ಉಪ್ಪುಂದ ಸ.ಹಿ.ಪ್ರಾ.ಶಾಲೆ ಅಮ್ಮನವರತೊಪ್ಲು ನೂತನ ಶಾಲಾ ಕೊಠಡಿ ಉದ್ಘಾಟನೆ

0
398

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

 

ಉಪ್ಪುಂದ ; ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಮ್ಮನವರತೊಪ್ಲು ಇದರ ಶಾಲಾ ನೂತನ ಕೊಠಡಿಯನ್ನು ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಅಮ್ಮನವರತೊಪ್ಲು ಪ್ರದೇಶ ಕೊಲ್ಲೂರು ಮೂಕಾಂಬಿಕೆ ಮತ್ತು ಉಪ್ಪುಂದ ದುರ್ಗಾಪರಮೇಶ್ವರಿ ಸನ್ನಿಧಿಗೆ ಅವಿನಾಭವ ಸಂಬಂಧವಿದೆ.ಇಲ್ಲಿನ ಶಾಲೆ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕು ಎಂದರು.ಮುಖ್ಯ ಅತಿಥಿಗಳಾಗಿ ಜಿ.ಪಂ ಸದಸ್ಯ ಸುರೇಶ್ ಬಟ್ವಾಡಿ, ತಾ.ಪಂ ಸದಸ್ಯರಾದ ಪ್ರಮೀಳಾ ದೇವಾಡಿಗ, ಪುಷ್ಪರಾಜ್ ಶೆಟ್ಟಿ.ಗ್ರಾ.ಪಂ ಸದಸ್ಯೆ ಲಲಿತಾ ಖಾರ್ವಿ, ಈಶ್ವರ ಖಾರ್ವಿ, ಸಿ.ಆರ್.ಪಿ ಸುಬ್ರಹ್ಮಣ್ಯ ಜಿ.ಉಪ್ಪುಂದ, ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷೆ ಸೀತಾ ದೇವಾಡಿಗ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾಗರಾಜ ಖಾರ್ವಿ ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕಿ ಸುನಂದ ಮಯ್ಯ ಪ್ರಾಸ್ತಾವನೆಗೈದರು, ವೆಂಕಟರಮಣ ಟಿ.ಸ್ವಾಗತಿಸಿದರು, ಜಯಾನಂದ ಪಟಗಾರ್ ಕಾರ್ಯಕ್ರಮ ನಿರ್ವಹಿಸಿದರು. ಗೌರವ ಶಿಕ್ಷಕಿ ಹರ್ಷಿತಾ ವಂದಿಸಿದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)