ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಕೆದಿಂಜೆ ಶಾಲೆಗೆ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಕೊಡುಗೆ ಹಸ್ತಾಂತರ

0
79

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)

ನಂದಳಿಕೆ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ.) ವತಿಯಿಂದ ಕೆದಿಂಜೆ ಶ್ರೀ ವಿದ್ಯಾ ಬೋಧಿನಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಕೊಡುಗೆಯನ್ನು ಸಂಘದ ಅಧ್ಯಕ್ಷರಾದ ನಂದಳಿಕೆ ರಾಜೇಶ್ ಕೋಟ್ಯಾನ್‍ರವರು ಶಾಲಾ ಮುಖ್ಯಶಿಕ್ಷಕರಾದ ಸುವಾಸಿನಿ ವಿ. ಶೆಟ್ಟಿಯವರಿಗೆ ಹಸ್ತಾಂತರಿಸಿದರು.

ಈ ಸಂಧರ್ಭದಲ್ಲಿ ಸಂಘದ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಪೂರ್ವಾಧ್ಯಕ್ಷರಾದ ದಿನೇಶ್ ಪೂಜಾರಿ ಬಿರೋಟ್ಟು, ಕಾರ್ಯದರ್ಶಿ ನಂದಳಿಕೆ ಪ್ರಶಾಂತ್ ಪೂಜಾರಿ, ಸದಸ್ಯರಾದ ಧನಂಜಯ ಕುಲಾಲ್, ಶಾಲಾ ಸಹಶಿಕ್ಷಕರಾದ ಪ್ರಥ್ವೀರಾಜ್ ಬಲ್ಲಾಳ್, ರೇಖಾ ಪೈ, ಗೌರವ ಶಿಕ್ಷಕರಾದ ಮಮತಾ ಜೆ., ಮಮತಾ ಪ್ರಕಾಶ್, ಜಯಲಕ್ಷ್ಮೀ, ಚೇತನಾ ಭರತ್, ರೇಷ್ಮಾ ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)