ಮಾರುಕಟ್ಡೆಗೆ ಲಗ್ಗೆ ಇಟ್ಟ ಮೋದಿ ಫೋಟೋವಿರೋ ಸೀರೆ

0
108

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೆಂಗಳೂರು: ಸಾಮಾನ್ಯವಾಗಿ ಸೀರೆಗಳಲ್ಲಿ ಹೂವುಗಳು, ಪ್ರಾಣಿ, ಪಕ್ಷಿಗಳ ಚಿತ್ರವಿರುತ್ತವೆ. ಅಷ್ಟೇ ಅಲ್ಲದೇ ಕೆಲ ಅಭಿಮಾನಿಗಳು ತಮ್ಮ ನೆಚ್ಚಿನ ನಟ-ನಟಿಯರ ಫೋಟೋವನ್ನು ತಮ್ಮ ಶರ್ಟ್ ನಲ್ಲಿ ಹಾಕಿಸಿಕೊಳ್ಳುತ್ತಾರೆ. ಆದರೆ ಈಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಫೋಟೋವಿರುವ ಸೀರೆ ಮಾರುಕಟ್ಟೆಯಲ್ಲಿ ಟ್ರೆಂಡ್ ಆಗಿದೆ.

ಪ್ರಧಾನಿ ಮೋದಿ ಅವರಿಗೆ ಅಪಾರ ಅಭಿಮಾನಿಗಳು, ಬೆಂಬಲಿಗರು ಇದ್ದಾರೆ. ಆದ್ದರಿಂದ ಈಗ ಪ್ರಧಾನಿ ಮೋದಿ ಅವರು ಟ್ರೆಂಡ್ ಸೀರೆಗೂ ಎಂಟ್ರಿ ಕೊಟ್ಟಿದ್ದಾರೆ. ಸಿಲ್ಕ್ ಕಾಟನ್, ಕ್ರೇಮ್ ಸಿಲ್ಕ್, ಹಾರ್ಟ್ ಸಿಲ್ಕ್ ರೀತಿ ಮೋದಿ ಭಾವಚಿತ್ರವುಳ್ಳ ಸಿಲ್ಕ್ ಸೀರೆ ಕೂಡ ಮಾರುಕಟ್ಟೆಗೆ ಕಾಲಿಟ್ಟಿದೆ.

ಪ್ರಧಾನಿ ಮೋದಿ ಫೋಟೋ ಪ್ರಿಂಟ್ ಇರುವ ಸೀರೆ ಈಗ ಮಾರುಕಟ್ಡೆಗೆ ಲಗ್ಗೆ ಇಟ್ಟಿದ್ದು, ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದೆ. ಅಲ್ಲದೇ ಈ ಸೀರೆ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ಹರಿದಾಡುತ್ತಿದೆ. ಕಲರ್ ಫುಲ್ ಸೀರೆಗಳ ಮೇಲೆ ಮೋದಿ ಫೋಟೋ ಮಾರುಕಟ್ಟೆಯಲ್ಲಿ ಬಿಸಿ ಬಿಸಿ ಬ್ಯುಸಿನೆಸ್‍ಗೆ ಕಾರಣವಾಗಿದೆ. ವ್ಯಾಪಾರಿಗಳಂತೂ ಫುಲ್ ಖುಷ್ ಆಗಿ ಬಿಸಿನೆಸ್ ಭರಾಟೆಯಲ್ಲಿ ತೊಡಗಿದ್ದರೆ, ಮತ್ತೊಂದೆಡೆ ಬಿಜೆಪಿಯವರೆಲ್ಲ ಈ ಸೀರೆಗಳ ಖರೀದಿಗೆ ಮುಗಿ ಬೀಳಬಹುದು ಎಂಬ ಲೆಕ್ಕಚಾರವೂ ಜೋರಾಗಿದೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)