ ವಿವರ : ಗಂಗೆಬೈಲು ಗಾಂಧಿನಗರದ ಕಾಲೋನಿ ನಿವಾಸಿ ಶಾರದ ದೇವಾಡಿಗ ಇವರು ತಮ್ಮ ಮಕ್ಕಳೊಂದಿಗೆ ಕಿರಿಮಂಜೇಶ್ವರ ಜಾತ್ರೆಗೆ ಹೋಗಿ ರಿಕ್ಷಾದಲ್ಲಿ ಮನೆಗೆ ಬರುತ್ತಿರುವಾಗ ರಿಕ್ಷವನ್ನು ತಿರುಗಿಸುವಾಗ ಕುಪ್ಪು ಖಾರ್ವಿ ಮನೆಯ ಮೋರಿಗೆ ತಾಗಿರುವುದರಿಂದ ಕುಪ್ಪು ಖಾರ್ವಿ ಅವರ ಮಗಳು ಶೋಭಾ ಬೈದು ಕೈಯಿಂದ ಹಲ್ಲೆ ಮಾಡಿದ್ದಾರೆ ಇದರಿಂದ ಭಯಗೊಂಡ ಶಾರದ ದೇವಾಡಿಗ ಬೈಂದೂರು ಪೊಲೀಸರಿಗೆ ದೂರು ನೀಡಿ ವಾಪಾಸು ಮನೆಗೆ ಬಂದು ರಾತ್ರಿ ಊಟ ಮಾಡುತ್ತಿರುವ ಸಂದರ್ಭ ಕುಪ್ಪು ಖಾರ್ವಿ ಮಕ್ಕಳಾದ ಶೋಭಾ, ದಾಮೋಧರ, ರತ್ನಕರ, ಸತೀಶ, ಅಳಿಯ ನವೀನಚಂದ್ರ ಉಪ್ಪುಂದ ಇವರು ಕತ್ತಿ, ದೊಣ್ಣೆ, ರಾಡ್ ಹಿಡಿದುಕೊಂಡು ಮನೆಗೆ ಬಂದು ಪೊಲೀಸರಿಗೆ ಕಂಪ್ಲೆಂಟ್ ಕೊಟ್ಟಿದಕ್ಕೆ ಶಾರದ ದೇವಾಡಿಗರನ್ನು ಪ್ರಶ್ನಿಸಿದ ಶೋಭಾ ಕತ್ತಿಯನ್ನು ಬೀಸಿದ ಪರಿಣಾಮ ಕಿವಿ, ಕುತ್ತಿಗೆಗೆ ಪೆಟ್ಟು ಬಿದ್ದಿದೆ. ಆರೋಪಿ ಸತೀಶ ರಾಡ್‍ನಿಂದ ಎರಡು ಕಾಲಿಗೆ ಹೊಡೆದಿದ್ದಾನೆ. ತಪ್ಪಿಸಲು ಬಂದ ಅಕ್ಕ ಸುಶೀಲಾ ಇವರನ್ನು ಆರೋಪಿ ಉಪ್ಪುಂದ ನವೀನಚಂದ್ರ ನು ದೊಣ್ಣೆಯಿಂದ ಕಾಲು, ಕೈಯಿಗೆ ಹೊಡೆಯುತ್ತಿರುವಾಗ ಮಗಳು ಮೊನಿಶಾ ಬೊಬ್ಬೆ ಹಾಕಿದಾಗ ಪಕ್ಕದ ಮನೆಯಲ್ಲಿ ವಾಸವಾಗಿದ್ದ ಅಕ್ಕ ಉಷಾ. ಇವರ ಮಗಳಾದ ಶಾರದ, ಅಳಿಯ ಗಣೇಶ ಬಿಡಿಸಲು ಬಂದಾಗ ಆರೋಪಿ ದಾಮೋದರ, ರತ್ನಾಕರ, ಶಿವರಾಮ ದೋಣ್ಣೆಯಿಂದ ಉಷಾ, ಶಾರದಾ ಇವರ ತಲೆಗೆ,ಕಾಲಿಗೆ ಹೊಡೆದಿರುತ್ತಾರೆ.

ಶಾರದ ದೇವಾಡಿಗ 32ವರ್ಷ ಗಂಭೀರ ಗಾಯಗೊಂಡಿದ್ದು ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಸುಶೀಲ 52ವರ್ಷ, ಗಣೇಶ 48ವರ್ಷ, ಉರ್ಷಾ 52 ವರ್ಷ, ಶಾರದಾ 45ವರ್ಷ ಗಾಯಗೊಂಡಿದ್ದು ಕೋಟೇಶ್ವರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೈಂದೂರು ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (9) ಸಮ್ಮತ (1) ಅಸಮ್ಮತ (6) ಖಂಡಿಸುವೆ (27) ಅಭಿಪ್ರಾಯವಿಲ್ಲ (0)