ನಾನಿನ್ನೂ ಬದುಕಿದ್ದೇನೆ, ಭಾರತದಲ್ಲಿ ಜಿಹಾದ್ ಆರಂಭಿಸುತ್ತೇನೆ’ : ಮಸೂದ್

0
681

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಇಸ್ಲಾಮಾಬಾದ್ ,ಮಾ.7- ಜೈಷ್ ಎ ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಉಗ್ರ ಮಸೂದ್ ಅಜರ್ ಆಡಿಯೋ ಧ್ವನಿಮುದ್ರಿಕೆಯನ್ನು ಬಿಡಗುಡೆ ಮಾಡಿದ್ದು, ಭಾರತಕ್ಕೆ ಬೇಕಾಗಿರುವ ಉಗ್ರ ಮಸೂದ್ ಅಜರ್ ಇನ್ನೂ ಬದುಕಿದ್ದೇನೆ. ಚೆನ್ನಾಗಿಯೇ ಇದ್ದೇನೆ ಎಂದಿದ್ದಾನೆ.

ಅಷ್ಟೇ ಅಲ್ಲದೆ ತನ್ನ ಹಿಂಬಾಲಕರಿಗೆ ಭಾರತೀಯರ ವಿರುದ್ಧ ಜಿಹಾದ್ ಆರಂಭಿಸಬೇಕು ಎಂದು ಕರೆ ನೀಡಿದ್ದಾನೆ. 11.41 ನಿಮಿಷಗಳ ತನ್ನಆಡಿಯೋದಲ್ಲಿ, ಪುಲ್ವಾಮಾ ದಾಳಿ ಹಾಗೂ ಪಾಕ್‍ನಲ್ಲಿರುವ ಪ್ರಗತಿಪರರ ಬಗ್ಗೆ ಮಾತನಾಡಿದ್ದು, ಮಾಧ್ಯಮಗಳಲ್ಲಿ ಹರಡುತ್ತಿರುವ ತನ್ನ ಸಾವಿನ ಕುರಿತು ಸುಳ್ಳು ವದಂತಿ ಬಗ್ಗೆ ಪ್ರಸ್ತಾಪಿಸಿದ್ದು, ನಾನು ಇನ್ನು ಬದುಕಿದ್ದೇನೆ ಎಂದ್ದಿದಾನೆ.

ಪಾಕಿಸ್ತಾನಕ್ಕೆ ಎಲ್ಲ ಕಡೆಗಳಿಂದಲೂ ಒತ್ತಡ ಹಾಕುತ್ತಿರುವ ಭಾರತದ ವಿರುದ್ಧ ಹರಿಹಾಯ್ದಿರುವ ಅಜರ್, ಭಾರತದ ಒತ್ತಡಕ್ಕೆ ಮಣಿದಿರುವ ಪಾಕಿಸ್ತಾನದ ಬಗ್ಗೆಯೂ ಕಿಡಿಕಾರಿದ್ದಾನೆ. ಜೊತೆಗೆ ಭಾರತದ ತಂತ್ರವನ್ನು ಅರ್ಥಮಾಡಿಕೊಳ್ಳುವಲ್ಲಿ ಪಾಕಿಸ್ತಾನ ರಾಜಕೀಯ ವಿಫಲವಾಗಿದೆ ಎಂದಿದ್ದಾನೆ.

ಭಾರತದಲ್ಲಿ ಭಯೋತ್ಪಾದನೆ ಮೂಲಕ ಅನೇಕ ವಿಧ್ವಂಸಕ ಕೃತ್ಯಗಳಿಗೆ ಕಾರಣವಾಗಿದ್ದ ಪಾಕಿಸ್ತಾನದ ಜೈಷ್-ಎ-ಮೊಹಮ್ಮದ್ ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಮತ್ತು ಕುಖ್ಯಾತ ಭಯೋತ್ಪಾದಕ ಮೌಲಾನಾ ಮಸೂದ್ ಅಜರ್ ಮೃತಪಟ್ಟಿದ್ದಾನೆ ಎಂಬ ಸುದ್ದಿ ಇತ್ತೀಚೆಗಷ್ಟೇ ಹರಿದಾಡಿತ್ತು.

ಮೂತ್ರಪಿಂಡ ತೀವ್ರ ವೈಫಲ್ಯದಿಂದ ಬಳಲುತ್ತಿದ್ದ ಜೈಷ್ ಮುಖ್ಯಸ್ಥ ಮತ್ತು ಪುಲ್ವಾಮಾ ದಾಳಿ ರೂವಾರಿ ಅಜರ್ ಪಾಕಿಸ್ಥಾನದ ರಾವಲ್ಪಿಂಡಿಯ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎನ್ನಲಾಗಿತ್ತು. ನಂತರ ಕಿಡ್ನಿ ವೈಫಲ್ಯದಿಂದ ಸದ್ದಿದ್ದ ಎಂಬ ಸುದ್ದಿ ಹರಿದಾಡಿತ್ತು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)