ಮೊಗೇರಿ ಶ್ರೀ ಕಟ್ಟೆಬೊಬ್ಬರ್ಯ ದೈವಸ್ಥಾನ ಇದರ 4ನೇ ವರ್ಷದ ವರ್ಧಂತಿ ಉತ್ಸವ

0
98

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (3) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಉಪ್ಪುಂದ: ನಾಯ್ಕನಕಟ್ಟೆ ಮೊಗೇರಿ ಶ್ರೀ ಕಟ್ಟೆಬೊಬ್ಬರ್ಯ ದೈವಸ್ಥಾನ ಇದರ 4ನೇ ವರ್ಷದ ವರ್ಧಂತಿ ಉತ್ಸವ ಮತ್ತು ವಿವಿಧ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ಶುಕ್ರವಾರ ನಡೆಯಿತು.

ಆನಗಳ್ಳಿ ಗಜಪುರ ಡಾ. ಹವ್ಯಕ ವೇದರತ್ನ ಶ್ರೀ ಚನ್ನಕೇಶವ ಗಾಯತ್ರಿ ಭಟ್ ನೇತೃತ್ವದಲ್ಲಿ ಶ್ರೀ ನಾಗ ಮತ್ತು ಶ್ರೀ ಕಟ್ಟೆಬೊಬ್ಬರ್ಯ ದೇವರಿಗೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮ ನೆರವೇರಿತು.

ಬೆಳಗ್ಗೆ ಕಲಾಭಿವೃದ್ಧಿ ಹೋಮ, ಕಲಾಶಾಭಿಷೇಕ, ಪಂಚಾಮೃತಾಭಿಷೇಕ ನಡೆಯಿತು. ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ನೂರಾರು ಭಕ್ತಾಧಿಗಳು ಧಾರ್ಮಿಕ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ರಾತ್ರಿ ಶ್ರೀ ಕ್ಷೇತ್ರ ಮಡಾಮಕ್ಕಿ ಇವರಿಂದ ನೂತನ ಪ್ರಸಂಗ ಯಕ್ಷಗಾನ ನಡೆಯಿತು. ಈ ಸಂದರ್ಭ ದೈವಸ್ಥಾನದ ಆಡಳಿತ ಮಂಡಳಿಯ ಸರ್ವಸದಸ್ಯರು ಉಪಸ್ಥಿತರಿದ್ದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (3) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)