ಬೈಂದೂರು : ಮಾ.10ರಿಂದ 12ರ ವರೆಗೆ ಸುರಭಿ ತ್ರಿದಿನ ನಾಟಕೋತ್ಸವ ರಂಗ ಸುರಭಿ – 2019

0
99

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು: ಇಲ್ಲಿನ ಯಸ್ಕೋರ್ಡ್ ಟ್ರಸ್ಟ್ ರಿ. ಹಾಗೂ ಸುರಭಿ ರಿ. ಬೈಂದೂರು ಆಶ್ರಯದಲ್ಲಿ ತ್ರಿದಿನ ನಾಟಕೋತ್ಸವ ರಂಗ ಸುರಭಿ – 2019 ಮಾರ್ಚ್ 10ರಿಂದ 12ವರೆಗೆ ಬೈಂದೂರಿನ ಶ್ರೀ ಶಾರದಾ ವೇದಿಕೆಯಲ್ಲಿ ಪ್ರತಿದಿನ ಸಂಜೆ ಗಂಟೆ 6-30ಕ್ಕೆ ಜರುಗಲಿದೆ.
ಮಾರ್ಚ್ 10ರಂದು ಡಾ. ಶಿವರಾಮ ಕಾರಂತರ ಕಾದಂಬರಿ ಆಧಾರಿತ ‘ಸುರಭಿ ರಿ. ಬೈಂದೂರು’ ಪ್ರಸ್ತುತಿಯ ಗಣೇಶ್ ಎಂ. ಉಡುಪಿ ನಿರ್ದೇಶನದ ನಾಟಕ ‘ಚೋಮನ ದುಡಿ’ ಪ್ರದರ್ಶನಗೊಳ್ಳಲಿದೆ. ಮಾರ್ಚ್ 11ರಂದು ಎಸ್. ಎನ್. ಸೇತೂರಾಮ್ ಕಥೆ ಸಂಭಾಷಣೆ ಆಧಾರಿತ ಭೂಮಿಕಾ ಹಾರಾಡಿ ಪ್ರಸ್ತುತಿಯ, ಬಿ.ಎಸ್ ರಾಂ ಶೆಟ್ಟಿ ಹಾರಾಡಿ ನಿರ್ದೇಶನದ ‘ಕಾತ್ಯಾಯಿನಿ’ ನಾಟಕ ಪ್ರದರ್ಶನಗೊಳ್ಳಲಿದ್ದು, ಮಾಚ್ 12 ರಂದು ಜಯ ತೆಂಡುಲ್ಕರ್‍ರವರ ಮರಾಠಿ ಮೂಲಕದ ಕೃತಿ ಆಧಾರಿತ ವೆಂಕಟೇಶ ಪ್ರಸಾದ ಅನುವಾದ ಹಾಗೂ ನಿರ್ದೇಶನದ ‘ಬೆಂಗಳೂರು ಥಿಯೇಟರ್ ಕಲೆಕ್ಟಿವ್’ ಪ್ರಸ್ತುತಿಯ ‘ಒಂದು ಪ್ರೀತಿಯ ಕಥೆ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಸುರಭಿ ಸಂಸ್ಥೆಯ ಪ್ರಕಟನೆ ತಿಳಿಸಿದೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)