ಶ್ರೀ ಪದ್ಮಾವತಿ ಅಮ್ಮನವರ ನೂತನ ಶಿಲಾ ಮೂರ್ತಿಯ ಪುರ ಮೆರವಣಿಗೆ

0
243

ಹೆಚ್ಚಿನ ಓದುಗರು ಈ ಸುದ್ದಿಯನ್ನು ಸಮ್ಮತ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (1) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

  

ಸಪರಿವಾರ, ಶ್ರೀ ಪದ್ಮಾವತಿ ಅಮ್ಮನವರ ದೇವಸ್ಥಾನ ಜೀರ್ಣೊದ್ಧಾರ ಸಮಿತಿ, ಹಾಗೂ ಶ್ರೀ ಪದ್ಮಾವತಿ ಅಮ್ಮನವರ ಸೇವಾ ಸಮಿತಿ (ರಿ) ನಾವುಂದ ಇದರ ವತಿಯಿಂದ ಮೇ.05ರಿಂದ ಮೇ07ರ ನರೆಗೆ ನಡೆಯುವ ಶ್ರೀ ಪದ್ಮಾವತಿ ಅಮ್ಮನವರ ನೂತನ ಶಿಲಾ ದೇಗುಲ ಉದ್ಘಾಟನೆ ಶಿಲಾ ಮೂರ್ತಿ ಪ್ರತಿಷ್ಠಾಪನಾ ಅಂಗವಾಗಿ ಏ.09ರಂದು ನೂತನ ಮೂರ್ತಿಯ ಶಿಲಾ ಮೂರ್ತಿಯ ಪುರ ಮೆರವಣಿಗೆ ವಿಜೃಂಭಣೆಯಿಂದ ನೆರವೇರಿತು.

ಏ.10ರಂದು ಬೆಳಿಗ್ಗೆ 8.45ಕ್ಕೆ ನೂತನ ಶಿಲಾ ಮೂರ್ತಿಯ ಜಲಾಧಿವಾಸ ಪ್ರಕ್ರಿಯೇ ನೆರವೇರಿತು. ತದನಂತರ ಚಪ್ಪರ ಮೂಹುರ್ತವು ಸೇವಾ ಸಮಿತಿಯ ಗೌರವ ಅಧ್ಯಕ್ಷರಾದ ಪಿ. ನಾರಾಯಣ ಖಾರ್ವಿ ಅಧ್ಯಕ್ಷರಾದ ಜಿ.ಓ ಮಸ್ಕಿ ಹಾಗೂ ಜೀರ್ಣೊದ್ಧಾರ ಸಮಿತಿ ಅಧ್ಯಕ್ಷರಾದ ಅಶೋಕ ಕುಮಾರ ಶೆಟ್ಟಿ ಹಾಗೂ ಮುಂಬಯಿ ಶಾಖಾ ಗೌರವಧ್ಯಕ್ಷರಾದ ನಾಗೇಶ್ ಪುತ್ರನ್ ನೇತೃತ್ವದಲ್ಲಿ ನೆರವೇರಿತು.

ಈ ಎರಡು ಸಮಾರಂಭದಲ್ಲಿ ಶ್ರೀಯುತರಾದ ಆನಂದ ಆರ್ ತೋಳಾರ , ಭಾಸ್ಕರ್ ಪುತ್ರನ್, ರತ್ನಾಕರ ಖಾರ್ವಿ, ರಾಜು ಶ್ರೀಯಾನ್, ಸುರೇಶ್ ಚಂದನ್ ಮುಂಬಯಿ, ನರಸಿಂಹ, ಮತ್ತು ಸ್ಥಳೀಯ ನಾಲ್ಕು ರಾಣಿಬಲೆ ಫಂಡಿನ ಸರ್ವ ಸದಸ್ಯರು, ಹಾಗೂ ಊರಿನ ಹತ್ತು ಸಮಸ್ತರು ಉಪಸ್ಥಿತರಿದ್ದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಸಮ್ಮತ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (1) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)