ಜೆಸಿಐ ಬೈಂದೂರು ಸಿಟಿ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ

0
128

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (3) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು :  ಜೆಸಿಐ ಬೈಂದೂರು ಸಿಟಿ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ರನ್ 9 ಎನ್ನುವ ಕಾರ್ಯಕ್ರಮ ಮಹಿಳೆಯರ ಸ್ವಾಸ್ಥ್ಯಕ್ಕಾಗಿ ಜಾಥಾ ಹೊರಡುವ ಮೂಲಕ ಚಾಲನೆಗೊಂಡಿತ್ತು.

ಜೆಸಿಐ ಬೈಂದೂರು ಸಿಟಿಯ ಅಧ್ಯಕ್ಷ ಜೆಸಿ. ಮಣಿಕಂಠ ಎಸ್ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಹಿಳೆಯರ ಸ್ವಾಸ್ಥ್ಯಕ್ಕಾಗಿ ಜಾಥಾವನ್ನು ಮಾಜಿ ಸೈನಿಕ ಜಾನ್ಸಿ ಥೋಮಸ್ ಚಾಲನೆ ನೀಡಿದರು.

ಬಳಿಕ ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಆಯ್ಕೆಗೊಂಡ ಜ್ಯೋತಿ ಶ್ರೀನಿವಾಸ ಇವರನ್ನು ಜೆಸಿಐ ಬೈಂದೂರು ಸಿಟಿ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿ, ಮಹಿಳೆಯರು ಸಬಲರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರಕಾರ ಕೈಗೊಳ್ಳುತ್ತಿರುವ ಕ್ರಮಗಳು ಶ್ಲಾಘನೀಯ, ಜೆಸಿಐ ಬೈಂದೂರು ಸಿಟಿಯವರು ಇತ್ತೀಚಿನ ದಿನಗಳಲ್ಲಿ ಬೈಂದೂರು ಗ್ರಾಮೀಣ ಭಾಗದಲ್ಲಿ ಹಲವಾರು ಜನ ಮೆಚ್ಚುವ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಜೆಸಿಐ ಬೈಂದೂರು ಸಿಟಿಯ ಜೆಸಿರೇಟ್ ಅಧ್ಯಕ್ಷೆ ಜೆಸಿ. ಪ್ರಿಯದರ್ಶಿನಿ ಬೆಸ್ಕೂರು, ಯಡ್ತರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಮೂಕಾಂಬು ದೇವಾಡಿಗ, ಜೆಐಸಿ ಬೈಂದೂರು ಸಿಟಿ ಉಪಾಧ್ಯಕ್ಷರಾದ ಮಾಣಿಕ್ಯ ಹೋಬಳಿದಾರ್, ಕೆ.ನರೇಂದ್ರ ಶೇಟ್, ಅಶ್ರಫ್, ಯಡ್ತರೆ ಗ್ರಾಮ ಪಂಚಾಯತ್ ಸದಸ್ಯೆ ಸುನಂದಾ ಗೋಪಾಲ ಗಾಣಿಗ ಹಾಗೂ ಜೆಸಿಐ ಬೈಂದೂರು ಸಿಟಿಯ ಸದಸ್ಯರು ಹಾಜರಿದ್ದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (3) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)