ಶಂಕರ ಜಯಂತಿ ಸರಣಿ ಕಾರ್ಯಕ್ರಮ ಉದ್ಘಾಟನೆ

0
117

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಉಪ್ಪುಂದ, : ಧಾರ್ಮಿಕ, ಸಂಸ್ಕøತಿಯನ್ನು ಎತ್ತಿ ಹಿಡಿದು ಹೊಸ ಚರಿತ್ರೆ ಬರೆದ ಪುಣ್ಯತಮ ವ್ಯಕ್ತಿ ಶಂಕರರು, ಅಳಿವಿನಂಚಿನಲ್ಲಿದ್ದ ಹಿಂದೂ ಸನಾತನ ಧರ್ಮದ ಉಳಿವಿಗಾಗಿ ಯಾವುದೇ ಯುದ್ಧಗಳನ್ನು ಮಾಡದೇ ತರ್ಕಗಳ ಮೂಲಕ ಅನ್ಯ ಧರ್ಮದ ಲೋಪ ದೋಷಗಳ ತಿಳಿಸಿ ತರ್ಕಗಳಲ್ಲಿ ಗೆಲ್ಲುವುದರ ಜೊತೆ ಮನ ಪರಿವರ್ತನೆ ಮಾಡಿ ಹಿಂದೂ ಧರ್ಮದ ಪುನರುತ್ಥಾನಕ್ಕೆ ಶ್ರೀ ಶಂಕರರು ಕಾರಣರಾಗಿದ್ದಾರೆ ಎಂದು ಶೃಂಗೇರಿ ಶ್ರೀ ಶಾರದಾ ಪೀಠದ ದಕ್ಷಿಣಾಮ್ನಾಯ ಇವರ ಪ್ರಾಂತೀಯ ಧರ್ಮಧಿಕಾರಿ ಬಡಾಕೆರೆ ವೇದಮೂರ್ತಿ ಲೋಕೇಶ ಅಡಿಗ ಹೇಳಿದರು.

ಅವರು ಬೈಂದೂರು ಶಂಕರ ತತ್ವ ಪ್ರಸರಣಾ ಸಮಿತಿ ವತಿಯಿಂದ ಉಪ್ಪುಂದ ಸುವಿಚಾರ ಬಳಗ ಟ್ರಸ್ಟ್‍ನ ಸಹಯೋಗದಲ್ಲಿ ಉಪ್ಪುಂದ ಶ್ರೀ ಶಂಕರ ಕಲಾ ಮಂದಿರದ ಸಮೃದ್ಧ ಸಭಾ ಭವನದಲ್ಲಿ ನಡೆದ ಶಂಕರ ಜಯಂತಿ ಆಚರಣೆಯ ಸರಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅಜ್ಞಾನ, ಮೂಢನಂಬಿಕೆಯಿಂದ ದೇವರನ್ನು ಕಾಣಲು ಸಾಧ್ಯವಿಲ್ಲ, ಜ್ಞಾನದಿಂದ ದೇವರನ್ನು ಕಾಣಲು ಸಾಧ್ಯವಾಗುತ್ತದೆ ಎಂದರು.

ಉಪ್ಪುಂದ ಸುವಿಚಾರ ಬಳಗ ಟ್ರಸ್ಟ್ ಅಧ್ಯಕ್ಷ ಬಿ. ರಾಮಕೃಷ್ಣ ಶೇರೆಗಾರ್ ಅಧ್ಯಕ್ಷತೆ ವಹಿಸಿದ್ದರು. ದ್ರಾವಿಡ ಬ್ರಾಹ್ಮಣ ಪರಿಷತ್ತು ಉಪ್ಪುಂದ ವಲಯ ಅಧ್ಯಕ್ಷ ಬಿ. ವಿಶ್ವೇಶ್ವರ ಅಡಿಗ, ಹವ್ಯಕ ಸಭಾ ಕುಂದಾಪರ ತಾಲೂಕು ಅಧ್ಯಕ್ಷ ಎಮ್. ನಾಗರಾಜ್ ಭಟ್ ಉಪಸ್ಥಿತರಿದ್ದರು.
ಮಕ್ಕಿ ದೇವಸ್ಥಾನ ವೇದಮೂರ್ತಿ ತಿರುಮಲೇಶ್ವರ ಭಟ್ ಶಂಕರ ಭಗವತ್ಪಾದರ ಭಾವಚಿತ್ರಕ್ಕೆ ಪೂಜೆ, ನೈವೇದ್ಯ ನೆರವೇರಿಸಿದರು. ಉಪ್ಪುಂದ ವಿಪ್ರ ರಂಜಿನಿ ತಂಡದಿಂದ ಶಂಕರಾಚಾರ್ಯರರು ರಚಿಸಿದ ಸ್ತ್ರೋತ್ರಗಳನ್ನು ಪ್ರಸ್ತುತಪಡಿಸಿದರು.

ಯು. ಸಂದೇಶ್ ಭಟ್ ಪ್ರಾಸ್ತಾವನೆಗೈದು, ಸ್ವಾಗತಿಸಿದರು. ವೈಷ್ಣವಿ ಮಯ್ಯ ಪ್ರಾರ್ಥಿಸಿದರು. ಸಂಚಾಲಕ ವಿ.ಹೆಚ್. ನಾಯಕ್ ವಂದಿಸಿದರು. ಸಹಸಂಚಾಲಕ ಯು. ಗಣೇಶ್ ಪ್ರಸನ್ನ ಮಯ್ಯ ಕಾರ್ಯಕ್ರಮ ನಿರೂಪಿಸಿದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)