ಕುಡಿದ ಮತ್ತಿನಲ್ಲಿ ಕಾಲೇಜು ಬಸ್ ಗೆ ಶಾಲಾ ಬಸ್ ಡಿಕ್ಕಿ : 13 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

0
258

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೆಂಗಳೂರು : ಕುಡಿದ ಮತ್ತಿನಲ್ಲಿ ಕಾಲೇಜ್ ಬಸ್ ಗೆ ಶಾಲಾ ಬಸ್ ಡಿಕ್ಕಿ ಹೊಡೆದ ಪರಿಣಾಮ 13 ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಬೆಂಗಳೂರಿನ ಬಾಗಲೂರು ಸಂತೆ ಬಳಿ ನಡೆದಿದೆ.

ಡೆಲ್ಲಿ ಪಬ್ಲಿಕ್ ಸ್ಕೂಲ್ ನ ಬಸ್ ಚಾಲಕ ಕುಡಿದ ಅಮಲಿನಲ್ಲಿ ಬಸ್ ಚಲಾಯಿಸಿ ನಾಗರ್ಜುನ ಕಾಲೇಜ್ ಬಸ್ ಗೆ ಡಿಕ್ಕಿ ಹೊಡೆದಿದ್ದಾನೆ. ಕುಡಿದು ಬಸ್ ಚಲಾಯಿಸಿಕೊಂಉ ಬಂದ ಚಾಲಕ ಮೊದಲು ಬಾಗಲೂರು ಸಂತೆ ಬಳಿ ರಸ್ತೆ ಪಕ್ಕ ನಿಂತಿದ್ದ ನಾಗಾರ್ಜುನ ಕಾಲೇಜ್ ಬಸ್ ಗೆ ಡಿಕ್ಕಿ ಹೊಡೆದಿದ್ದಾನೆ. ನಂತರ ಮುಂದೆ ತೆರಳಿ ಟ್ರಾನ್ಸ್ ಫಾರ್ಮರ್ ಗೆ ಡಿಕ್ಕಿ ಹೊಡೆದಿದ್ದಾನೆ.

ಘಟನೆಯಲ್ಲಿ 13 ವಿದ್ಯಾರ್ಥಿಗಳು ಗಾಯಗೊಂಡಿದ್ದು, ಅದರಲ್ಲಿ ನಿತೀಶ್ ಎಂಬ ವಿದ್ಯಾರ್ಥಿಯ ಕಾಲು ಮುರಿದಿದೆ. ಸಂಜಯ್ ಎಂಬ ವಿದ್ಯಾರ್ಥಿಗೆ ಆರು ಸ್ಟಿಚ್ ಹಾಕಲಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಬಾಗಲೂರು ಪೊಲೀಸರು ಭೇಟಿ ನೀಡಿ ತನಿಖೆ ಮುಂದುವರೆಸಿದ್ದಾರೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)