ಹಾಲಿಡೇ ಪ್ಯಾಕೇಜ್ ಅಭ್ಯರ್ಥಿಗಳಿಂದ ಕ್ಷೇತ್ರ ಅಭಿವೃದ್ದಿ ನಿರೀಕ್ಷಿಸಲಾಗದು: ಕುಮಾರ್ ಬಂಗಾರಪ್ಪ

0
171

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು :  ಕಳೆದ ವಿಧಾನಸಭೆಯ ಚುನಾವಣೆಯ ಬಳಿಕ ಈಗಿನ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಮಲೆನಾಡು ಭಾಗದಲ್ಲಿ ಕಾಣಸಿಗಲಿಲ್ಲ.ಆ ಬಳಿಕ ವಿದೇಶ ಪ್ರವಾಸದಲ್ಲಿದ್ದ ಅವರನ್ನು ಜೆಡಿಎಸ್ ವತಿಯಿಂದ ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ನಿಲ್ಲಿಸಲಾಗಿತ್ತು.ಅದಾದ ಬಳಿಕ ಮತ್ತೆ ಪ್ಯಾಕೇಜ್ ಟೂರ್‍ನಲ್ಲಿ ವಿದೇಶದಲ್ಲಿರುವ ಅವರು ಈ ಬಾರಿ ಮತ್ತೆ ಲೋಕಸಭಾ ಅಭ್ಯರ್ಥಿಯಾಗಿ ಜನರಲ್ಲಿ ಮತಯಾಚಿಸಲು ಬಂದಿದ್ದಾರೆ.ಬಹುತೇಕ ಸಮಯ ಪ್ಯಾಕೇಜ್ ಟೂರ್‍ನಲ್ಲೆ ಕಳೆಯುವ ಇಂತಹ ಅಭ್ಯರ್ಥಿಗಳಿಂದ ಕ್ಷೇತ್ರದ ಜನತೆ ಪ್ರಗತಿಯನ್ನು ನಿರೀಕ್ಷಿಸುವುದಾದರು ಹೇಗೆ ಎಂದು ಸೊರಬ ಶಾಸಕ ಕುಮಾರ ಬಂಗಾರಪ್ಪ ಲೇವಡಿ ಮಾಡಿದರು.ಅವರು ಬೈಂದೂರು ಬಿಜೆಪಿ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ ಭವ್ಯ ಭಾರತದ ನಿರ್ಮಾಣಕ್ಕೆ ಮೋದಿ ಮತ್ತೆ ಅ„ಕಾರಕ್ಕೆ ಬರಬೇಕಾಗಿದೆ.ದೇಶದ ಭದ್ರತೆ,ಅಭಿವೃದ್ದಿ,ಜನಪರ ಕಲ್ಯಾಣ ಯೋಜನೆಗಳಲ್ಲಿ ಮೋದಿ ಸರಕಾರ ತೆಗೆದುಕೊಂಡ ದಿಟ್ಟ ನಿಲುವು ಇಂದು ಭಾರತವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಿದೆ.ಕಾಂಗ್ರೆಸ್ ಕಾರ್ಯಕರ್ತರನ್ನು ಕಡೆಗಣಿಸುವ ಅವರ ಹಿರಿಯ ನಾಯಕರಿಂದಾಗಿ ಇಂದು ಕಾಂಗ್ರೆಸ್ ಪಕ್ಷ ನಿರ್ನಾಮದತ್ತ ಸಾಗುತ್ತಿದೆ.ಸ್ವಂತಃ ಅಭ್ಯರ್ಥಿಗಳಿಲ್ಲದ ಪರಿಸ್ಥಿತಿ ಖಂಡಿದೆ ಎಂದರು.

ಡಿ.ಕೆ ಶಿವಕುಮಾರ್ ಉಸ್ತುವಾರಿ ಕುರಿತು ಪ್ರತಿಕ್ರಯಿಸಿದ ಅವರು ಕನಕಪುರ ಹೊರತುಪಡಿಸಿದರೆ ಉಳಿದ ಕಡೆ ಅವರ ವರ್ಚಸ್ಸುಗಳಿಲ್ಲ.ಹೀಗಾಗಿ ಬಿಜೆಪಿ ತಳಮಟ್ಟದ ಕಾರ್ಯಕರ್ತರನ್ನು ಹೊಂದಿದೆ.ಇಲ್ಲಿ ಯಾರ ಹವಾನು ನಡೆಯೊಲ್ಲ ಎಂದು ಟಾಂಗ್ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ ಸದಸ್ಯ ಸುರೇಶ್ ಬಟ್ವಾಡಿ,ಬಿಜೆಪಿ ಮಂಡಲದ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು,ಪ್ರವೀಣ ಗುಂಡ್ಮಿ,ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ ಉಪ್ಪುಂದ,ಮಹಿಳಾ ಮೋರ್ಚಾದ ಅಧ್ಯಕ್ಷೆ ಪ್ರಿಯದರ್ಶಿನಿ,ತಾ.ಪಂ ಸದಸ್ಯ ಪುಷ್ಪರಾಜ್ ಶೆಟ್ಟಿ ಉಪಸ್ಥಿತರಿದ್ದರು.

ಬಿಜೆಪಿ ಮಂಡಲದ ಕಾರ್ಯದರ್ಶಿ ದೀಪಕ್ ಕುಮಾರ್ ಶೆಟ್ಟಿ ಸ್ವಾಗತಿಸಿದರು.ಬಾಲಚಂದ್ರ ಭಟ್ ವಂದಿಸಿದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)