ಮುಲ್ಲಿಬಾರು ಸ.ಹಿ.ಪ್ರಾ. ಶಾಲೆಯಲ್ಲಿ ಮಂಗನ ಕಾಯಿಲೆ ಹಾಗೂ ಜಂತು ಹುಳದಿಂದಾಗುವ ದುಷ್ಪರಿಣಾಮದ ಬಗ್ಗೆ ಮಾಹಿತಿ ಶಿಬಿರ

0
339

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಗ್ರಾಮೀಣ ಮಲೆನಾಡಿನ ಸಹ್ಯಾದ್ರಿಯ ಮಡಿಲಿನಲ್ಲಿರುವ ಮುಲ್ಲಿಬಾರು ಶಾಲೆಯಲ್ಲಿ ಕ್ಯಾಸನೂರು ಕಾಡಿನ ಕಾಯಿಲೆ (ಕೆ.ಎಫ್.ಡಿ)ಅಥವಾ ಮಂಗನ ಕಾಯಿಲೆ ಬಗ್ಗೆ ಹಾಗೂ ಜಂತು ಹುಳದಿಂದಾಗುವ ದುಷ್ಪರಿಣಾಮದ ಬಗ್ಗೆ ಮಾಹಿತಿ ಶಿಬಿರ ನಡೆಯಿತು.

ಕನಾ೯ಟಕ ಸರಕಾರ ಆರೋಗ್ಯ ಇಲಾಖೆ, ಜಿಲ್ಲಾ ಪಂಚಾಯಿತ್ ಸಮಗ್ರ ರೋಗಗಳ ಕಣ್ಗಾವಲು ಯೋಜನೆ, ಜಿಲ್ಲಾ ಸವೇ೯ಕ್ಷಣಾ ಘಟಕ ಉಡುಪಿ ಇವರ ಜಂಟ ಸಹಯೋಗದಲ್ಲಿ ಶಾಲಾ ಶಿಕ್ಷಕರಿಗೆ ಮತ್ತು ವಿದ್ಯಾಥಿ೯ಗಳಿಗೆ ಬೈಂದೂರು ಸಮುದಾಯ ಆರೋಗ್ಯ ಕೇಂದ್ರದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಶ್ರೀಮತಿ ಲಲಿತ ಹಾಗೂ ಕಿರಿಯ ಸಹಾಯಕರಾದ  ಸಂತೋಷ ಎಂ.ಡಿ.ಮತ್ತು ಶ್ರೀ ರಾಘವೇಂದ್ರ ಹಾಗೂ ಆಶಾ ಕಾಯ೯ಕತೆ೯ ಶ್ರೀಮತಿ ದೇವಕಿಯವರು ಕಾಯಿಲೆಯನ್ನು ಹರಡುವ ಉಣ್ಣೆಗಳ ಬಗ್ಗೆ ಮತ್ತು ಅದಕ್ಕೆ ವಹಿಸಬೇಕಾದ ಮುಂಜಾಗ್ರತೆಯ ಬಗ್ಗೆ ಮಾಹಿತಿ ನೀಡಿದರು.

ಈ ಸಂದಭ೯ದಲ್ಲಿ ಶಾಲಾ ಪ್ರಭಾರ ಮುಖ್ಯಶಿಕ್ಷಕ ರಾಮನಾಥ ಮೇಸ್ತ ವೇದಿಕೆಯಲ್ಲಿ ಉಪಸ್ಥಿತರಿದ್ದು, ಸಹಶಿಕ್ಷಕರಾದ ಸುಧಾಕರ ಪಿ.ಬೈಂದೂರು ಸ್ವಾಗತಿಸಿ ಶ್ರೀ ಹಾಲೇಶಪ್ಪ ವಂದಿಸಿದರು.

ಊಟದ ನಂತರ ಎಲ್ಲಾ ವಿದ್ಯಾಥಿ೯ಗಳಿಗೆ ಜಂತುಹುಳ ನಿವಾರಣಾ ಮಾತ್ರೆ(Albendazole) ಗಳನ್ನು ತಿನ್ನಿಸಲಾಯಿತು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)