ವಿಜಯ ಮಕ್ಕಳ ಕೂಟ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಆತ್ರಾಡಿ ವಿದ್ಯಾರ್ಥಿಗಳಿಂದ ಬೆಂಕಿ ರಹಿತ ಅಡುಗೆ

0
214

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಶಾಲೆಗಳಲ್ಲಿ ಕಲಿಕೆಯ ಜೊತೆಯಲ್ಲಿ ಬದುಕಿನ ಅವಶ್ಯಕತೆ ಹಾಗೂ ಕೌಶಲ್ಯ ವೃದ್ದಿಗೂ ಇವತ್ತಿನ ದಿನದಲ್ಲಿ ಅವಕಾಶಗಳು ಸಿಗುತ್ತದೆ. ಪಠ್ಯೇತರ ಚಟುವಟಿಕೆಯಲ್ಲಿ ಹಲವು ಆಯಾಮಗಳನ್ನು ತೆರೆದುಕೊಳ್ಳುತ್ತಿವೆ. ಆ ಹಿನ್ನಲೆಯಲ್ಲಿ ಬೆಂಕಿ ರಹಿತ ಅಡುಗೆಯೂ ಒಂದು. ಮಕ್ಕಳಲ್ಲಿ ಅಡುಗೆಯ ಬಗ್ಗೆ ಅರಿವು ಮೂಡಿಸುವ ಮತ್ತು ಆಹಾರ ಪದಾರ್ಥಗಳ ಬಗ್ಗೆ ತಿಳಿಸುವ ಪ್ರಾಯೋಗಿಕ ವಿಧಾನ ಇದಾಗಿದ್ದು , ಇತ್ತೀಚೆಗೆ ವಿಜಯ ಮಕ್ಕಳ ಕೂಟ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಆತ್ರಾಡಿ ಇಲ್ಲಿನ ವಿದ್ಯಾರ್ಥೀಗಳು ಬೆಂಕಿ ರಹಿತ ಅಡುಗೆ ಮಾಡಿ ಪೋಷಕರ ಮನ ಗೆದ್ದರು.

ಮುಂಡಕ್ಕಿ ಉಪ್ಕರಿ, ಸಾಂಪ್ರದಾಯಿಕ ಅವಲಕ್ಕಿ, ವಿವಿಧ ತರಕಾರಿ ಸಲಾಡ್, ಬ್ರೆಡ್ ಜಾಮ್, ತರಕಾರಿ ಹಣ್ಣುಗಳಿಂದ ಮಾಡಿದ ವಿವಿಧ ತಿನಿಸುಗಳನ್ನು ವಿಧ್ಯಾರ್ಥಿಗಳು ಪ್ರದರ್ಶಿಸಿದರೆ ಜಾಸ್ತಿ ಬಿಸಿಲಿಗೆ ವಿವಿಧ ಬಗೆಯ ಹಣ್ಣಿನ ರಸ ಪೋಷಕರ ಬಾಯಿಗೆ ರುಚಿ ತಣಿಸಿ ಪೋಷಕರನ್ನು ಹೊರದುಂಬಿಸಿತು. ಆಹಾರ ಪದಾರ್ಥಗಳ ತಯಾರಿಕೆಯ ಜೊತೆಗೆ ಅದನ್ನು ಚಂದವಾಗಿ ಪ್ರದರ್ಶಿಸುವಲ್ಲಿ ಖುಷಿ ಪಟ್ಟಿದ್ದಾರೆ.ಆಹಾರ ಪದಾರ್ಥಗಳನ್ನು ತಯಾರಿಸಿದರಷ್ಟೆ ಸಾಲದು ಅದನ್ನು ಗಿರಾಕಿಗೆ ಮುಂದಿಡುವಲ್ಲಿ ವಸ್ತುಗಳನ್ನು ಬಳಕೆ ಮಾಡಬೇಕು. ಬೆಂಕಿ ರಹಿತ ಅಡುಗೆ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದು ಕಲಿಕೆಯ ಜೊತೆಗೆ ಇಂತಹ ಚಟುವಟಿಕೆಗಳ ಪ್ರಾಮುಖ್ಯತೆಯನ್ನು ಮನಗಂಡರು. ವಿಜಯ ಮಕ್ಕಳ ಕೂಟ ಸಂಸ್ಥೆಯ ಸಂಚಾಲಕ ಸುಭಾಶ್ಚಂದ್ರ ಶೆಟ್ಟಿ, ಶಾಲಾ ಮುಖ್ಯೋಪಾದ್ಯಯನಿ ದೀಪಿಕಾ ಸುಭಾಸ್, ಮತ್ತು ಶಾಲೆಯ ಸಿಬ್ಬಂದಿವೃಂದದವರು ಸಹಕರಿಸಿದರು.
ಚಿತ್ರ ವರದಿ : ರಕ್ಷಿತ್ ಕುಮಾರ ಶೆಟ್ಟಿ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)