ಕರ್ನಾಟಕದ ರಾಜ್ಯದಲ್ಲಿ 22 ಕ್ಷೇತ್ರಗಳಲ್ಲಿ ಬಿಜೆಪಿ ಗೆಲವು ನಿಶ್ಚಿತ: ಮಾಜಿ ಮುಖ್ಯಮಮಂತ್ರಿ ಬಿ.ಎಸ್. ಯಡಿಯೂರಪ್ಪ

0
242

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)

    

ಬೈಂದೂರು : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಭ್ರಷ್ಟ ಸರ್ಕಾರದಿಂದ ಜನತೆ ಬೇಸತ್ತಿದೆ. ಸರ್ಕಾರವು ಅಧಿಕಾರಿಗಳ ವರ್ಗಾವಣೆಯಲ್ಲಿಯೇ ಕಾಲಕಳೆಯುತ್ತಿದೆ. ಐಟಿ ಅಧಿಕಾರಿಗಳು ದಾಳಿ ನಡೆಸಿ ಅಪಾರ ಹಣ ವಶಕ್ಕೆ ಪಡೆದಿದ್ದು ಇದರಿಂದ ಸಿಎಂ ವಿಚಲಿತರಾಗಿದ್ದಾರೆಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬೈಂದೂರಿನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐಟಿ ದಾಳಿ ಎಲ್ಲರ ಮೇಲೆ ನಡೆಯುವ ಬಗ್ಗೆ ತಿಳಿದು ಹಣವನ್ನು ಬೇರೆ ಕಡೆ ಸಾಗಿಸಿದ್ದಾರೆ ಎಂದು ಆರೋಪಿಸಿದರು.

ಮೋದಿಯವರ ಆಡಳಿತದಿಂದ ಭಾರತದ ಆರ್ಥಿಕ ಪರಿಸ್ಥಿತಿ ಸದೃಡವಾಗಿ ಬೆಳೆಯುತ್ತಿದ್ದು ಭಾರತ ಮುಂಚೂಣೆಯಲ್ಲಿದೆ. ಪುಲ್ವಾಮಾ ದಾಳಿ ಬಗ್ಗೆ ಎರಡು ವರ್ಷ ಮೊದಲೇ ತಿಳಿದಿದೆ ಎಂದು ಸಿಎಂ ಬೇಜಬ್ದಾರಿ ಹೇಳಿಕೆ ನೀಡಿದ್ದು ಇದು ಮುಖ್ಯಮಂತ್ರಿ ಸ್ಥಾನಕ್ಕೆ ತಕ್ಕುದಲ್ಲ. ಇದು ನಾಚಿಕೆಗೇಡಿನ ಹೇಳಿಕೆಯಾಗಿದ್ದು ಅವರು ಭವಿಷ್ಯ ಹೇಳ್ತಿದ್ದಾರಾ ? ಒಂದಮ್ಮೆ ದಾಳಿ ಬಗ್ಗೆ ತಿಳಿದಿದ್ದರೆ ಕೇಂದ್ರ ಸರ್ಕಾರಕ್ಕೂ ಅಥವಾ ಸಂಬಂಧಪಟ್ಟ ಉನ್ನತ ಅಧಿಕಾರಿಗಳಿಗೆ ತಿಳಿಸಬಹುದಿತ್ತು.

ಸುಮಲತಾ ಅವರು ಮಂಡ್ಯದಲ್ಲಿ ಗೆಲ್ಲಲಿದ್ದು ಅವರ ಪಕ್ಷಕ್ಕೆ ಬರುವ ಬಗ್ಗೆ ನಾವಿನ್ನೂ ಆಹ್ವಾನ ನೀಡಿಲ್ಲ, ಬದಲಾಗಿ ನಮ್ಮ ಬೆಂಬಲ ಅವರಿಗೆ ನೀಡಿದ್ದೇವೆ ಎಂದರು.

ದೇಶದಲ್ಲಿ ಕನಿಷ್ಠ 300 ಹಾಗೂ ಕರ್ನಾಟಕದಲ್ಲಿ ಕನಿಷ್ಠ 22 ಕ್ಷೇತ್ರಗಳಲ್ಲಿ ಬಿಜೆಪಿ ಗೆಲವು ನಿಶ್ಚಿತ ಎಂದು ಹೇಳಿದರು.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾದ ಪೂಜಾರಿ ಮಾತನಾಡಿ ಹಿಂದಿನ ಚುನಾವಣೆಯಲ್ಲಿ ಕಾಂಗ್ರೇಸ್ ಮುಕ್ತ ಭಾರತವನ್ನು ಪೂರ್ಣ ಪ್ರಮಾಣದಲ್ಲಿ ಸಕಾರಗೊಳಿಸಲು ನಮ್ಮಿಂದ ಸಾಧ್ಯ ಆಗಿಲ್ಲ ಆದರೆ ಆ ಕೆಲಸವನ್ನು ಮಾಜಿ ಪ್ರಧಾನಿ ದೇವೇಗೌಡರು ಮಾಡುತ್ತಿದ್ದಾರೆ. ಜೆಡಿಎಸ್ ಗ್ರಾ.ಪಂ ಸದಸ್ಯರು ಇಲ್ಲದ ಲೋಕಸಭಾ ಕ್ಷೇತ್ರಗಳಲ್ಲಿ ಅವರ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಕಾಂಗ್ರಸ್ ಪಕ್ಷದ ಕಾರ್ಯಕರ್ತರಿಗೆ ಕೈ ಚಿಹ್ನೆಯನ್ನು ನಾಪತ್ತೆ ಮಾಡಿದ್ದಾರೆ. ನಾಪತ್ತೆ ಮಾಡಿದ್ದಾರೆ. ಹೀಗಾಗಿ ದೊಡ್ಡ ಗೌಡರು ಕಾಂಗ್ರೇಸ್ ಮುಕ್ತ ಕರ್ನಾಟಕದ ಪ್ರಯತ್ನದಲ್ಲಿದ್ದಾರೆ ಎಂದು ಲೇವಡಿ ಮಾಡಿದರು.

ಈ ಸಂದರ್ಭದಲ್ಲಿ ಕಾರ್ಕಳ ಶಾಸಕ ಸುನಿಲ್ ಕುಮಾರ್, ಬೈಂದೂರು ಶಾಸಕ ಬಿ.ಎಮ್ ಸುಕುಮಾರ ಶೆಟ್ಟಿ, ವಿಜಯೇಂದ್ರ, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಭಾರತಿ ಶೆಟ್ಟಿ, ಧತ್ತಾತ್ರೇಯ, ಯಶಪಾಲ್ ಸುವರ್ಣ, ಸುಪ್ರಸಾದ್ ಬಕಾಡಿ, ಜಿ,ಪಂ ಸದಸ್ಯರಾದ ಸುರೇಶ ಬಟ್ವಾಡಿ, ಶಂಕರ ಪೂಜಾರಿ ಮುಂತಾದವರು ಹಾಜರಿದ್ದರು.

ದೀಪಕ ಕುಮಾರ ಶೆಟ್ಟಿ ನಿರ್ವಹಿಸಿದರು. ಕ್ಷೇತ್ರ ಬಿಜೆಪಿ ಮಂಡಲ ಅಧ್ಯಕ್ಷ ಸದಾನಂದ ಉಪನಕುದ್ರ ಸ್ವಾಗತಿಸಿದರು. ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಶರತ್ ಶೆಟ್ಟಿ ವಂದಿಸಿದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)