ಸುಮಲತಾ ಗೆಲುವಿಗಾಗಿ ಅಂಬಿ ಅಭಿಮಾನಿಯಿಂದ `ಉರುಳು ಸೇವೆ’!

0
170

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಮೈಸೂರು : ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಚುನಾವಣೆಯಲ್ಲಿ ಗೆಲುವು ಸಾಧಿಸಲಿ ಎಂದು ಅಂಬಿ ಅಭಿಮಾನಿಯೊಬ್ಬರು ಉರುಳು ಸೇವೆ ಮಾಡಿದ್ದಾರೆ.

ಕೆ.ಆರ್.ನಗರದ ಆಂಜನೇಯ ಬ್ಲಾಕ್ ನಿವಾಸಿಯಾಗಿರುವ ಬೆನಕಪ್ರಸಾದ್, ದಿ.ರೆಬಲ್ ಸ್ಟಾರ್ ಅಂಬರೀಶ್ ಅವರ ಅಭಿಮಾನಿ, ಈ ಬಾರಿ ಚುನಾವಣೆಯಲ್ಲಿ ಸುಮಲತಾ ಗೆಲುವು ಸಾಧಿಸಲಿ ಎಂದು ನಗರದ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಯಡತೊರೆಯಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನದವರೆಗೆ ಉರುಳು ಸೇವೆ ನಡೆಸಿದ್ದಾರೆ.

ಯುವಕನ ಉರುಳು ಸೇವೆ ಸಂಜೆ 4 ಗಂಟೆಗೆ ಪೂರ್ಣಗೊಳ್ಳಲಿದ್ದು, ಎಡತೊರೆಯ ಕಾವೇರಿ ನದಿಯಲ್ಲಿ ಸ್ನಾನ ಮಾಡಿ ಸುಮಲತಾ ಗೆಲುವಿಗಾಗಿ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಲಿದ್ದಾರೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)