ಉಪ್ಪಿನಕುದ್ರು ಬೇಡರ ಕೊಟ್ಟಗೆ ಬೊಬರ್ಯ ದೇವಸ್ಥಾನದ ವರ್ಧಂತಿ ಉತ್ಸವ ಮತ್ತು ಬೆಳ್ಳಿ ಪ್ರಭಾವಳಿ ಸಮರ್ಪಣೆ

0
88

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೇಡರ ಕೊಟ್ಟಗೆ ಬೋಬರ್ಯ ದೇವಸ್ಥಾನ ಉಪ್ಪಿನಕುದ್ರ ಇವರ ಪ್ರಥಮ ವರ್ಷದ ವರ್ದಂತಿ ಉತ್ಸವ ಮತ್ತು ಬೆಳ್ಳಿ ಪ್ರಭಾವಳಿ ಸಮರ್ಪಣೆಯ ಧಾರ್ಮಿಕ ಸಭಾ ಕಾರ್ಯಕ್ರಮ ದಾನಿಗಳಾದ ರಾಜೇಶ ಕಾರಂತರವರ ಅಧ್ಯಕ್ಷತೆಯಲ್ಲಿ ಜರುಗಿತು.

ಸಭಾ ಕಾರ್ಯಕ್ರಮವನ್ನು ದಾರ್ಮಿಕ ಮುಖಂಡರು ಮಹೋತೊಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬಸ್ರೂರು ಇದರ ಆಡಳಿತ ಧರ್ಮದರ್ಶಿಗಳಾದ ಅಪ್ಪಣ್ಣ ಹೆಗ್ಡೆರವರು ಉದ್ಘಾಟಿಸಿ ಶುಭ ಹಾರೈಸಿದರು.

ಶ್ರೀ ಬೇಡರ ಕೊಟ್ಟಿಗೆ ಬೋಬ್ಬರ್ಯ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ರಾದಕೃಷ್ಣ ಶೇರುಗಾರ ಇವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಮುಖ್ಯ ಅತಿಥಿಗಳಾಗಿ ಕುಂದಾಪುರ ಉದ್ಯಮಿ ಅನಂತ ಕಾಮತ್ ವಾಮನ ಪೈ ಹೆಮ್ಮಾಡಿ, ರಾಜೇಶ್ ಆಚಾರಿ, ಕೌಶಲಾ ಉಡುಪಿ, ದಾನಿಗಳಾದ ಶಂಕರ ದೇವಾಡಿಗ, ದೇವಸ್ಥಾನದ ಪಾತ್ರಿUಯಾದ ಹಿರಿಯ ದೇವಾಡಿಗ, ಆಡಳಿತ ಮೋಕ್ತಸ್ಥರಾದ ಜಗದೀಶ್ ಉಡುಪ, ಮಾರ್ಗದರ್ಶಕರಾದ ನಾರಾಯಣ ದೇವಾಡಿಗ, ಆಡಳಿತ ಮಂಡಳಿ ಸದಸ್ಯರಾದ ನಾಗರಾಜ ಎಂ, ನರಸಿಂಹ ಮೊಗವೀರ, ಬಸವ ದೇವಾಡಿಗ, ಯಕ್ಷೇಶ್ವರಿ ಫ್ರೆಂಡ್ಸ್ ನ ಅಧ್ಯಕ್ಷ ಆನಂದ ಪೂಜಾರಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ದೇವಸ್ಥಾನಕ್ಕೆ ಅತಿ ಹೆಚ್ಚು ದೇಣಿಗೆ ನೀಡಿದ 20ಕ್ಕೂ ಹೆಚ್ಚು ದಾನಿಗಳನ್ನು ಗುರುತಿಸಿ ಗೌರವಿಸಲಾಯಿತು.
ರವಿ ದೇವಾಡಿಗ ಸ್ವಾಗತಿಸಿದರು, ಸುನಿಲ್ ಹಾಗೂ ಮಹೇಶ್ ನಿರೂಪಿಸಿದರು, ರಾಜೇಂದ್ರ ಪೈ ವಂದಿಸಿದರು.

ತದನಂತರ ಯಕ್ಷೇಶ್ವರಿ ಫ್ರೆಂಡ್ಸ್ ಸಹಯೋಗದಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)