ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾ ಬೈಂದೂರು ವತಿಯಿಂದ ಮಹಿಳಾ ಸ್ವ ಉದ್ಯೋಗ ಮಾಹಿತಿ ಕಾರ್ಯಾಗಾರ

0
275

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (5) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

      

ತ್ರಾಸಿ : ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾ ಬೈಂದೂರು ವತಿಯಿಂದ ಮಹಿಳಾ ಸ್ವ ಉದ್ಯೋಗ ಮಾಹಿತಿ ಕಾರ್ಯಾಗಾರ ತ್ರಾಸಿ ಅಣ್ಣಪ್ಪಯ್ಯ ಸಭಾಭವನ ದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಮಂಡಲ ಅಧ್ಯಕ್ಷರಾದ ಸದಾನಂದ ಉಪ್ಪಿನಕುದ್ರು ನೆರವೇರಿಸಿದರು .

ಜಿಲ್ಲಾ ಮಾಧ್ಯಮ ಪ್ರಕೋಷ್ಠದ ಸಂಚಾಲಕರಾದ ಪೂರ್ಣಿಮಾ ಸುರೇಶ ನಾಯಕ್ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ವಿವರಿಸಿದರು.

ಮಹಿಳೆ ಆರ್ಥಿಕವಾಗಿ ಸಧೃಢ ವಾಗಿದ್ದರೆ ಮಾತ್ರ ಯಾವುದೇ ಸಂದರ್ಭವನ್ನು ಎದುರಿಸಲು ಸಾಧ್ಯ ಅದಕ್ಕಾಗಿ ಸ್ವಂತ ಉದ್ಯೋಗ ಮಾಡಿ ತಮ್ಮ ಸುತ್ತಮುತ್ತಲಿನ ಮಹಿಳೆಯರಿಗೆ ಉದ್ಯೋಗ ಒದಗಿಸುದರ ಮೂಲಕ ತಾವು ಬೆಳೆದು ಇತರರನ್ನು ಬೆಳೆಸುವ ಅವಕಾಶ ಸಿಗಲಿ ಎನ್ನುವುದು ಈ ಕಾರ್ಯಾಗಾರದ ಮೂಲ ಉದ್ದೇಶ ಎಂದು ಮಹಿಳಾ ಮೋರ್ಚಾ ಅಧ್ಯಕರಾದ ಪ್ರಿಯದರ್ಶಿನಿ ದೇವಾಡಿಗ ತಮ್ಮ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಸಣ್ಣ ಕೈಗಾರಿಕೆ ಕ್ಷೇತ್ರದಲ್ಲಿರುವ ಅವಕಾಶಗಳು ಸಾಲ ಸೌಲಭ್ಯಗಳು ಹಾಗು ಸಬ್ಸಿಡಿ ಗಳ ಬಗ್ಗೆ ಸದಾನಂದ ಉಪ್ಪಿನಕುದ್ರು ವಿವರಿಸಿದರು.

ಪ್ರಸನ್ನ ಉಪ್ಪುಂದ ಅವರಿಂದ ಗ್ರಾಮೀಣ ಸಂವಾದ ಕಾರ್ಯಕ್ರಮ ನಡೆಯಿತು.

ಸುನಂದಾ ಗಾಣಿಗ ಪ್ರಾರ್ಥಿಸಿದರು, ಸುಶೀಲ ದೇವಾಡಿಗ ಉಪ್ಪುಂದ ಸ್ವಾಗತಿಸಿದರು, ಅನಿತಾ ಆರ್ ಕೆ ನಿರೂಪಿಸಿ ವಂದಿಸಿದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (5) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)