ಪಾಕ್ ವಿರುದ್ಧ ಪಂದ್ಯ ಆಡದಿರುವುದು ನಾವು ಶರಣಾಗುವುದಕ್ಕಿಂತಲೂ ಕೀಳು: ತರೂರ್

0
169

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ನವದೆಹಲಿ, ಫೆಬ್ರವರಿ 22: ಪುಲ್ವಾಮಾ ದಾಳಿಗೆ ಪಾಕಿಸ್ತಾನವೇ ಹೊಣೆಯಾಗಿರುವುದರಿಂದ ಮುಂಬರುವ ವಿಶ್ವಕಪ್ ಕ್ರಿಕೆಟ್‌ನಲ್ಲಿ ಅದರೊಂದಿಗೆ ಪಂದ್ಯ ಆಡಬಾರದು ಎಂಬ ಒತ್ತಾಯಗಳು ಕೇಳಿಬರುತ್ತಿವೆ.

ಭಾರತೀಯ ಕ್ರಿಕೆಟ್ ಮಂಡಳಿ ಸಹ ಪಾಕಿಸ್ತಾನದೊಂದಿಗೆ ಮುಖಾಮುಖಿಯಾಗದಂತೆ ವೇಳಾಪಟ್ಟಿ ಬದಲಿಸಲು ಒತ್ತಡ ಹೇರುವ ಪ್ರಯತ್ನ ನಡೆಸಿದೆ. ಆದರೆ ಸಂಸದ ಶಶಿ ತರೂರ್ ಉಭಯ ತಂಡಗಳ ನಡುವೆ ವಿಶ್ವಕಪ್ ಕ್ರಿಕೆಟ್ ಪಂದ್ಯ ನಡೆಯಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಅದಕ್ಕೆ ಅವರು ಸಮರ್ಥನೀಯ ಕಾರಣವನ್ನೂ ನೀಡಿದ್ದಾರೆ.

‘1999ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ ವಿಶ್ವಕಪ್‌ನಲ್ಲಿ ಆಡಿತ್ತು. ಮತ್ತು ಪಂದ್ಯವನ್ನು ಕೂಡ ಗೆದ್ದುಕೊಂಡಿತ್ತು. ಈ ಬಾರಿಯ ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದು ಕೇವಲ ಎರಡು ಅಂಕಗಳನ್ನು ಕಳೆದುಕೊಳ್ಳುವ ವಿಚಾರವಾಗಲಾರದು. ಅದು ಶರಣಾಗತಿಯಾಗುವುದಕ್ಕಿಂತಲೂ ಹೀನಾಯವಾದದ್ದು. ಇದೊಂದು ರೀತಿ ನಾವು ಹೋರಾಟ ಮಾಡದೆಯೇ ಸೋತಂತೆ’ ಎಂದು ತರೂರ್ ಹೇಳಿದ್ದಾರೆ.

ನಾವು ಕ್ರಿಕೆಟ್‌ಅನ್ನು ಬೇರೆ ಕ್ರಮಗಳಿಗೆ ಪರ್ಯಾಯವಾಗಿ ಬಳಸಿಕೊಳ್ಳಬಾರದು. ಸರ್ಕಾರ ಅದಕ್ಕೆ ಬದಲಾಗಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಪ್ರದರ್ಶಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)