ಐಸ್‌ಕ್ಯಾಂಡಿ ಸೇವಿಸಿ ಐವತ್ತೂ ಹೆಚ್ಚು ಮಕ್ಕಳು ಅಸ್ವಸ್ಥ – ಫುಡ್ ಪಾಯಿಸನ್‌ಗೆ ನಲುಗಿದ ಹೆಂಗವಳ್ಳಿ, ತೊಂಬತ್ತು, ಮತ್ತು ಬೆಳ್ವೆ

0
264

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)

ಕುಂದಾಪುರ: ಭಾನುವಾರದ ರಜೆಯ ಖುಷಿಯಲ್ಲಿ ಐಸ್ ಕ್ಯಾಂಡಿ ಸೇವಿಸಿದ ಐವತ್ತಕ್ಕೂ ಹೆಚ್ಚು ಮಕ್ಕಳಿಗೆ ಫುಡ್ ಪಾಯಿಸನ್ ಆಗಿ ಆಸ್ಪತ್ರೆಗೆ ದಾಖಲಾದ ಘಟನೆ ಭಾನುವಾರ ತಡ ರಾತ್ರಿ ಕುಂದಾಪುರ ತಾಲೂಕಿನ ಬೆಳ್ವೆ, ಹೆಂಗವಳ್ಳಿ, ಹೈಕಾಡಿ, ಹಾಲಾಡಿ ಬಿದ್ಕಲ್‌ಕಟ್ಟೆ ಹಾಗೂ ತೊಂಬತ್ತು ಮೊದಲಾದ ಪ್ರದೇಶಗಳಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ಪ್ರಕರಣದಲ್ಲಿ ಗಂಭೀರಗೊಂಡ ಸುಮಾರು ಮೂವತ್ತಕ್ಕೂ ಮಿಕ್ಕಿದ ಮಕ್ಕಳನ್ನು ಬೆಳ್ವೆ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಹಾಲಾಡಿಯ ಖಾಸಗೀ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ತೊಂಬತ್ತು ನಿವಾಸಿಗಳಾದ ಸಾತ್ವಿಕ್ (8), ಕೃತಿಕಾ (11), ದಿಶಾ(3.5) ತಾಯಿ ಜ್ಯೋತಿ (32), ಭುವನ್ (2.5) ತಾಯಿ ಲಕ್ಷ್ಮೀ(26), ಆಶಾ(8), ಪವಿತ್ರಾ(13), ಹಾಗೂ ಮದ್ವಿತಿ(5) ಕುಂದಾಪುರದ ಸರ್ಕಾರೀ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಸೋಮವಾರ ಮಧ್ಯಾಹ್ನ ದಾಖಲಿಸಲಾಗಿದೆ.

ಘಟನೆಯ ವಿವರ: ಶನಿವಾರ ಹಾಗೂ ಭಾನುವಾರ ಹಿಂದಿ ಮಾತಾನಾಡುತ್ತಿದ್ದ ಸುಮಾರು ೪೦ ವರ್ಷ ಪ್ರಾಯದ ವ್ಯಕ್ತಿಯೊಬ್ಬ ಬೈಕಿನಲ್ಲಿ ಐಸ್ ಕ್ಯಾಂಡಿ ಮಾರಲು ಬಂದಿದ್ದ. ಈತ ಪ್ರತೀ ವಾರವೂ ಈ ಭಾಗದಲ್ಲಿ ಐಸ್ ಕ್ಯಾಂಡಿ ಮಾರುತ್ತಿದ್ದ ಎನ್ನಲಾಗಿದ್ದು, ಭಾನುವಾರ ರಜೆಯಾಗಿದ್ದರಿಂದ ಮಕ್ಕಳ ಜೊತೆಗೆ ಮನೆಯವರೂ ಐಸ್ ಕ್ಯಾಂಡಿ ಖರೀದಿಸಿದ್ದರು ಎನ್ನಲಾಗಿದೆ. ಭಾನುವಾರ ತಡ ರಾತ್ರಿ ಸುಮಾರು ೧.೩೦ಕ್ಕೆ ಐಸ್ ಕ್ಯಾಂಡಿ ತಿಂದ ಮಕ್ಕಳು ವಾಂತಿ ಮಾಡಲಾರಂಭಿಸಿದ್ದು, ವಾಂತಿ ನಿಲ್ಲದೇ ಇದ್ದುದರಿಂದ ರಾತ್ರಿ ಬೆಳ್ವೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಬಳಿಕ ಸೋಮವಾರ ಬೆಳಿಗ್ಗೆ ಹಾಲಾಡಿ ಖಾಸಗೀ ಆಸ್ಪತ್ರೆಗೆ ದಾಖಲಿಸಲಾಯಿತು.

ಮಾಹಿತಿಯ ಪ್ರಕಾರ ಹಾಲಾಡಿ ಹಾಗೂ ಬೆಳ್ವೆಯಲ್ಲಿ ಐವತ್ತೆಂಟು ಮಕ್ಕಳು ಹಾಗೂ ತಾಯಂದಿರು ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ. ಇನ್ನೂ ಹಲವು ಮಕ್ಕಳಿಗೆ ವಾಂತಿ ಕಾಣಿಸಿಕೊಂಡು ಅಸ್ವಸ್ಥರಾಗುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಹಲವೆಡೆ ಪ್ರಕರಣಗಳು ಬೆಳಕಿಗೆ ಬಮದಿದ್ದು, ಓರ್ವನೇ ವ್ಯಕ್ತಿ ಮಾರಾಟ ಮಾಡಿರಲು ಸಾಧ್ಯವಿಲ್ಲ ಎನ್ನಲಾಗಿದೆ. ಕನ್ನಡ ಗೊತ್ತಿಲ್ಲದ ವ್ಯಕ್ತಿಗಳು ಸ್ಥಲೀಯವಾಗಿ ಕ್ಯಾಂಡಿ ತಯಾರಿಸಿ ಗ್ರಾಮಿಣ ಭಾಗದಲ್ಲಿ ವಿತರಿಸುತ್ತಿದ್ದಾರೆ ಎನ್ನಲಾಗಿದ್ದು, ಕ್ಯಾಂಡಿ ಮಾರುವವರು ನಾಲ್ಕೈದು ಜನರ ಗುಂಪು ಇದೆ ಎನ್ನಲಾಗಿದೆ. ಕ್ಯಾಂಡಿ ಸರಬರಾಜು ಮಾಡುವ ಪೆಟ್ಟಿಗೆಯಲ್ಲಿ ಯಾವುದೇ ಹೆಸರಾಗಲೀ ಗುರುತಾಗಲೀ ಇಲ್ಲ ಎನ್ನಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಈ ಬಗ್ಗೆ ಕುಂದಾಪುರ ತಾಲೂಕು ಆರೋಗ್ಯ ಅಧಿಕಾರಿ ಡಾ. ನಾಗಭೂಷಣ ಆಸ್ಪತ್ರೆಗಳಿಗೆ ತೆರಳಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)