ಬೈಂದೂರು ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ

0
142

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯನ್ನು ಭಾರತೀಯ ಪಾರ್ಟಿ ಕಾರ್ಯಾಲಯ ಬೈಂದೂರಿನಲ್ಲಿ ನಡೆಯಿತು.

ಬೈಂದೂರು ಗ್ರಾಮೀಣ ಭಾಗದಲ್ಲಿ ಭಗವದ್ಗೀತೆ, ಸಹಸ್ರ ವಿಷ್ಣುನಾಮ, ಹನುಮಾನ ಚಾಲಿಸ್ ಮುಖ್ಯ ತರಬೇತುದಾರೆ ಭಾನುಮತಿ ಬಿ.ಕೆ ಬಾಡ, ಮರವಂತೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿಂದಿ ಶಿಕ್ಷಕಿ ಯಶೋದ, ಬೈಂದೂರು ತಾಲೂಕಿನ ವಿದ್ಯುತ್ ಗುತ್ತಿಗೆದಾರೆ ಸವಿತಾ ದಿನೇಶ ಗಾಣಿಗರವರನ್ನು ಈ ಸಂದರ್ಭದಲ್ಲಿ ಗೌರವಿಸಿ ಸನ್ಮಾನಿಸಲಾಯಿತು,

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೈಂದೂರು ಮಹಿಳಾ ಮೋರ್ಚಾ ಅಧ್ಯಕ್ಷೆ ಪ್ರಿಯದರ್ಶಿನಿ ವಹಿಸಿದರು.

ಈ ಸಂದರ್ಭದಲ್ಲಿ ಕುಂದಾಪುರ ತಾಲೂಕ ಪಂಚಯತ್ ಅಧ್ಯಕ್ಷೆ ಶ್ಯಾಮಲ ಕುಂದರ್, ತಾ.ಪಂ ಸದಸ್ಯರಾದ ಮಾಲಿನಿ ಕೆ, ಗಿರಿಜಾ ಖಾರ್ವಿ, ಪಡುವರಿ ಗ್ರಾಮ ಪಂಚಾಯತ್ ಅಧ್ಯಕ್ಷೆ ದೀಪಾ ಶೆಟ್ಟಿ, ಹಾಗೂ ಮಹಿಳಾ ಮೋರ್ಚಾ ಸದಸ್ಯರು ಉಪಸ್ಥಿತರಿದ್ದರು.

ಬಿಜೆಪಿ ಮಂಡಲ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು ಪ್ರಾಸ್ತಾವಿಕ ಮಾತುಗಳನ್ನಾಡಿದರು, ಮರವಂತೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ ಆರ್.ಕೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ಬೈಂದೂರು ಪಂಚಾಯತ್ ಅದ್ಯಕ್ಷೆ ಭಾಗೀರಥಿ ಸುರೇಶ್ ವಂದಿಸಿದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)