ಉಪ್ಪುಂದ ಜೆಸಿಐ ವತಿಯಿಂದ ಉಚಿತ ಮಧುಮೇಹ ತಪಾಸಣಾ ಶಿಬಿರ

0
195

ಹೆಚ್ಚಿನ ಓದುಗರು ಈ ಸುದ್ದಿಯನ್ನು ಸಮ್ಮತ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (1) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

   

ಜೆಸಿಐ ಉಪ್ಪುಂದ ಹಾಗೂ ಏನಾಯುಸ್ ಆರೋಗ್ಯ ಪ್ರತಿಷ್ಠಾನದ ವತಿಯಿಂದ ವಿಶ್ವ ಮಧುಮೇಹ ದಿನಾಚರಣೆಯ ಅಂಗವಾಗಿ ಕಂಚಿಕಾನ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಮಧುಮೇಹ ತಪಾಸಣಾ ಶಿಬಿರ ನೆಡೆಸಲಾಯಿತು.

ಜೆಸಿಐ ಉಪ್ಪುಂದದ ಅಧ್ಯಕ್ಷರಾದ ಪುರಂದರ್ ಖಾರ್ವಿಯವರು ಅಧ್ಯಕ್ಷತೆ ವಹಿಸಿ ಮಾತನಾಡಿ ದಶಕದ ಹಿಂದೆ ಮಧುಮೇಹ ಎಂಬುದು 40 ವರ್ಷದ ನಂತರ ಬರುವ ರೋಗವೆಂದು ನಂಬಲಾಗುತ್ತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ನಮ್ಮ ಜೀವನಶೈಲಿ ಬದಲಾದಂತೆಲ್ಲಾ ರೋಗ ಚಿತ್ರಣಗಳು ಬದಲಾಗತೊಡಗಿವೆ. ಇದರ ಪರಿಣಾಮ ಮಧುಮೇಹ ಎಂಬುದು ಹುಟ್ಟುವ ಮಗುವಿನಿಂದ ಹಿಡಿದು ವೃದ್ಧರವರೆಗೆ ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ವಿಚಾರವಾಗಿದೆ.

ಇದನ್ನು ಪ್ರಾರಂಭಿಕ ಹಂತದಲ್ಲೇ ಗುರುತಿಸಿ ಸರಿಪಡಿಸಿ ಕೊಳ್ಳಬೇಕು ಎಂದು ಹೇಳಿದರು.ಬೈಂದೂರು ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ನಾಗರತ್ನ ಪೂಜಾರಿ ಮಧುಮೇಹ ತಪಾಸಣೆ ನೆಡೆಸಿದರು.ವಿದ್ಯಾರ್ಥಿಗಳು ಹಾಗೂ ಪೋಷಕರು ಇದರ ಸದುಪಯೋಗವನ್ನು ಪಡೆದುಕೊಂಡರು. ಈ ಸಂಧರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಮಹಾಬಲೇಶ್ವರ ಐತಾಳ್, ಪೂರ್ವಾಧ್ಯಕ್ಷರಾದ ಸುಬ್ರಮಣ್ಯ ಜಿ, ಉಪಾಧ್ಯಕ್ಷರಾದ ಗಣೇಶ್ ಗಾಣಿಗ,ನರಸಿಂಹ ದೇವಾಡಿಗ,ನಾಗರಾಜ್ ಉಬ್ಜರಿ, ಜಗದೀಶ್ ದೇವಾಡಿಗ,ಶಾಲೆಯ ಶಿಕ್ಷಕ ವ್ರoದ ಎಸ್ ಡಿ ಎಂ ಸಿಯ ಅಧ್ಯಕ್ಷರು ಸದಸ್ಯರು ಉಪಸ್ಥಿತರಿದ್ದರು.

ಜೆಸಿಐ ಉಪ್ಪುಂದದ ಕಾರ್ಯದರ್ಶಿಯಾದ ದೇವಾರಾಯ ದೇವಾಡಿಗ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

ವರದಿ : ಪುರಷೋತ್ತಮದಾಸ್ ಉಪ್ಪುಂದ

ಹೆಚ್ಚಿನ ಓದುಗರು ಈ ಸುದ್ದಿಯನ್ನು ಸಮ್ಮತ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (1) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)