ಶ್ರೀ ತಿರುಮಲ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಪ್ರತಿಷ್ಟಾ ವರ್ಧಂತಿ, ಕಲಶಾಭಿಷೇಕ ಮತ್ತು ವಾರ್ಷಿಕ ಜಾತ್ರೆ

0
64

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ವಂಡ್ಸೆ : ನಮ್ಮ ದೇವಸ್ಥಾನದ ಪ್ರತಿಷ್ಟಾ ವರ್ಧಂತಿ, ಕಲಶಾಭಿಷೇಕ ಮತ್ತು ವಾರ್ಷಿಕ ಜಾತ್ರಾ ಮಹೋತ್ಸವ ಪ್ರಯುಕ್ತ ವೇ.ಮೂ.ಶಾರ್ಕೆ ರಾಮಕೃಷ್ಣ ಭಟ್ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು , ಬಲಿಪೂಜೆ, ಮದ್ಯಾಹ್ನ 2.30 ರಿಂದ ಕರ್ಣಾರ್ಜುನ ಯಕ್ಷಗಾನ ತಾಳಮದ್ದಲೆ ನಡೆಯಿತು. ಭಾಗವತರಾಗಿ ಹೆರಂಜಾಲು ಗೋಪಾಲ ಗಾಣಿಗ ಮತ್ತು ತಂಡ ,ಮತ್ತು ಇನ್ನೊಭ್ಬ ಭಾಗವತರಾಗಿ ದೇವಲ್ಕುಂದ ಆಳ್ವರಮನೆ ಭಾಸ್ಕರ ಶೆಟ್ಟಿ ಮುಂಬಯಿ. ತಾಳಮದ್ದಲೆ ಅರ್ಥದಾರಿಗಳಾಗಿ ಡಾ. ಎಂ. ಪ್ರಭಾಕರ ಜೋಶಿ, ವಿದ್ವಾನ ಉಮಕಾಂತ್ ಭಟ್, ಪಕಳಕುಂಜ ಶ್ಯಾಮಭಟ್, ಹರೀಶ ಬೊಳಂತಿಮೊಗರು, ಸುನೀಲ್ ಹೊಲಾಡು ಭಾಗವಹಿಸಿದ್ದರು.

ಆಡಳಿತ ಮೊಕ್ತೇಸರ ವಿ ಕೆ ಶಿವರಾಮ ಶೆಟ್ಟಿ , ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಗಿಳಿಯಾರು ಶ್ರೀಧರ ಶೆಟ್ಟಿ, ಆಡಳಿತ ಮಂಡಳಿ ಸದಸ್ಯರು, ಜೀರ್ಣೋದ್ದಾರ ಸಮಿತಿ ಸದಸ್ಯರು , ಸಾರ್ವಜನಿಕರು ಭಾಗವಹಿಸಿದ್ದರು.

ಚಿತ್ರ ಮತ್ತು ವರದಿ : ರಕ್ಷಿತ ಕುಮಾರ ವಂಡ್ಸೆ

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)