ಹುಬ್ಬಳ್ಳಿಯಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 42 ಲಕ್ಷ ರೂಪಾಯಿ ಜಪ್ತಿ.!

0
99

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಹುಬ್ಬಳ್ಳಿ : ದಾಖಲೆ ಇಲ್ಲದೇ ಸಾಗಿಸುತ್ತಿದ್ದ, 42 ಲಕ್ಷ ರೂಪಾಯಿ ಹಣವನ್ನು, ಚುನಾವಣಾ ಅಧಿಕಾರಿಗಳು, ಹುಬ್ಬಳ್ಳಿಯಲ್ಲಿ ಜಪ್ತಿ ಮಾಡಿದ್ದಾರೆ.

ಮೇ.19ರಂದು ಕುಂದಗೋಳ, ಚಿಂಚೋಳಿ ಕ್ಷೇತ್ರದ ಉಪ ಚುನಾವಣೆ ನಡೆಯುತ್ತಿರುವುದರಿಂದ, ಜಿಲ್ಲೆಯಲ್ಲಿ ಚುನಾವಣಾ ಅಧಿಕಾರಿಗಳು ಬಿಗಿ ಬಂದೋಬಸ್ತ್ ನಲ್ಲಿ ತೊಡಗಿದ್ದರು. ಈ ವೇಳೆ ಹುಬ್ಬಳ್ಳಿ ತಾಲೂಕಿನ ಅಗಡಿ ಗ್ರಾಮದ ಬಳಿಯ ಚೆಕ್ ಪೋಸ್ಟ್ ನಲ್ಲಿ ಖಾಸಗೀ ಬ್ಯಾಂಕ್ ಹಣವೆಂದು 42 ಲಕ್ಷವನ್ನು ಸಾಗಿಸಲಾಗುವುದನ್ನು ಪತ್ತೆ ಹಚ್ಚಿದ್ದಾರೆ.

ಖಾಸಗೀ ಬ್ಯಾಂಕ್ ಗೆ ಹಣವೆಂದು ತಿಳಿಸಿದ ಬಗ್ಗೆ ದಾಖಲೆಯನ್ನು ತೋರಿಸುವಂತೆ ಅಧಿಕಾರಿಗಳು ವಾಹನದ ಚಾಲಕರಿಗೆ, ತಿಳಿಸಿದ್ದಾರೆ. ಈ ವೇಳೆ ಕೇವಲ ಎಕ್ಸಿಸ್ ಬ್ಯಾಂಕ್ ಗೆ ಸೇರಿದ ದಾಖಲೆಯನ್ನು ತೋರಿಸಿದ್ದಾರೆ. ಆದರೆ ಉಳಿದ 30 ಲಕ್ಷಕ್ಕೆ ದಾಖಲೆಯನ್ನು ತೋರಿಸಿಲ್ಲ. ಹೀಗಾಗಿ ಎಲ್ಲಾ ಹಣವನ್ನು ಜಪ್ತಿ ಮಾಡಲಾಗಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)