ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಜೆಸಿಐ ಉಪ್ಪುಂದದ ವತಿಯಿಂದ ವಾಕಥಾನ್

0
129

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

 

ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಜೆಸಿಐ ಉಪ್ಪುಂದ ವತಿಯಿಂದ ರಿಚರ್ಡ್ ಅಲ್ಮೇಡಾ ಮೆಮೋರಿಯಲ್ ಕಾಲೇಜ್ ನಾವುಂದದಲ್ಲಿ ಹಮ್ಮಿಕೊಂಡಿದ್ದ ವಾಕ್ ಥಾನ್‌ಗೆ ಡಾಕ್ಟರ್ ರೂಪಾ ನಾವುಂದದಲ್ಲಿ ಚಾಲನೆ ನೀಡಿದರು.

ವಾಕಥಾನ್ ನಲ್ಲಿ ಮಹಿಳೆಯರ ಆರೋಗ್ಯದ ಕುರಿತು ಜಾಗ್ರತಿ ಫಲಕಗಳನ್ನು ಪ್ರದರ್ಶಿಸಲಾಯಿತು ವಾಕಥಾನ್ ನಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.ತದನಂತರ ರಿಚರ್ಡ್ ಅಲ್ಮೇಡಾ ಮೆಮೋರಿಯಲ್ ಕಾಲೇಜಿನಲ್ಲಿ ಸಭೆ ನೆಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಉಪ್ಪುಂದ ಜೆಸಿಐ ಅಧಕ್ಷರಾದ ಪುರಂದರ್ ಖಾರ್ವಿ ವಹಿಸಿದ್ದರು.ಈ ಸಂಧರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಜಿ. ಎಸ್ ಹೆಗಡೆ, ಪೂರ್ವಾಧ್ಯಕ್ಷರಾದ ಪ್ರಕಾಶ್ ಭಟ್, NSS ಯೋಜನಾಧಿಕಾರಿ ಯಾದ ಶ್ರೀಮತಿ ಪೂರ್ಣಿಮಾ, ಡಾಕ್ಟರ್ ರೂಪಾ ಮರವಂತೆ, ಉಪಾಧ್ಯಕ್ಷರಾದ ಗಣೇಶ ಗಾಣಿಗ, ಮೊದಲಾದವರು ಉಪಸ್ಥಿತರಿದ್ದರು.

ಜೆ ಜೆ ಸಿ ಅಧ್ಯಕ್ಷೆಯಾದ ಪ್ರಫುಲ್ಲಾ ದೇವಾಡಿಗ ಅತಿಥಿಗಳನ್ನು ಸ್ವಾಗತಿಸಿದರು, ಜೇಸಿ ವಾಣಿಯನ್ನುರಕ್ಷಿತ್ ಶೆಟ್ಟಿ ವಾಚಿಸಿದರು
ಪೂರ್ವಾಧ್ಯಕ್ಷರಾದ ಮಂಗೇಶ್ ಶ್ಯಾನ್ ಭಾಗ್ ನಿರೂಪಿಸಿದರು. ಕಾರ್ಯದರ್ಶಿಯಾದ ದೇವರಾಯ ದೇವಾಡಿಗ ವಂದನಾರ್ಪಣೆಗೈದರು.

ವರದಿ : ಪುರುಷೋತ್ತಮದಾಸ್ ಉಪ್ಪುಂದ

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)