ಬೈಂದೂರನ್ನು ಮಾದರಿ ಕ್ಷೇತ್ರವನ್ನಾಗಿ ರೂಪಿಸುವುದು ನಮ್ಮ ಗುರಿ: ಬಿ.ವೈ.ರಾಘವೇಂದ್ರ

0
112

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (4) ಸಮ್ಮತ (2) ಅಸಮ್ಮತ (0) ಖಂಡಿಸುವೆ (3) ಅಭಿಪ್ರಾಯವಿಲ್ಲ (0)

ಕುಂದಾಪುರ:  ಶಿವಮೊಗ್ಗ ಲೋಕಸಭಾ ಕ್ಷೇತ್ರವನ್ನು ನಾನು ಎರಡು ಬಾರಿ ಪ್ರತಿನಿಧಿಸಿದ್ದೇನೆ. ಯಡಿಯೂರಪ್ಪನವರು ಒಂದು ಬಾರಿ ಪ್ರತಿನಿಧಿಸಿದ್ದಾರೆ. ಈಗ ಕ್ಷೇತ್ರದ ಶಾಸಕರು ಬಿಜೆಪಿಯವರೆ ಆಗಿದ್ದು ಬೈಂದೂರನ್ನು ಮಾದರಿ ಕ್ಷೇತ್ರವನ್ನಾಗಿ ರೂಪಿಸುವುದು ನಮ್ಮ ಗುರಿ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಹಿಂದಿನಿಂದಲೂ ಕೂಡಾ ಶಿವಮೊಗ್ಗ ಕ್ಷೇತ್ರದ ಬೈಂದೂರಿಗೆ ಸಾಕಷ್ಟು ಅನುದಾನಗಳು ಬಂದಿದೆ. ಮುಂದಿನ ದಿನಗಳಲ್ಲಿ ನಾವೆಲ್ಲಾ ಒಗ್ಗಟ್ಟಾಗಿ ಚುನಾವಣೆ ಎದುರಿಸಬೇಕಾಗಿದೆ. ಕಳೆದ ಚುನಾವಣೆಗಳಲ್ಲಿ 8 ವಿಧಾನ ಸಭಾ ಕ್ಷೇತ್ರಗಳ ಪೈಕಿ ಹೆಚ್ಚು ಅಂತರವನ್ನು ತಂದುಕೊಟ್ಟ ಕ್ಷೇತ್ರ ಎಂದರೆ ಅದು ಬೈಂದೂರು ಎಂದರು

ಮಾ.12ರಂದು ನೆಂಪುವಿನಲ್ಲಿರುವ ಶಾಸಕರ ನಿವಾಸದಲ್ಲಿ ನಡೆದ ವಂಡ್ಸೆ, ಕಾವ್ರಾಡಿ ಶಕ್ತಿ ಕೇಂದ್ರಗಳ ಲೋಕಸಭಾ ಚುನಾವಣೆ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಇವತ್ತಿನಿಂದ ಕ್ಷೇತ್ರಾದ್ಯಂತ ಪ್ರವಾಸ ಆರಂಭ ಮಾಡಿದ್ದೇನೆ. ಕಾರ್ಯಕರ್ತರನ್ನು ಒಟ್ಟುಗೂಡಿಸಿ ಚುನಾವಣೆಗೆ ಸಜ್ಜುಗೊಳಿಸುವ ಕಾರ್ಯ ಆರಂಭವಾಗಿದೆ. ಕಾರ್ಯಕರ್ತರ, ಜನರ ಬಾವನೆಗಳು ಹುಸಿಯಾಗದಂತೆ ಮುಂದೆಯೂ ಕೂಡಾ ಕೆಲಸ ಮಾಡುತ್ತೇನೆ ಎಂದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (4) ಸಮ್ಮತ (2) ಅಸಮ್ಮತ (0) ಖಂಡಿಸುವೆ (3) ಅಭಿಪ್ರಾಯವಿಲ್ಲ (0)