ದ.ಗ್ರಾ.ಯೋಜನೆ (ರಿ) ಜಡ್ಕಲ್ ವಲಯದ ಬೊಳಂಬಳ್ಳಿ ಒಕ್ಕೂಟದ ಪದಗ್ರಹಣ ಕಾರ್ಯಕ್ರಮ

0
292

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು : ದ.ಗ್ರಾ.ಯೋಜನೆ ರಿ. ಬೈಂದೂರು ಜಡ್ಕಲ್ ವಲಯದ ಬೊಳಂಬಳ್ಳಿ ಒಕ್ಕೂಟದ ಪದಗ್ರಹಣ ಕಾರ್ಯಕ್ರಮ ಸ.ಹಿ.ಪ್ರಾ ಶಾಲೆ ಚಪ್ಪರಿಕೆಯಲ್ಲಿ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲ್ತೋಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಿ. ಅಣ್ಣಪ್ಪ ಶೆಟ್ಟಿ ವಹಿಸಿದರು. ಉದ್ಘಾಟಕರಾಗಿ ಬಿ. ಅಣ್ಣಪ್ಪ ಹೆಗ್ಡೆ ಹಾಗೂ ಜವಬ್ಧಾರಿ ಹಸ್ತಾಂತರವನ್ನು ಯೋಜನಾಧಿಕಾರಿ ಸದಾನಂದ ಕೆ ಹಸ್ತಾಂತರಿಸಿದರು.

ಮುಖ್ಯ ಅತಿಥಿಯಾಗಿ ಸತ್ಯ ಸ್ವರೂಪ ಜಿ, ರಾಮಕೃಷ್ಣ ಕುಟೀರ್ ಎಳಜಿತ್ ಹಾಗೂ ಚಪ್ಪರಿಕೆ ಶಾಲೆ ಮುಖ್ಯ ಶಿಕ್ಷಕರಾದ ಶೇಖರ ಗಾಣಿಗ, ವಲಯಾಧ್ಯಕ್ಷರಾದ ನಾರಾಯಣ ಶೆಟ್ಟಿ, ನೂತನ ವಲಯಧ್ಯಕ್ಷರಾದ ಮಂಜುನಾಥ ಪೂಜಾರಿ, ಒಕ್ಕೂಟದ ಅಧ್ಯಕ್ಷರಾದ ನಾಗೇಶ್ ಗಾಣಿಗ ನೂತನ ಅಧ್ಯಕ್ಷರಾದ ಆನಂದ ನಾಯ್ಕ ಒಕ್ಕೂಟದ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

ವಲಯ ಮೆಲ್ವಚಾರಕರಾದ ಜಯಕರ ನಿರೂಪಿಸಿದರು, ಬಾಬು ಗಾಣಿಗ ಸ್ವಾಗತಿಸಿದರು, ಸೇವಾಪ್ರತಿನಿಧಿ ರೇಷ್ಮಾ ಒಕ್ಕೂಟದ ವರದಿ ವಾಚಿಸಿದರು, ಕು. ಪವಿತ್ರಾ ವಂದಿಸಿದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)