ಶವವಾಗಿ ಪತ್ತೆಯಾದ ಬಾಲಿವುಡ್ ಖಳನಟ ಮಹೇಶ್ ಆನಂದ್

0
272

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಮುಂಬೈನ ಅಂಧೇರಿ ಪ್ರದೇಶದ ಫ್ಲಾಟ್‍ನಲ್ಲಿ ಶನಿವಾರ ಬಾಲಿವುಡ್ ನಟ ಮಹೇಶ್ ಆನಂದ್ (57) ಶವವಾಗಿ ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಅವರು ಒಂಟಿಯಾಗಿ ಜೀವನ ನಡೆಸುತ್ತಿದ್ದರು. ಚಿತ್ರರಂಗದಲ್ಲಿ ಅವಕಾಶಗಳಿಲ್ಲದೆ ಕೆಲಸ ಇಲ್ಲದೆ ಖಾಲಿಯಾಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಮ್ಮ ಫ್ಲಾಟ್‌ನಲ್ಲಿ ಮೃತಪಟ್ಟು ಎರಡು ದಿನಗಳಾಗಿರಬಹುದು. ಅವರ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತಮ್ಮ ಎತ್ತರದ ನಿಲುವು ಮತ್ತು ದಷ್ಟಪುಷ್ಟವಾದ ದೇಹದ ಮೂಲಕ 80 ಮತ್ತು 90ರ ದಶಕದಲ್ಲಿ ಎಲ್ಲರ ಗಮನಸೆಳೆದಿದ್ದರು. ಹಲವಾರು ಸಿನಿಮಾಗಳಲ್ಲಿ ಖಳನಟನಾಗಿ ಮಿಂಚಿದ್ದಾರೆ. ಹಲವಾರು ವರ್ಷಗಳಿಂದ ಆರ್ಥಿಕ ಸಂಕಷ್ಟ ಅವರನ್ನು ಕಾಡುತ್ತಿತ್ತು.

ಅಮಿತಾಬ್ ಬಚ್ಚನ್, ಗೋವಿಂದ, ಸಂಜಯ್ ದತ್ ಜತೆಗೆ ಅಭಿನಯಿಸಿದ್ದಾರೆ. ಜನಪ್ರಿಯ ಸಿನಿಮಾಗಳಾದ ಗಂಗಾ ಜಮುನಾ ಸರಸ್ವತಿ, ಷಹನ್‍ಶಾ, ಮಜ್‍ಬೂರ್ (1989), ಕೂಲಿ ನಂಬರ್ 1 (1995), ವಿಜೇತ (1996), ಲಾಲ್ ಬಾದ್‍ಶಾ, ಆಯಾ ತೂಫಾನ್ (1999), ಬಾಘಿ ಮತ್ತು ಕುರುಕ್ಷೇತ್ರ (2000), ಪ್ಯಾರ್ ಕಿಯಾ ನಹಿನ್ ಜಾತಾ (2003) ಚಿತ್ರಗಳಲ್ಲಿ ಮಹೇಶ್ ಅಭಿನಯಿಸಿದ್ದಾರೆ.

ಸುಮಾರು 15 ವರ್ಷಗಳ ಗ್ಯಾಪ್ ಬಳಿಕ ಇತ್ತೀಚೆಗೆ ಪಹಲಜ್ ನಿಹಲಾನಿ ನಿರ್ದೇಶನದ ಗೋವಿಂದ ಜತೆಗೆ ರಂಗೀಲಾ ರಾಜಾ ಚಿತ್ರದಲ್ಲಿ ಅಭಿನಯಿಸಿದ್ದರು. ಮುಂಬೈನ ವರ್ಸೋವಾ ಪೊಲೀಸರು ಮಹೇಶ್ ಆನಂದ್ ಸಾವನ್ನು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮುಂಬೈನಲ್ಲಿ ವಾಸವಾಗಿರುವ ಆನಂದ್ ಸಹೋದರಿಗೂ ಸುದ್ದಿ ತಿಳಿಸಿದ್ದಾರೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)