ನೈಜೀರಿಯಾ ಕಡಲ್ಗಳ್ಳರಿಂದ ಐವರು ಭಾರತೀಯ ನಾವಿಕರ ಅಪಹರಣ..!

0
164

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ನವದೆಹಲಿ,ಮೇ 7(ಪಿಟಿಐ)- ನೈಜೀರಿಯಾದಲ್ಲಿ ಎರಡು ವಾರಗಳ ಹಿಂದೆ ಕಡಲ್ಗಳ್ಳರಿಂದ ಅಪಹೃತವಾದ ಐವರು ಭಾರತೀಯ ನಾವಿಕರ ಬಗ್ಗೆ ಈವರೆಗೆ ಯಾವುದೇ ಸ್ಪಷ್ಟ ಮಾಹಿತಿ ಲಭಿಸಿಲ್ಲ.

ಅಪಹರಣ ಪ್ರಕರಣವನ್ನು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಖಚಿತಪಡಿಸಿದ್ದಾರೆ ಅಲ್ಲದೆ ಆಫ್ರಿಕಾ ರಾಷ್ಟ್ರದ ಉನ್ನತ ಮಟ್ಟದೊಂದಿಗೆ ನಾವಿಕರ ಸುರಕ್ಷಿತ ಬಿಡುಗಡೆಗಾಗಿ ಮಾತುಕತೆ ನಡೆಯುತ್ತಿದೆ. ಈ ಸಂಬಂಧ ಭಾರತೀಯ ಹೈಕಮೀಷನರ್ ಕಚೇರಿಯೊಂದಿಗೂ ನಿಕಟ ಸಂಪರ್ಕ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.

ನೈಜೀರಿಯಾದ ಭಾರತೀಯ ಹೈಕಮೀಷನರ್ ಅಭಯ್ ಠಾಕೂರ್, ಅಲ್ಲಿನ ಸರ್ಕಾರದ ಉನ್ನತಾಧಿಕಾರಿಗಳೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸಿ ನಾವಿಕರ ಸುರಕ್ಷಿತ ಬಿಡುಗಡೆಗೆ ತೀವ್ರ ಯತ್ನ ಮುಂದುವರೆಸಿದ್ದಾರೆ. ಈ ಬೆಳವಣಿಗೆಗಳ ಬಗ್ಗೆ ಆಗಾಗ ಮಾಹಿತಿ ನೀಡುವಂತೆ ಅವರಿಗೆ ಸೂಚಿಸಲಾಗಿದೆ ಎಂದು ಸುಷ್ಮಾ ಸ್ವರಾಜ್ ಟ್ವೀಟರ್‍ನಲ್ಲಿ ತಿಳಿಸಿದ್ದಾರೆ.

ಎರಡು ವಾರಗಳ ಹಿಂದೆ ನೈಜೀರಿಯಾದ ರಾಜಧಾನಿ ಲಾವೋಸ್ ಬಂದರುಕಟ್ಟೆ ಬಳಿ ಲಂಗರು ಹಾಕಿದ್ದ ಎಂಟಿ ಅಪೇಕಸ್ ನೌಕೆಯಿಂದ ಮರ್ಚೆಂಟ್ ನೇವಿ ಅಧಿಕಾರಿ ಸುದೀಪ್‍ಕುಮಾರ್ ಚೌಧರಿ ಮತ್ತು ಇತರ ನಾಲ್ವರು ನಾವಿಕರನ್ನು ಆಫ್ರಿಕಾದ ಅಪಾಯಕಾರಿ ಕಡಲ್ಗಳ್ಳರು ಅಪಹರಿಸಿದ್ದರು. ಇವರ ಬಗ್ಗೆ ಈವರೆಗೆ ಯಾವುದೇ ಮಾಹಿತಿ ಲಭಿಸಿಲ್ಲ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)