ಜೆಸಿಐ ಉಪ್ಪುಂದ ಇದರ ವತಿಯಿಂದ ನಾನು ಮತ್ತು ನನ್ನ ಮತ ಮಾರಾಟಕ್ಕಿಲ್ಲ ಎನ್ನುವ ಸಂದೇಶದೊಂದಿಗೆ ಮತದಾರರ ಜಾಗೃತಿ ಕಾರ್ಯಕ್ರಮ

0
134

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

    

ಜೆಸಿಐ ಉಪ್ಪುಂದ ಇದರ ವತಿಯಿಂದ ನಾನು ಮತ್ತು ನನ್ನ ಮತ ಮಾರಾಟಕ್ಕಿಲ್ಲ ಎನ್ನುವ ಸಂದೇಶದೊಂದಿಗೆ ಮತದಾರರ ಜಾಗೃತಿ ಕಾರ್ಯಕ್ರಮ ಬೈಂದೂರಿನಿಂದ ನಾವುಂದ ವರೆಗೆ ಬೈಕ್ ಜಾತಾ ಮೂಲಕ ನೆರವೇರಿತು.

ಬೈಕ್ ಜಾತಕ್ಕೆ ಚಾಲನೆ ನೀಡಿ ಮಾತನಾಡಿದ ಬೈಂದೂರು ತಹಶೀಲ್ದಾರ್ ಬಸಪ್ಪ ಪೂಜಾರಿ “ಮತದಾರರು ಸ್ವಯಂ ಜಾಗೃತರಾಗಿ ಯಾವುದೇ ಆಮಿಷಗಳಿಗೆ ಒಳಗಾಗದೇ ಮತದಾನ ಮಾಡಬೇಕು ಮತ್ತು ಇದುವರೆಗಿನ ಎಲ್ಲಾ ಗರಿಷ್ಠ ಮತದಾನ ದಾಖಲೆಯನ್ನು ಈ ಬಾರಿ ನಾವು ಮೀರಿ ಸಾಧಿಸಬೇಕು ಎಂದರು”.

ಬೈಕ್ ರ್ಯಾಲಿಯ ಸಮಾರೋಪ ಸಮಾರಂಭದಲ್ಲಿ ರಿಚರ್ಡ್ ಅಲ್ಮೆಡ ಕಾಲೇಜಿನಲ್ಲಿ ಕಾಲೇಜಿನ ಯುವ ಮತದಾರ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಬೈಂದೂರು ತಾಲ್ಲೂಕು ಸಹಾಯಕ ಚುನಾವಣಾ ಅಧಿಕಾರಿ ಕಮಲಾದರ್ ರವರು ಮಾತನಾಡಿ “ನೂರು ಶೇಕಡಾ ಮತದಾನ ವನ್ನು ಸಾಧಿಸಲು ಯುವ ಮತದಾರರು ಇತರರಿಗೆ ಪ್ರೇರಣೆಯಾಗಬೇಕು , ನಿರ್ಭೀತ ನ್ಯಾಯ ಸಮ್ಮತ ಮತದಾನಕ್ಕೆ ನಮ್ಮೊಂದಿಗೆ ಕೈ ಜೋಡಿಸಿ ಎಂದರು”

ವರದಿ : ಪುರಷೋತ್ತಮದಾಸ್ ಉಪ್ಪುಂದ

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)