ಜಮ್ಮು ಬಸ್ ನಿಲ್ದಾಣದಲ್ಲಿ ಸ್ಫೋಟ: ಹಲವರಿಗೆ ಗಾಯ

0
744

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಜಮ್ಮು ಕಾಶ್ಮೀರದ ಜನನಿಬಿಡ ಮಾರ್ಕೆಟ್​ ಪ್ರದೇಶದ  ಎಸ್​ಆರ್​ಟಿಸಿ  ಬಸ್​ ನಿಲ್ದಾಣದಲ್ಲಿ ಬಾಂಬ್​ ಸ್ಪೋಟ ಸಂಭವಿಸಿದ್ದು, 18 ಜನರು ಗಾಯಗೊಂಡಿರುವ ಘಟನೆ ವರದಿಯಾಗಿದೆ. ಇದರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ.

ಬಸ್​ ಒಳಗೆ ಪ್ರಬಲ ಗ್ರೆನೇಡ್​ ಫಿಕ್ಸ್ ಮಾಡಲಾಗಿದ್ದು, ಸ್ಪೋಟಿಸಲಾಗಿದೆ ಎಂದು ತಿಳಿದುಬಂದಿದೆ. ಬಸ್​ನಲ್ಲಿ ಎಷ್ಟು ಜನ ಇದ್ದರೂ ಎಂಬ ಬಗ್ಗೆ ಮಾಹಿತಿ ಇಲ್ಲ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ. ದಾಳಿಯ ತೀವ್ರತೆ ಬಗ್ಗೆ ಇನ್ನು ಮಾಹಿತಿ ಲಭ್ಯವಾಗಿಲ್ಲ. ಪೊಲೀಸರು ಸಾಕ್ಷ್ಯ ಸಂಗ್ರಹಕ್ಕೆ ಮುಂದಾಗಿದ್ದಾರೆ.

ಫೆ.14ರಂದು ಪುಲ್ವಾಮದಲ್ಲಿ ಆತ್ಮಹುತಿ ದಾಳಿಕೋರ ಸೇನಾ ಬಸ್​ ಮೇಲೆ ದಾಳಿ ನಡೆಸಿದ ಪರಿಣಾಮ 40 ಸಿಆರ್​ಪಿಎಫ್​ ಯೋಧರು ಸಾವನ್ನಪ್ಪಿದ್ದರು. ಈ ಘಟನೆ ಬೆನ್ನ ಹಿಂದೆಯೇ ಈ ದಾಳಿ ನಡೆದಿದೆ.

ಇನ್ನಷ್ಟು ಮಾಹಿತಿಗೆ ನಿರೀಕ್ಷಿಸಿ….

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)