ಬಿಜೂರು : ತಮ್ಮನಿಂದಲೇ ಅಣ್ಣನ ಕೊಲೆ

0
168

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (3) ಅಭಿಪ್ರಾಯವಿಲ್ಲ (0)

ಬಿಜೂರು: ರಾತ್ರಿ ಕುಡಿದ ಅಮಲಿನಲ್ಲಿ ತಮ್ಮನಿಗೆ ಬುದ್ಧಿ ಹೇಳಲು ಹೋದ ಅಣ್ಣನನ್ನೆ ತಮ್ಮ ದೊಣ್ಣೆಯಿಂದ ಹೊಡೆದು ಕೊಂದ ಘಟನೆ ಬೈಂದೂರು ಬಿಜೂರಿನ ಬವಳಾಡಿ ಎಂಬಲ್ಲಿ ಗುರುವಾರ ತಡರಾತ್ರಿ ನಡೆದಿದ್ದು, ಶುಕ್ರವಾರ ತಡವಾಗಿ ಬೆಳಕಿಗೆ ಬಂದಿದೆ.

ರಾತ್ರಿ ಕುಡಿದ ಅಮಲಿನಲ್ಲಿ ತಮ್ಮನಿಗೆ ಬುದ್ಧಿ ಹೇಳಲು ಹೋದ ಅಣ್ಣನನ್ನೆ ತಮ್ಮ ದೊಣ್ಣೆಯಿಂದ ಹೊಡೆದು ಕೊಂದ ಘಟನೆ ಬೈಂದೂರು ಬಿಜೂರಿನ ಬವಳಾಡಿ ಎಂಬಲ್ಲಿ ಗುರುವಾರ ತಡರಾತ್ರಿ ನಡೆದಿದ್ದು, ಶುಕ್ರವಾರ ತಡವಾಗಿ ಬೆಳಕಿಗೆ ಬಂದಿದೆ.

ಘಟನೆಯನ್ನು ಮುಚ್ಚಿ ಹಾಕಲು ಯತ್ನಿಸಿದರೂ ಸ್ಥಳೀಯರ ಅನುಮಾನದಿಂದ ಕೊಲೆ ಘಟನೆ ಬೆಳಕಿಗೆ ಬಂದಿದೆ. ಬವಳಾಡಿ ಮೇಲ್ಮಕ್ಕಿ ಚೌಕಿ ನಿವಾಸಿ ಕುಪ್ಪ ಎಂಬಾತನ ಮಗ ನಾಗರಾಜ(45) ಎಂಬಾತ ಸ್ವಂತ ತಮ್ಮನ ಕೈಯಿಂದ ಕೊಲೆಗೀಡಾದಾತ. ಸಂತೋಷ(21) ಕೊಲೆ ಆರೋಪಿಯಾಗಿದ್ದಾನೆ.

ಘಟನೆಯ ವಿವರ:  ಕುಪ್ಪ ಕೊರಗನ ಡಜನ್ ಮಕ್ಕಳಲ್ಲಿ ನಾಗರಾಜ ಹಾಗೂ ಸಂತೋಷ ಜೊತೆಯಾಗಿಯೇ ಕೂಲಿ ಕೆಲಸಕ್ಕೆ ಹೋಗುತ್ತಿದ್ದವರು. ಗುರುವಾರ ಸಂಜೆ ಇಬ್ಬರೂ ಕೆಲಸ ಮುಗಿಸಿ ಬರುವಾಗ ಬಾಬು ಅವರ ಜೊತೆಗೆ ಕಂಟ ಪೂರ್ತಿ ಕುಡಿದು ಬಂದಿದ್ದರು. ರಾತ್ರಿ ಸುಮಾರು ೯ ಗಂಟೆಗೆ ಊಟ ಮುಗಿಸಿ ನಾಗರಾಜ ತನ್ನ ಬಾವ ಬಾಬು ಎಂಬಾತನೊಂದಿಗೆ ಹೊರಗಡೆಯ ಚಪ್ಪರದ ಕೋಣೆಯಲ್ಲಿ ಮಾತನಾಡುತ್ತಿದ್ದರು.

ಇದೇ ಸಂದರ್ಭ ನಾಗರಾಜನ ತಮ್ಮ ಸಂತೋಷ ಒಳ ಉಡುಪು ಮಾತ್ರ ಧರಿಸಿ ಮನೆಯ ಹೊರಗಡೆ ಓಡಾಡುತ್ತಿದ್ದ ಎನ್ನಲಾಗಿದೆ. ಇದನ್ನು ಗಮನಿಸಿದ ನಾಗರಾಜ ತಮ್ಮನಿಗೆ ಹೆಂಗಸರು ಇರುವ ಜಾಗದಲ್ಲಿ ಹೀಗೆ ಯಾಕೆ ತಿರುಗ್ತೀಯಾ ಎಂದು ಹೇಳಿದ್ದಾನೆ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡಿದ್ದ ಸಂತೋಷ ಪಕ್ಕದಲ್ಲಿಯೇ ಇಡಲಾಗಿದ್ದ ತಂದೆಯ ದೊಣ್ಣೆಯಿಂದ ನಾಗರಾಜನ ತಲೆ, ಮುಖ ಹಾಗೂ ಕಾಲುಗಳಿಗೆ ಬಲವಾಗಿ ಹೊಡೆದಿದ್ದಾನೆ. ತೀವ್ರ ಗಾಯಗೊಂಡ ಅವರು ಸ್ಥಳದಲ್ಲೇ ಬಿದ್ದು ಮೃತಪಟ್ಟಿದ್ದಾರೆ.

ಅಣ್ಣ ಸತ್ತಿರುವುದನ್ನು ಗಮನಿಸಿದ ಆರೋಪಿ ಸಂತೋಷ ನಾಪತ್ತೆಯಾಗಿದ್ದಾನೆ. ಗಾಯಗೊಂಡ ಬಾಬುವನ್ನು ಬೈಂದೂರು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (3) ಅಭಿಪ್ರಾಯವಿಲ್ಲ (0)