ನಾಪತ್ತೆಯಾಗಿದ್ದ ಶಿವಮೊಗ್ಗ ಲೋಕಸಭಾ ಅಭ್ಯರ್ಥಿ ಪತ್ತೆ

0
106

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)

ಶಿವಮೊಗ್ಗ : ನಾಪತ್ತೆಯಾಗಿದ್ದ ಶಿವಮೊಗ್ಗ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿದ್ದ ಪಕ್ಷೇತರ ಅಭ್ಯರ್ಥಿ ಶುಕ್ರವಾರ ಬೆಳಗ್ಗೆ ಪತ್ತೆಯಾಗಿದ್ದಾರೆ.

ನಾಮಪತ್ತೆಯಾಗಿದ್ದ ಮೊಹಮ್ಮದ್ ಯೂಸೂಫ್ ಖಾನ್ ಹಾವೇರಿಯಲ್ಲಿ ಪತ್ತೆಯಾಗಿದ್ದಾರೆ.ಇಂದು ಬೆಳಗ್ಗೆ 9 ಗಂಟೆಗೆ ಪತ್ನಿ ಮೊಬೈಲ್ ಗೆ ಕರೆ ಮಾಡಿ ಹಾವೇರಿಯಲ್ಲಿ ಇರುವುದಾಗಿ ತಿಳಿಸಿದ್ದಾರೆ.

ಗುರುವಾರದಿಂದ ಅಭ್ಯರ್ಥಿ ನಾಪತ್ತೆಯಾಗಿದ್ದು, ಈ ಸಂಬಂಧ ಕುಟುಂಬಸ್ಥರು ಶಿವಮೊಗ್ಗದ ತುಂಗಾನಗರ ಪೋಲಿಸ್ ಠಾಣೆಗೆ ದೂರು ನೀಡಿದ್ದರು.

ಕಳೆದ ರಾತ್ರಿ ಶಿವಮೊಗ್ಗ ಎಸ್ ಪಿ ಡಾ. ಅಶ್ವಿನಿ, ಎಎಸ್ ಪಿ ಶೇಖರ್ ಟೆಕಣ್ಣನವರ್ ನೇತೃತ್ವದಲ್ಲಿ ಕುಟುಂಬದ ವಿಚಾರಣೆ ನಡೆಸಲಾಗಿತ್ತು. ಎಪ್ರಿಲ್ 17 ರ ರಾತ್ರಿ 2 ಗಂಟೆಗೆ ಮನೆಯಲ್ಲಿ ಮೊಬೈಲ್ ಬಿಟ್ಟು ಕಾರಿನಲ್ಲಿ ತೆರಳಿದ್ದ ಯುಸೂಫ್ ಬಳಿಕ ಮನೆಗೆ ಮರಳಿರಲಿಲ್ಲ. ಇದೀಗ ಹಾವೇರಿಯಲ್ಲಿ ಅಭ್ಯರ್ಥಿಯ ಪತ್ತೆಯಾಗಿದೆ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)